AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಏಕದಿನ ಕ್ರಿಕೆಟ್​ನಲ್ಲಿ ಗ್ಲೆನ್ ಮ್ಯಾಕ್ಸ್​ವೆಲ್, ಸ್ಟೀವ್ ಸ್ಮಿತ್ ಯುಗಾಂತ್ಯ

Steve Smith and Glenn Maxwell: ಏಕದಿನ ಕ್ರಿಕೆಟ್​ನಲ್ಲಿ ಸ್ಟೀವ್ ಸ್ಮಿತ್ ಹಾಗೂ ಗ್ಲೆನ್ ಮ್ಯಾಕ್ಸ್​ವೆಲ್ ಯುಗಾಂತ್ಯವಾಗಿದೆ. ಇಬ್ಬರು ಆಟಗಾರರು ಈಗಾಗಲೇ ನಿವೃತ್ತಿ ಘೋಷಿಸಿದ್ದು, ಅದರಂತೆ ಇದೀಗ ಪ್ರಮುಖ ಆಟಗಾರರಿಬ್ಬರು ಇಲ್ಲದೆ ಆಸ್ಟ್ರೇಲಿಯಾ ತಂಡ ಸೌತ್ ಆಫ್ರಿಕಾ ವಿರುದ್ಧ ಏಕದಿನ ಸರಣಿ ಆಡುತ್ತಿದೆ. ಮೂರು ಪಂದ್ಯಗಳ ಈ ಸರಣಿಯ ಮೊದಲ ಮ್ಯಾಚ್ ಕೈರ್ನ್ಸ್​ನ ಕಝೆಲಿ ಸ್ಟೇಡಿಯಂನಲ್ಲಿ ನಡೆಯುತ್ತಿದೆ.

ಝಾಹಿರ್ ಯೂಸುಫ್
|

Updated on: Aug 19, 2025 | 10:31 AM

Share
ಆಸ್ಟ್ರೇಲಿಯಾ ಹಾಗೂ ಸೌತ್ ಆಫ್ರಿಕಾ ನಡುವಣ ಏಕದಿನ ಸರಣಿ ಇಂದಿನಿಂದ (ಆಗಸ್ಟ್ 19) ಶುರುವಾಗಿದೆ. ಈ ಸರಣಿಯಲ್ಲಿ ಸ್ಟೀವ್ ಸ್ಮಿತ್ ಹಾಗೂ ಗ್ಲೆನ್ ಮ್ಯಾಕ್ಸ್​ವೆಲ್ ಕಾಣಿಸಿಕೊಳ್ಳುವುದಿಲ್ಲ ಎಂಬುದು ವಿಶೇಷ. ಅಂದರೆ ಆಸ್ಟ್ರೇಲಿಯಾ ಪರ ದಶಕಗಳ ಕಾಲ ಏಕದಿನ ಪಂದ್ಯಗಳನ್ನಾಡಿದ್ದ ಸ್ಮಿತ್ ಹಾಗೂ ಮ್ಯಾಕ್ಸ್​ವೆಲ್ ಇಲ್ಲದೆ ಇದೇ ಮೊದಲ ಬಾರಿ ಆಸೀಸ್ ಪಡೆ ಕಣಕ್ಕಿಳಿಯುತ್ತಿದೆ. ಇದರಿಂದಿಗೆ ಏಕದಿನ ಕ್ರಿಕೆಟ್​ನಲ್ಲಿ ಸ್ಟಾರ್ ಆಟಗಾರಿಬ್ಬರ ಯುಗಾಂತ್ಯವಾದಂತಾಗಿದೆ.

1 / 5
ಆಸ್ಟ್ರೇಲಿಯಾ ಪರ 170 ಏಕದಿನ ಪಂದ್ಯಗಳನ್ನಾಡಿರುವ ಸ್ಟೀವ್ ಸ್ಮಿತ್ 155 ಇನಿಂಗ್ಸ್​ಗಳಲ್ಲಿ ಬ್ಯಾಟ್ ಬೀಸಿದ್ದಾರೆ. ಈ ವೇಳೆ 12 ಶತಕ ಹಾಗೂ 35 ಅರ್ಧಶತಕಗಳೊಂದಿಗೆ ಒಟ್ಟು 5800 ರನ್ ಕಲೆಹಾಕಿದ್ದಾರೆ. ಇನ್ನು ಸ್ಮಿತ್ ಅವರನ್ನು ಕಳೆದ ಟಿ20 ವಿಶ್ವಕಪ್ ವೇಳೆ ಆಯ್ಕೆಗೆ ಪರಿಗಣಿಸಲಾಗಿಲ್ಲ. ಇದಾಗ್ಯೂ ಅವರು ಟಿ20 ಮತ್ತು ಟೆಸ್ಟ್ ತಂಡಗಳಲ್ಲಿ ಮುಂದುವರೆಯುವುದಾಗಿ ತಿಳಿಸಿದ್ದಾರೆ. ಅದರಂತೆ ಮುಂಬರುವ ದಿನಗಳಲ್ಲಿ ಸ್ಮಿತ್ ಆಸ್ಟ್ರೇಲಿಯಾ ಟೆಸ್ಟ್ ತಂಡದಲ್ಲಿ ಮಾತ್ರ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.

