ಶ್ರೀಲಂಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಅಫ್ಘಾನಿಸ್ತಾನ್ ತಂಡ ವಿರೋಚಿತ ಪ್ರದರ್ಶನ ನೀಡಿದೆ. ಪೆಲ್ಲೆಕಲೆ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ಪರ ಪಾತುಮ್ ನಿಸ್ಸಂಕಾ (210) ಭರ್ಜರಿ ದ್ವಿಶತಕ ಬಾರಿಸಿದ್ದರು. ಈ ಡಬಲ್ ಸೆಂಚುರಿ ನೆರವಿನಿಂದ ಶ್ರೀಲಂಕಾ ತಂಡ ನಿಗದಿತ 50 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 381 ರನ್ ಕಲೆಹಾಕಿತು.