T20 World Cup 2022: ಪವರ್‌ಪ್ಲೇನಲ್ಲಿ ಪವರ್ ಇಲ್ಲ..! ಲಂಕಾ ಎದುರು ಕಳಪೆ ದಾಖಲೆ ಬರೆದ ಆಸ್ಟ್ರೇಲಿಯಾ

Edited By:

Updated on: Oct 26, 2022 | 11:40 AM

T20 World Cup 2022: ಟಿ20 ಕ್ರಿಕೆಟ್​ನಲ್ಲಿ ಬ್ಯಾಟಿಂಗ್ ಮಾಡುವ ತಂಡಕ್ಕೆ ಮೊದಲ ಆರು ಓವರ್‌ಗಳ ಪವರ್‌ಪ್ಲೇ ಬಹಳ ಮುಖ್ಯ. ಹೀಗಾಗಿ ಪ್ರತಿ ತಂಡವು ಅದರಲ್ಲಿ ಬೌಂಡರಿ ಹಾಗೂ ಸಿಕ್ಸರ್​ಗಳನ್ನು ಬಾರಿಸುವುದರೊಂದಿಗೆ ಗರಿಷ್ಠ ರನ್ ಗಳಿಸಲು ಪ್ರಯತ್ನಿಸುತ್ತದೆ.

1 / 6
ಮಂಗಳವಾರ ಪರ್ತ್‌ನಲ್ಲಿ ನಡೆದ ಪಂದ್ಯದಲ್ಲಿ ಶ್ರೀಲಂಕಾವನ್ನು ಸೋಲಿಸುವ ಮೂಲಕ ಆಸ್ಟ್ರೇಲಿಯಾ ಐಸಿಸಿ ಟಿ20 ವಿಶ್ವಕಪ್-2022 ನಲ್ಲಿ ತನ್ನ ಗೆಲುವಿನ ಖಾತೆಯನ್ನು ತೆರೆದಿದೆ. ಆದರೆ ಈ ಪಂದ್ಯದಲ್ಲಿ ಆಸ್ಟ್ರೇಲಿಯ ತಂಡ ಗೆದ್ದರು ಸಹ ತನ್ನ ಹೆಸರಿಗೆ ಬೇಡವಾದ ದಾಖಲೆಯೊಂದನ್ನು ಬರೆದುಕೊಂಡಿದೆ.

ಮಂಗಳವಾರ ಪರ್ತ್‌ನಲ್ಲಿ ನಡೆದ ಪಂದ್ಯದಲ್ಲಿ ಶ್ರೀಲಂಕಾವನ್ನು ಸೋಲಿಸುವ ಮೂಲಕ ಆಸ್ಟ್ರೇಲಿಯಾ ಐಸಿಸಿ ಟಿ20 ವಿಶ್ವಕಪ್-2022 ನಲ್ಲಿ ತನ್ನ ಗೆಲುವಿನ ಖಾತೆಯನ್ನು ತೆರೆದಿದೆ. ಆದರೆ ಈ ಪಂದ್ಯದಲ್ಲಿ ಆಸ್ಟ್ರೇಲಿಯ ತಂಡ ಗೆದ್ದರು ಸಹ ತನ್ನ ಹೆಸರಿಗೆ ಬೇಡವಾದ ದಾಖಲೆಯೊಂದನ್ನು ಬರೆದುಕೊಂಡಿದೆ.

2 / 6

ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ಎದುರು ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ 158 ರನ್‌ಗಳ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಆಸೀಸ್ ಪಡೆ ಸುಲಭವಾಗಿ ಬೆನ್ನಟ್ಟಿತ್ತು. ಆದರೆ ಈ ಪಂದ್ಯದಲ್ಲಿ ಆಸೀಸ್ ಪಡೆ ಮುಜುಗರದ ದಾಖಲೆಯೊಂದನ್ನು ಬರೆದಿದೆ.

3 / 6

ಟಿ20 ಕ್ರಿಕೆಟ್​ನಲ್ಲಿ ಬ್ಯಾಟಿಂಗ್ ಮಾಡುವ ತಂಡಕ್ಕೆ ಮೊದಲ ಆರು ಓವರ್‌ಗಳ ಪವರ್‌ಪ್ಲೇ ಬಹಳ ಮುಖ್ಯ. ಹೀಗಾಗಿ ಪ್ರತಿ ತಂಡವು ಅದರಲ್ಲಿ ಬೌಂಡರಿ ಹಾಗೂ ಸಿಕ್ಸರ್​ಗಳನ್ನು ಬಾರಿಸುವುದರೊಂದಿಗೆ ಗರಿಷ್ಠ ರನ್ ಗಳಿಸಲು ಪ್ರಯತ್ನಿಸುತ್ತದೆ. ಆದರೆ ಆಸ್ಟ್ರೇಲಿಯಾ ತಂಡದ ಬ್ಯಾಟ್ಸ್‌ಮನ್‌ಗಳಿ್ಎ ಶ್ರೀಲಂಕಾ ವಿರುದ್ಧದ ಪವರ್‌ಪ್ಲೇನಲ್ಲಿ ಒಂದೇ ಒಂದು ಬೌಂಡರಿ ಹೊಡೆಯಲು ಸಾಧ್ಯವಾಗಲಿಲ್ಲ.