2 / 5
ಇನ್ನು ಆಸ್ಟ್ರೇಲಿಯಾ ಪರ ಈವರೆಗೆ 149 ಏಕದಿನ ಪಂದ್ಯಗಳನ್ನಾಡಿರುವ ಗ್ಲೆನ್ ಮ್ಯಾಕ್ಸ್​ವೆಲ್ 136 ಇನಿಂಗ್ಸ್​ಗಳಲ್ಲಿ ಬ್ಯಾಟ್ ಬೀಸಿದ್ದಾರೆ. ಈ ವೇಳೆ 3149 ಎಸೆತಗಳನ್ನು ಎದುರಿಸಿರುವ ಅವರು ಒಟ್ಟು 3990 ರನ್ ಕಲೆಹಾಕಿದ್ದಾರೆ. ಇದರ ನಡುವೆ ಒಂದು ದ್ವಿಶತಕ ಹಾಗೂ 4 ಶತಕ ಮತ್ತು 23 ಅರ್ಧಶತಕಗಳನ್ನು ಬಾರಿಸಿದ್ದಾರೆ.

3 / 5
ಹಾಗೆಯೇ ಬೌಲಿಂಗ್ ಮೂಲಕ ಕೂಡ ಕೊಡುಗೆ ನೀಡಿರುವ ಗ್ಲೆನ್ ಮ್ಯಾಕ್ಸ್​ವೆಲ್ 119 ಇನಿಂಗ್ಸ್​ಗಳಲ್ಲಿ ಚೆಂಡೆಸೆದಿದ್ದು, ಈ ವೇಳೆ 4002 ಎಸೆತಗಳಲ್ಲಿ 3644 ರನ್ ನೀಡುವ ಮೂಲಕ ಒಟ್ಟು 77 ವಿಕೆಟ್​ಗಳನ್ನು ಕಬಳಿಸಿದ್ದಾರೆ. ಈ ಮೂಲಕ ಮ್ಯಾಕ್ಸ್​ವೆಲ್​ ಆಸ್ಟ್ರೇಲಿಯಾ ಪರ ಏಕದಿನ ಕ್ರಿಕೆಟ್​ನಲ್ಲಿ 3 ಸಾವಿರ ರನ್ ಹಾಗೂ 50 ಕ್ಕಿಂತ ಹೆಚ್ಚು ವಿಕೆಟ್ ಪಡೆದ ಆಲ್​ರೌಂಡರ್​ಗಳಲ್ಲಿ ಗುರುತಿಸಿಕೊಂಡಿದ್ದಾರೆ.

4 / 5
ಸದ್ಯ ಏಕದಿನ ಕ್ರಿಕೆಟ್​ಗೆ ವಿದಾಯ ಹೇಳಿರುವ ಗ್ಲೆನ್ ಮ್ಯಾಕ್ಸ್​ವೆಲ್ 2026ರ ಟಿ20 ವಿಶ್ವಕಪ್ ಆಡುವ ವಿಶ್ವಾಸದಲ್ಲಿದ್ದಾರೆ. ಈ ವಿಶ್ವಕಪ್​ನೊಂದಿಗೆ 36 ವರ್ಷದ ಮ್ಯಾಕ್ಸಿ ಚುಟುಕು ಕ್ರಿಕೆಟ್​ಗೆ ಗುಡ್ ಬೈ ಹೇಳುವ ನಿರೀಕ್ಷೆಯಿದೆ. ಹೀಗಾಗಿ ಮುಂಬರುವ ಟಿ20 ವಿಶ್ವಕಪ್ ಆಸ್ಟ್ರೇಲಿಯಾ ಪರ ಮ್ಯಾಕ್ಸ್​ವೆಲ್ ಆಡಲಿರುವ ಕೊನೆಯ ಟೂರ್ನಿ ಆಗಿರಲಿದೆ.

5 / 5
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ

NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ

ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!

ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ

ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್

ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ

ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು

ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ

ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!