IPL 2022: ಹೊಸ ತಂಡಗಳಿಗೆ ಸ್ಪೆಷಲ್ ಪಿಕ್ ಆಯ್ಕೆ: ಏನಿದರ ನಿಯಮ?

IPL 2022 Mega Auction: ಐಪಿಎಲ್ ಮೆಗಾ ಹರಾಜು ಫೆಬ್ರವರಿ 12 ಮತ್ತು 13 ರಂದು ಬೆಂಗಳೂರಿನಲ್ಲಿ ನಡೆಸಲು ನಿರ್ಧರಿಸಲಾಗಿದ್ದು, ಜನವರಿ 17 ರೊಳಗೆ ಆಸಕ್ತ ಆಟಗಾರರು ಹೆಸರು ನೋಂದಣಿ ಮಾಡಿಕೊಳ್ಳಲು ಗಡುವು ನೀಡಲಾಗಿದೆ.

Jan 16, 2022 | 7:19 PM
TV9kannada Web Team

| Edited By: Zahir PY

Jan 16, 2022 | 7:19 PM

ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್​ 15 ಗಾಗಿ ಹಳೆಯ 8 ತಂಡಗಳು ಒಟ್ಟು 27 ಆಟಗಾರರನ್ನು ರಿಟೈನ್ ಮಾಡಿಕೊಂಡಿದೆ. ಇದೀಗ ಹೊಸ ಫ್ರಾಂಚೈಸಿಗಳಾದ ಲಕ್ನೋ ಹಾಗೂ ಅಹದಾಬಾದ್ ತಂಡಗಳಿಗೆ ಸ್ಪೆಷಲ್ ಪಿಕ್ ಆಯ್ಕೆಯನ್ನು ನೀಡಲಾಗಿದೆ.

1 / 6
ಅದರಂತೆ ಹೊಸ ಫ್ರಾಂಚೈಸಿಗಳು ಇಬ್ಬರು ಭಾರತೀಯ ಆಟಗಾರರು+ ಒಬ್ಬ ವಿದೇಶಿ ಆಟಗಾರನನ್ನು ಮೆಗಾ ಹರಾಜು ಪಟ್ಟಿಯಿಂದ ನೇರವಾಗಿ ಆಯ್ಕೆ ಮಾಡಿಕೊಳ್ಳಬಹುದು. ಆ ಬಳಿಕವಷ್ಟೇ ಮೆಗಾ ಹರಾಜು ನಡೆಯಲಿದೆ. ಆದರೆ ಹೀಗೆ ಆಯ್ಕೆ ಮಾಡಲು ಕೆಲ ನಿಯಮಗಳು ಅನ್ವಯವಾಗಲಿದೆ.

2 / 6
 ಅಂದರೆ ರಿಟೈನ್ ನಿಯಮದಂದತೆ ಇಲ್ಲೂ ಕೂಡ ಮೂವರು ಆಟಗಾರರು ಆಯ್ಕೆ ಮಾಡಲು 33 ಕೋಟಿ ರೂ. ನಿಗದಿ ಮಾಡಲಾಗಿದೆ. ಅದರಂತೆ ಹೊಸ ಫ್ರಾಂಚೈಸಿಗಳು ಆಯ್ಕೆ ಮಾಡುವ ಮೊದಲ ಆಟಗಾರನಿಗೆ 15 ಕೋಟಿ ರೂ. ನೀಡಬೇಕಾಗುತ್ತದೆ. ಇನ್ನು ಎರಡನೇ ಆಟಗಾರನಿಗೆ 11 ಕೋಟಿ ರೂ. ನೀಡಬೇಕು. ಹಾಗೆಯೇ ಮೂರನೇ ಆಟಗಾರನಿಗೆ 7 ಕೋಟಿ ರೂ. ಎಂದು ನಿಗದಿಪಡಿಸಲಾಗಿದೆ.

3 / 6
ಒಂದು ವೇಳೆ ಹೊಸ ಫ್ರಾಂಚೈಸಿಗಳು ಇಬ್ಬರು ಆಟಗಾರರನ್ನು ಮಾತ್ರ ಆಯ್ಕೆ ಮಾಡಲು ಬಯಸಿದರೆ ಮೊದಲ ಆಟಗಾರನಿಗೆ 14 ಕೋಟಿ ರೂ. ನೀಡಬೇಕು. ಇನ್ನು 2ನೇ ಆಟಗಾರನಿಗೆ 10 ಕೋಟಿ ರೂ. ನೀಡಬೇಕಾಗುತ್ತದೆ. ಇದಾಗ್ಯೂ  ರಾಷ್ಟ್ರೀಯ ತಂಡದಲ್ಲಿ ಆಡದ (ಅನ್​ಕ್ಯಾಪ್ಡ್​) ಆಟಗಾರರನ್ನು ಆಯ್ಕೆ ಮಾಡುವುದಾದರೆ ಅವರಿಗೆ 4 ಕೋಟಿ ರೂ. ನಿಗದಿ ಮಾಡಲಾಗಿದೆ.

4 / 6
 ಹೀಗೆ ಆಯ್ಕೆ ಮಾಡಲಾದ ಮೂರು ಅಥವಾ ಇಬ್ಬರು ಆಟಗಾರರ ಪಟ್ಟಿಯನ್ನು ಜನವರಿ 22 ರೊಳಗೆ ಐಪಿಎಲ್ ಆಡಳಿತ ಮಂಡಳಿಗೆ ಸಲ್ಲಿಸಬೇಕಿದೆ. ಹೀಗಾಗಿ ಲಕ್ನೋ ಹಾಗೂ ಅಹಮದಾಬಾದ್ ತಂಡಗಳು ಆಯ್ಕೆ ಮಾಡಿದ ಆಟಗಾರರ ಅಧಿಕೃತ ಪಟ್ಟಿ ಈ ವಾರದೊಳಗೆ ಹೊರಬೀಳಲಿದೆ.

5 / 6
ಇನ್ನು ಐಪಿಎಲ್ ಮೆಗಾ ಹರಾಜು ಫೆಬ್ರವರಿ 12 ಮತ್ತು 13 ರಂದು ಬೆಂಗಳೂರಿನಲ್ಲಿ ನಡೆಸಲು ನಿರ್ಧರಿಸಲಾಗಿದ್ದು, ಜನವರಿ 17 ರೊಳಗೆ ಆಸಕ್ತ ಆಟಗಾರರು ಹೆಸರು ನೋಂದಣಿ ಮಾಡಿಕೊಳ್ಳಲು ಗಡುವು ನೀಡಲಾಗಿದೆ.

6 / 6

Follow us on

Most Read Stories

Click on your DTH Provider to Add TV9 Kannada