Avesh Khan: ರೋಚಕ ಜಯ ಸಾಧಿಸುತ್ತಿದ್ದಂತೆ ಹೆಲ್ಮೆಟ್ ತೆಗೆದು ಮೈದಾನಕ್ಕೆ ಎಸೆದ ಆವೇಶ್ ಖಾನ್: ಬಿಸಿಸಿಯಿಂದ ಬಂತು ಪತ್ರ

Faf Duplessis, RCB vs LSG IPL 2023: ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಲಖನೌ ಸೂಪರ್ ಜೇಂಟ್ಸ್ ನಡುವಣ ಪಂದ್ಯ ಕೆಲ ವಿವಾದಗಳಿಗೆ ಸಾಕ್ಷಿಯಾಗಿದೆ. ಅಮಿತ್ ಮಿಶ್ರಾ ಬಳಿಕ ಎಲ್​ಎಸ್​ಜಿ ಬೌಲರ್ ಆವೇಶ್ ಖಾನ್ ಕೂಡ ತಪ್ಪೆಸಗಿದ್ದಾರೆ.

Vinay Bhat
|

Updated on:Apr 11, 2023 | 12:09 PM

ಸೋಮವಾರ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಲಖನೌ ಸೂಪರ್ ಜೇಂಟ್ಸ್ ನಡುವಣ ಪಂದ್ಯ ಅಂದುಕೊಂಡಂತೆ ರಣ ರೋಚಕವಾಗಿತ್ತು. ಜೊತೆಗೆ ಕೆಲ ಕುತೂಹಲಕಾರಿ ಘಟನೆಗಳಿಗೆ, ವಿವಾದಗಳಿಗೆ ಸಾಕ್ಷಿಯಾಯಿತು.

1 / 8
ಲಖನೌ ಸೂಪರ್ ಜೇಂಟ್ಸ್ ತಂಡದ ಹಿರಿಯ ಸ್ಪಿನ್ನರ್ ಅಮಿತ್ ಮಿಶ್ರಾ ಚೆಂಡಿನ ಹೊಳಪು ನಿರ್ವಹಿಸಲು ಎಂಜಲು ಬಳಸಿ ಐಸಿಸಿ ನಿಯಮವನ್ನು ಉಲ್ಲಂಘಿಸಿ ಅನಗತ್ಯವಾಗಿ ವಿವಾದವೊಂದನ್ನು ತಮ್ಮ ಮೈಮೇಲೆ ಹಾಕಿಕೊಂಡಿದ್ದಾರೆ. ಇದರ ಜೊತೆಗೆ ಎಲ್​ಎಸ್​ಜಿ ತಂಡದ ಮತ್ತೊಬ್ಬ ಬೌಲರ್ ಆವೇಶ್ ಖಾನ್ ಕೂಡ ತಪ್ಪೆಸಗಿದ್ದಾರೆ.

2 / 8
20ನೇ ಓವರ್​ನ ಕೊನೆಯ ಎಸೆತದಲ್ಲಿ ಲಖನೌ ಗೆಲುವಿಗೆ ಒಂದು ರನ್ ಬೇಕಿತ್ತು. ಸ್ಟ್ರೈಕ್​ನಲ್ಲಿ ಆವೇಶ್ ಖಾನ್ ಇದ್ದರು. ಆದರೆ, ಚೆಂಡು ಆವೇಶ್ ಬ್ಯಾಟ್​ಗೆ ತಾಗದೆ ಕೀಪರ್ ಸೈರಿತು. ಕೀಪರ್ ದಿನೇಶ್ ಕಾರ್ತಿಕ್ ವಿಕೆಟ್​ಗೆಂದು ಎಸೆದರೂ ಅದು ಗುರಿ ತಪ್ಪಿತು. ಅತ್ತ ಆವೇಶ್ ಒಂದು ರನ್ ಕಲೆಹಾಕಿ ಲಖನೌ ಸೂಪರ್ ಜೇಂಟ್ಸ್ ರೋಚಕ ಜಯ ಸಾಧಿಸಿತು.