4 / 6

ಪವರ್‌ಪ್ಲೇಯ ಆರು ಓವರ್‌ಗಳಲ್ಲಿ ಆಸ್ಟ್ರೇಲಿಯಾ ಒಂದು ವಿಕೆಟ್ ನಷ್ಟಕ್ಕೆ 33 ರನ್ ಗಳಿಸಿತ್ತು. ಈ ಒಂದು ವಿಕೆಟ್ ಡೇವಿಡ್ ವಾರ್ನರ್ ರೂಪದಲ್ಲಿ ಬಿತ್ತು. ಪವರ್‌ಪ್ಲೇ ಮುಗಿದಾಗ, ಮಿಚೆಲ್ ಮಾರ್ಷ್ ಮತ್ತು ನಾಯಕ ಆರನ್ ಫಿಂಚ್ ಆಡುತ್ತಿದ್ದರು ಆದರೆ ಈ ಮೂವರ ಬ್ಯಾಟ್‌ನಿಂದ ಒಂದೇ ಒಂದು ಬೌಂಡರಿ ಅಥವಾ ಸಿಕ್ಸರ್ ಬರಲಿಲ್ಲ.

5 / 6

ಫಿಂಚ್ ಮತ್ತು ವಾರ್ನರ್‌ರಂತಹ ಬಿರುಸಿನ ಆರಂಭಿಕ ಆಟಗಾರರನ್ನು ಹೊಂದಿರುವ ಆಸ್ಟ್ರೇಲಿಯಾ ತಂಡಕ್ಕೆ ಟಿ20 ಅಂತರಾಷ್ಟ್ರೀಯ ಪವರ್‌ಪ್ಲೇನಲ್ಲಿ ಒಂದೇ ಒಂದು ಬೌಂಡರಿ ಹೊಡೆಯಲು ಸಾಧ್ಯವಾಗದಿರುವುದು ಇದೇ ಮೊದಲು. ಆದರೆ ತಂಡದ ಖಾತೆಗೆ ಹೆಚ್ಚುವರಿ ರನ್‌ಗಳ ರೂಪದಲ್ಲಿ ಎರಡು ಬೌಂಡರಿಗಳು ಬಂದವಾದರೂ ಬ್ಯಾಟ್ಸ್‌ಮನ್‌ಗಳ ಬ್ಯಾಟ್​ನಿಂದ ಒಂದೂ ಬರಲಿಲ್ಲ.

6 / 6

ಈ ಮೂಲಕ ಟಿ20 ವಿಶ್ವಕಪ್‌ನ ಪವರ್‌ಪ್ಲೇನಲ್ಲಿ ಬೌಂಡರಿ ಗಳಿಸಲಾಗದ ಮೂರನೇ ತಂಡ ಎಂಬ ಕುಖ್ಯಾತಿಗೆ ಆಸೀಸ್ ತಲೆಕೊಟ್ಟಿದೆ. ಇದಕ್ಕೂ ಮುನ್ನ 2014ರ ವಿಶ್ವಕಪ್‌ನಲ್ಲಿ ಪಾಕಿಸ್ತಾನ ಮತ್ತು ವೆಸ್ಟ್ ಇಂಡೀಸ್ ನಡುವಿನ ಪಂದ್ಯದಲ್ಲಿ ಇದು ಸಂಭವಿಸಿತ್ತು. ಆ ಪಂದ್ಯದಲ್ಲಿ ಪಾಕಿಸ್ತಾನ ತಂಡಕ್ಕೆ ಒಂದೇ ಒಂದು ಬೌಂಡರಿ ಗಳಿಸಲು ಸಾಧ್ಯವಾಗಿರಲಿಲ್ಲ. ತದನಂತರ ಕಳೆದ ವರ್ಷ ಪಾಕಿಸ್ತಾನ ಮತ್ತು ಬಾಂಗ್ಲಾದೇಶ ನಡುವಿನ ಪಂದ್ಯದಲ್ಲೂ ಈ ಘಟನೆ ಮರುಕಳಿಸಿತ್ತು.

Loading...
Unable to load recommendations.
Follow Us