AUS vs NZ: ನಾಯಕನೇ ವಿಲನ್..! ಡಕೌಟ್ ಆಗುವುದನ್ನೇ ಕಾಯಕ ಮಾಡಿಕೊಂಡ ಮಾಜಿ ಆರ್​ಸಿಬಿ ಓಪನರ್

| Updated By: ಪೃಥ್ವಿಶಂಕರ

Updated on: Sep 08, 2022 | 2:47 PM

Aaron Finch: ಕ್ಯಾಲೆಂಡರ್ ವರ್ಷದಲ್ಲಿ ODI ಪಂದ್ಯವೊಂದರಲ್ಲಿ ಐದು ಬಾರಿ 0 ರನ್ ಗಳಿಸಿದ ಆಸ್ಟ್ರೇಲಿಯಾದ ಮೊದಲ ಬ್ಯಾಟ್ಸ್‌ಮನ್ ಎಂಬ ಕುಖ್ಯಾತಿಗೆ ಪಿಂಚ್ ಹೆಸರಾಗಿದ್ದಾರೆ.

1 / 5
ಟಿ20 ವಿಶ್ವಕಪ್ ಇನ್ನಷ್ಟೇ ಆರಂಭವಾಗಬೇಕಿದ್ದು, ಅತಿಥೇಯ ಆಸೀಸ್ ತಂಡಕ್ಕೆ ಆತಂಕ ಎದುರಾಗಿದೆ. ಅದಕ್ಕೆ ಕಾರಣ ಅದರ ನಾಯಕ  ಆರನ್ ಪಿಂಚ್. ವಾಸ್ತವವಾಗಿ ಫಿಂಚ್ ತುಂಬಾ ಕೆಟ್ಟ ಫಾರ್ಮ್‌ನಲ್ಲಿದ್ದು, ಅವರ ಬ್ಯಾಟ್ ರನ್ ಗಳಿಸುವುದನ್ನೇ ಮರೆತಂದಿದೆ. ಜೊತೆಗೆ ಈಗ ಅವರು ಖಾತೆಯನ್ನು ತೆರೆಯಲು ಸಾಧ್ಯವಾಗುತ್ತಿಲ್ಲ. ನ್ಯೂಜಿಲೆಂಡ್ ವಿರುದ್ಧದ ಎರಡನೇ ODIನಲ್ಲಿ, ಆರನ್ ಫಿಂಚ್, ಮ್ಯಾಟ್ ಹೆನ್ರಿ ಎರಡನೇ ಎಸೆತದಲ್ಲಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು.

2 / 5
ಅಂದಹಾಗೆ, ಏಕದಿನ ಮಾತ್ರವಲ್ಲದೆ ಟಿ20ಯಲ್ಲೂ ಫಿಂಚ್ ಕಳಪೆ ಪ್ರದರ್ಶನ ಮುಂದುವರಿದಿದೆ. ಈ ಬಲಗೈ ಓಪನರ್ ಆರಂಭಿಕರಾಗಿ ಅತಿ ಹೆಚ್ಚು ಬಾರಿ 0 ಗೆ ಔಟಾದ ನಾಯಕ ಎನಿಸಿಕೊಂಡಿದ್ದಾರೆ. ನಾಯಕನಾಗಿ ಫಿಂಚ್ 6 ​​ಬಾರಿ ಶೂನ್ಯಕ್ಕೆ ಔಟಾಗಿದ್ದಾರೆ. ಈ ಆಸೀಸ್ ನಾಯಕನ ನಂತರ ಬಾಬರ್ ಆಜಮ್ 4 ಬಾರಿ ಶೂನ್ಯಕ್ಕೆ ಔಟಾಗಿದ್ದಾರೆ.

3 / 5
ನ್ಯೂಜಿಲೆಂಡ್ ವಿರುದ್ಧದ ಎರಡನೇ ODIನಲ್ಲಿ, ಆರನ್ ಫಿಂಚ್ 0 ರನ್ ಗಳಿಸಿ ಔಟಾದರು ಮತ್ತು ಇದರೊಂದಿಗೆ ಅವರು ತಮ್ಮ ಹೆಸರಿನಲ್ಲಿ ಅನಗತ್ಯ ದಾಖಲೆಯನ್ನು ಮಾಡಿದರು. ಫಿಂಚ್ ಒಂದು ಕ್ಯಾಲೆಂಡರ್ ವರ್ಷದಲ್ಲಿ 0 ಗೆ ಹೆಚ್ಚು ಬಾರಿ ಔಟಾದ ಆಸ್ಟ್ರೇಲಿಯಾದ ನಾಯಕ ಎಂಬ ಕುಖ್ಯಾತಿಗೆ ಪಾತ್ರರಾಗಿದ್ದಾರೆ.

4 / 5
ಆರನ್ ಫಿಂಚ್ ಅತ್ಯಂತ ಕಳಪೆ ಫಾರ್ಮ್‌ನಿಂದ ಬಳಲುತ್ತಿದ್ದು, ಫಿಂಚ್ ಈ ವರ್ಷ 13 ODI ಇನ್ನಿಂಗ್ಸ್‌ಗಳಲ್ಲಿ ಕೇವಲ 13 ಸರಾಸರಿಯಲ್ಲಿ ರನ್ ಗಳಿಸಿದ್ದಾರೆ. ಜೊತೆಗೆ ಈ ಕ್ಯಾಲೆಂಡರ್ ವರ್ಷದಲ್ಲಿ ಫಿಂಚ್ ಬರೋಬ್ಬರಿ  5 ಬಾರಿ ಶೂನ್ಯಕ್ಕೆ ಔಟಾಗಿದ್ದಾರೆ.

5 / 5
ಆಸ್ಟ್ರೇಲಿಯಾದ ODI ಮತ್ತು T20 ನಾಯಕ ಆರೋನ್ ಫಿಂಚ್ ನಿವೃತ್ತಿಗೆ ಮುಂದಾಗಿದ್ದಾರೆ. ಈ ದಿಗ್ಗಜ ಬಲಗೈ ಬ್ಯಾಟ್ಸ್‌ಮನ್ ಏಕದಿನ ಮಾದರಿಗೆ ವಿದಾಯ ಹೇಳುವ ಮನಸ್ಸು ಮಾಡಿದ್ದಾರೆ. ಆಸ್ಟ್ರೇಲಿಯಾ ವೆಬ್‌ಸೈಟ್ ನ್ಯೂಸ್ ಕಾರ್ಪ್‌ನ ಸುದ್ದಿ ಪ್ರಕಾರ, ಕಳಪೆ ಫಾರ್ಮ್‌ನಿಂದಾಗಿ ಫಿಂಚ್ ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.