ಇದಲ್ಲದೆ, 2019 ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಪುಣೆ ಟೆಸ್ಟ್‌ನಲ್ಲಿ ಕೊಹ್ಲಿ 254 ರನ್‌ಗಳ (ಔಟಾಗದೆ) ಇನ್ನಿಂಗ್ಸ್‌ಗಳನ್ನು ಆಡಿದರು. ಇದು ಟೆಸ್ಟ್‌ನಲ್ಲಿ ಯಾವುದೇ ಭಾರತೀಯ ನಾಯಕನ ಅತಿದೊಡ್ಡ ಇನ್ನಿಂಗ್ಸ್ ಆಗಿದೆ. ವಿಶೇಷವೆಂದರೆ ಎರಡನೇ (ಶ್ರೀಲಂಕಾ ವಿರುದ್ಧ 243) ಮತ್ತು ಮೂರನೇ (ಇಂಗ್ಲೆಂಡ್ ವಿರುದ್ಧ 235) ಸ್ಥಾನದಲ್ಲಿದ್ದಲ್ಲಿ ಕೊಹ್ಹಿಯೇ ಇದ್ದಾರೆ. ಇಷ್ಟೇ ಅಲ್ಲ, ನಾರ್ತ್ ಸೌಂಡ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ 200 ರನ್‌ಗಳ ಇನ್ನಿಂಗ್ಸ್ ವಿದೇಶಿ ಟೆಸ್ಟ್‌ಗಳಲ್ಲಿ ಯಾವುದೇ ಭಾರತೀಯ ನಾಯಕನ ಗರಿಷ್ಠ ಸ್ಕೋರ್ ಆಗಿದೆ.