Updated on: Oct 26, 2022 | 10:59 PM
ಟಿ20 ವಿಶ್ವಕಪ್ನ ಸೂಪರ್-12 ಪಂದ್ಯಗಳು ಶುರುವಾಗಿದೆ. ಈಗಾಗಲೇ ಎಲ್ಲಾ ತಂಡಗಳ ಒಂದೊಂದು ಪಂದ್ಯ ಮುಗಿದಿವೆ. ಇದರ ನಡುವೆ ಟೀಮ್ ಇಂಡಿಯಾದ ಮಾಜಿ ಆಟಗಾರ ರಾಬಿನ್ ಉತ್ತಪ್ಪ ಸೆಮಿಫೈನಲ್ ಪ್ರವೇಶಿಸುವ 4 ತಂಡಗಳನ್ನು ಹೆಸರಿಸಿದ್ದಾರೆ.
ಅಚ್ಚರಿ ಎಂದರೆ ರಾಬಿನ್ ಉತ್ತಪ್ಪ ಆಯ್ಕೆ ಮಾಡಿದ ನಾಲ್ಕು ತಂಡಗಳಲ್ಲಿ ಟೀಮ್ ಇಂಡಿಯಾ ಇಲ್ಲ. ಅಂದರೆ ಭಾರತ ತಂಡವು ಸೆಮಿಫೈನಲ್ ಹಂತಕ್ಕೆ ಬರುವುದಿಲ್ಲ ಎಂದು ಉತ್ತಪ್ಪ ಅಭಿಪ್ರಾಯಪಟ್ಟಿದ್ದಾರೆ.
ಇನ್ನು ಈ ಬಾರಿ ಆಸ್ಟ್ರೇಲಿಯಾದಲ್ಲಿ ಟಿ20 ವಿಶ್ವಕಪ್ ನಡೆಯುತ್ತಿರುವುದರಿಂದ ಅವರಿಗೆ ತವರಿನ ಬೆಂಬಲ ಸಿಗಲಿದೆ. ಹೀಗಾಗಿ ಆರೋನ್ ಫಿಂಚ್ ಪಡೆಯು ನಾಕೌಟ್ ಹಂತಕ್ಕೆ ಎಂಟ್ರಿ ಕೊಡಲಿದೆ ಎಂದು ಕನ್ನಡಿಗ ತಿಳಿಸಿದ್ದಾರೆ.
ಅದರಂತೆ ರಾಬಿನ್ ಉತ್ತಪ್ಪ ಆಯ್ಕೆ ಮಾಡಿದ ನಾಲ್ಕು ಸೆಮಿಫೈನಲಿಸ್ಟ್ ತಂಡಗಳು ಹೀಗಿವೆ....
ಆಸ್ಟ್ರೇಲಿಯಾ
ಇಂಗ್ಲೆಂಡ್
ಸೌತ್ ಆಫ್ರಿಕಾ
ಪಾಕಿಸ್ತಾನ್
2007 ರ ಟಿ20 ವಿಶ್ವಕಪ್ ಚಾಂಪಿಯನ್ ತಂಡದ ಭಾಗವಾಗಿದ್ದ ರಾಬಿನ್ ಉತ್ತಪ್ಪ ಹೇಳಿರುವ ಭವಿಷ್ಯವು ನಿಜವಾಗಲಿದೆಯಾ ಕಾದು ನೋಡಬೇಕಿದೆ.