ಅಗ್ರ ಕ್ರಮಾಂಕದ 6 ಆಟಗಾರರು ಗಳಿಸಿದ್ದು ಕೇವಲ 17 ರನ್, ನಾಲ್ವರು ಖಾತೆ ತೆರೆಯಲಿಲ್ಲ, ಆದರೂ ಪಂದ್ಯ ಗೆದ್ದುಕೊಂಡಿತು..!

| Updated By: ಝಾಹಿರ್ ಯೂಸುಫ್

Updated on: Jan 15, 2022 | 4:18 PM

ಸಾಧಾರಣ ಸವಾಲು ಪಡೆದ ಆಕ್ಲೆಂಡ್ ತಂಡಕ್ಕೆ ಆರಂಭಿಕ ಆಘಾತ ನೀಡುವಲ್ಲಿ ಒಟಾಗೋ ತಂಡದ ಬೌಲರ್​ಗಳು ಯಶಸ್ವಿಯಾದರು. ಕೇವಲ 13 ರನ್​ಗಳಿಸುವಷ್ಟರಲ್ಲಿ ಪ್ರಮುಖ 5 ವಿಕೆಟ್ ಕಳೆದುಕೊಂಡಿತು.

1 / 5
ಒಂದು ತಂಡದ ಅಗ್ರ ಹಾಗೂ ಮಧ್ಯಮ ಕ್ರಮಾಂಕದ ಆಟಗಾರರು ಕೇವಲ 17 ರನ್ ಗಳಿಸಿದರೆ ಆ ತಂಡದ ಸೋಲು ಖಚಿತ ಎಂದೇ ಹೇಳಬಹುದು. ಆದರೆ ಕ್ರಿಕೆಟ್​ನಲ್ಲಿ ಏನು ಬೇಕಾದರೂ ನಡೆಯಬಹುದು ಎಂಬುದಕ್ಕೆ ಮತ್ತೊಂದು ಪಂದ್ಯವು ಸಾಕ್ಷಿಯಾಗಿದೆ. ನ್ಯೂಜಿಲೆಂಡ್‌ನ T20 ಟೂರ್ನಿ ಸೂಪರ್ ಸ್ಮ್ಯಾಶ್‌ನಲ್ಲಿ ಅಂತಹದೊಂದು ರೋಚಕ ಪಂದ್ಯ ನಡೆದಿದೆ.

2 / 5
ಸೂಪರ್ ಸ್ಮ್ಯಾಶ್​ನ 23ನೇ ಪಂದ್ಯದಲ್ಲಿ ಒಟಾಗೋ ತಂಡ ಮೊದಲು ಬ್ಯಾಟ್ ಮಾಡಿತು. ಆಕ್ಲೆಂಡ್ ಬೌಲರ್​ಗಳ ಪರಾಕ್ರಮ ಮುಂದೆ ರನ್​ಗಳಿಸಲು ಪರದಾಡಿದ ಒಟಾಗೋ ತಂಡವು  19.4 ಓವರ್‌ಗಳಲ್ಲಿ ಕೇವಲ 130 ರನ್‌ಗಳಿಗೆ ಆಲೌಟ್ ಆಯಿತು.  ತಂಡದ ಪರ ಆರಂಭಿಕರಾದ ನೀಲ್ ಬ್ರೂಮ್ 17 ಎಸೆತಗಳಲ್ಲಿ 32 ರನ್ ಗಳಿಸಿದ್ದು ಗರಿಷ್ಠ ಸ್ಕೋರ್.

3 / 5
ಸಾಧಾರಣ ಸವಾಲು ಪಡೆದ ಆಕ್ಲೆಂಡ್ ತಂಡಕ್ಕೆ ಆರಂಭಿಕ ಆಘಾತ ನೀಡುವಲ್ಲಿ ಒಟಾಗೋ ತಂಡದ ಬೌಲರ್​ಗಳು ಯಶಸ್ವಿಯಾದರು. ಕೇವಲ 13 ರನ್​ಗಳಿಸುವಷ್ಟರಲ್ಲಿ ಪ್ರಮುಖ 5 ವಿಕೆಟ್ ಕಳೆದುಕೊಂಡಿತು. ಇನ್ನು ತಂಡದ ಮೊತ್ತ 23 ಆಗುವಷ್ಟರಲ್ಲಿ ವಿಕೆಟ್ ಸಂಖ್ಯೆ 6 ಕ್ಕೇರಿತು. ಅಂದರೆ ಆರು ಬ್ಯಾಟರ್​ಗಳಲ್ಲಿ ಇಬ್ಬರು ಸೇರಿ 17 ರನ್​ ಕಲೆಹಾಕಿದ್ದರು. ಇನ್ನು ನಾಲ್ವರು ಶೂನ್ಯಕ್ಕೆ ಔಟಾಗಿದ್ದರು. ಎಡಗೈ ಸ್ಪಿನ್ನರ್ ಅನಾರು ಕಿಚನ್  4 ಓವರ್ ಗಳಲ್ಲಿ ಕೇವಲ 11 ರನ್ ನೀಡಿ 4 ವಿಕೆಟ್ ಪಡೆದಿದ್ದರು.

4 / 5
ಅದಾಗಲೇ 6 ಬ್ಯಾಟರ್​ಗಳು 23 ರನ್​ಗಳಿಸುವಷ್ಟರಲ್ಲಿ ಪೆವಿಲಿಯನ್ ಸೇರಿದ್ದ ಕಾರಣ ಒಟಾಗೋ ಜಯ ಖಚಿತ ಎನ್ನಲಾಗಿತ್ತು. ಆದರೆ ಏಳನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಎಡಗೈ ಆಟಗಾರ ಶಾನ್ ಸೋಲಿಯಾ ಇಡೀ ಪಂದ್ಯದ ಚಿತ್ರಣ ಬದಲಿಸಿದರು.

5 / 5
ಕೇವಲ 54 ಎಸೆತಗಳಲ್ಲಿ 4 ಬೌಂಡರಿ ಹಾಗೂ 3 ಸಿಕ್ಸರ್‌ಗಳ ನೆರವಿನಿಂದ ಅಜೇಯ 67 ರನ್ ಬಾರಿಸಿದರು. ಸೋಲಿಯಾಗೆ ವಿಲ್ ಸೋಮರ್ ವಿಲ್ (27 ಎಸೆತ, 25 ರನ್) ಮತ್ತು ಲಾಕಿ ಫರ್ಗುಸನ್ (5 ಎಸೆತ, 14 ರನ್) ಉತ್ತಮ ಸಾಥ್ ನೀಡಿದರು.  ಅದರಂತೆ  20ನೇ ಓವರ್‌ನ ನಾಲ್ಕನೇ ಎಸೆತದಲ್ಲಿ 131 ರನ್​ಗಳ ಗುರಿಮುಟ್ಟಿಸುವ ಮೂಲಕ ಶಾನ್ ಸೋಲಿಯಾ ತಂಡಕ್ಕೆ 1 ವಿಕೆಟ್​ಗಳ ರೋಚಕ ಜಯ ತಂದುಕೊಟ್ಟರು.

Published On - 4:17 pm, Sat, 15 January 22