3 / 8
ಆವೇಶ್ ಖಾನ್ ನಾನ್​ಸ್ಟ್ರೈಕರ್ ಕಡೆ ಬಂದು ಒಂದು ರನ್ ಪೂರ್ಣಗೊಳಿಸಿದ ಸಂದರ್ಭ ವಿಶೇಷವಾಗಿ ಸಂಭ್ರಮಾಚರಣೆ ಮಾಡಿದ್ದಾರೆ. ತಾವು ಹಾಕಿಕೊಂಡಿದ್ದ ಹೆಲ್ಮೆಟ್ ಅನ್ನು ಕೈಯಿಂದ ತೆಗೆದು ಮೈದಾನದ ಕೆಳಕ್ಕೆ ಜೋರಾಗಿ ಎಸೆದಿದ್ದಾರೆ. ಇದು ಬಿಸಿಸಿಐ ನಿರ್ಮಿಸಿರುವ ಐಪಿಎಲ್​ನ ನೀತಿ ಸಂಹಿತೆಯ 2.2 ಹಂತ 1 ಅಪರಾಧವಾಗಿದೆ.

4 / 8
ಆವೇಶ್ ಖಾನ್​ಗೆ ಬಿಸಿಸಿಐ ಈ ಬಗ್ಗೆ ಎಚ್ಚರಿಕೆ ನೀಡಿದೆ. ಈ ಅಪರಾಧಕ್ಕಾಗಿ ಆವೇಶ್ ವಿಧಿಸಲಾದ ದಂಡವನ್ನು ಒಪ್ಪಿಕೊಂಡಿದ್ದಾರೆ. ಲೆವೆಲ್‌ 1 ಅಪರಾಧಕ್ಕೆ ಮ್ಯಾಚ್‌ ರೆಫ್ರಿ ನಿರ್ಧಾರ ಅಂತಿಮವಾಗಿರುತ್ತದೆ ಮತ್ತು ಇದಕ್ಕೆ ಸಂಬಂಧಪಟ್ಟವರು ಬದ್ಧ ವಾಗಿರಬೇಕಾಗುತ್ತದೆ.

5 / 8
ಇನ್ನು ಆರ್​ಸಿಬಿ ನಾಯಕ ಫಾಫ್ ಡುಪ್ಲೆಸಿಸ್ ಅವರಿಗೂ ದಂಡ ವಿಧಿಸಲಾಗಿದೆ. ನಿಧಾನಗತಿಯಲ್ಲಿ ಓವರ್ ಮುಗಿಸಿದ್ದಕ್ಕಾಗಿ ಸ್ಲೋ ಓವರ್ ರೇಟ್ ಎಂದು ಡುಪ್ಲೆಸಿಸ್​ಗೆ 12 ಲಕ್ಷ ರೂ. ದಂಡ ಹಾಕಲಾಗಿದೆ. ಈ ಪಂದ್ಯದ ಕೊನೆಯ 20ನೇ ಓವರ್ ವೇಳೆ ಆರ್​ಸಿಬಿ ನಿಗದಿ ಮಾಡಿದ ಸಮಯಕ್ಕಿಂತ ಎರಡು ಓವರ್ ಹಿಂದಿತ್ತು.

6 / 8
ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್​ಗೆ ಇಳಿದ ಆರ್​ಸಿಬಿ ಎರಡು ವಿಕೆಟ್​ ನಷ್ಟಕ್ಕೆ 212 ರನ್​ ಗಳಿಸಿತು. ಕೊಹ್ಲಿ 61 ರನ್, ಡುಪ್ಲೆಸಿಸ್​ ಅಜೇಯ 79 ರನ್ ಮತ್ತು ಗ್ಲೆನ್​ ಮ್ಯಾಕ್ಸ್​ವೆಲ್​ 59 ರನ್ ಸಿಡಿಸಿದರು.

7 / 8
ಗುರಿ ಬೆನ್ನತ್ತಿದ ಲಖನೌ ತಂಡಕ್ಕೆ ಆರ್​ಸಿಬಿ ಬೌಲರ್​ಗಳು ಆರಂಭದಲ್ಲಿ ಕಾಡಿದರು. ಆದರೆ, ಮಧ್ಯಮ ಕ್ರಮಾಂಕದಲ್ಲಿ ಮಾರ್ಕಸ್ ಸ್ಟೊಯಿನಿಸ್ 65 ರನ್ ಮತ್ತು ನಿಕೋಲಾಸ್ ಪೂರನ್ 62 ರನ್ ಚಚ್ಚಿ ಆರ್​ಸಿಬಿ ಕೈಯಲ್ಲಿದ್ದ ಪಂದ್ಯವನ್ನು ಕಸಿದರು. ಎಲ್​ಎಸ್​ಜಿ 1 ವಿಕೆಟ್​ನಿಂದ ಗೆದ್ದು ಬೀಗಿತು.

8 / 8

Published On - 12:09 pm, Tue, 11 April 23

Follow us
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ

ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ

Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?

ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್

ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್

ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