Virat Kohli vs Babar Azam: ಕಿಂಗ್ ಕೊಹ್ಲಿಯ ಮತ್ತೊಂದು ದಾಖಲೆ ಮುರಿದ ಬಾಬರ್
TV9 Web | Updated By: ಝಾಹಿರ್ ಯೂಸುಫ್
Updated on:
Oct 13, 2022 | 4:59 PM
Babar Azam - Virat Kohli: ಬಾಬರ್ ಆಜಂ ಭಾರತದ ಸುನೀಲ್ ಗವಾಸ್ಕರ್ (262 ಇನಿಂಗ್ಸ್) ಹಾಗೂ ಪಾಕಿಸ್ತಾನದ ಜಾವೇದ್ ಮಿಯಾಂದಾದ್ (266 ಇನಿಂಗ್ಸ್) ಅವರ ದಾಖಲೆಯನ್ನು ಕೂಡ ಹಿಂದಿಕ್ಕಿದ್ದಾರೆ.
1 / 5
ಬಾಂಗ್ಲಾದೇಶ್ ವಿರುದ್ದದ ಪಂದ್ಯದಲ್ಲಿ ಆಕರ್ಷಕ ಅರ್ಧಶತಕ ಬಾರಿಸುವ ಮೂಲಕ ಬಾಬರ್ ಆಜಂ ಇದೀಗ ವಿಶೇಷ ದಾಖಲೆಯನ್ನು ಬರೆದಿದ್ದಾರೆ. ಅದು ಕೂಡ ವಿರಾಟ್ ಕೊಹ್ಲಿಯ ದಾಖಲೆಯನ್ನು ಮುರಿಯುವ ಮೂಲಕ ಎಂಬುದು ವಿಶೇಷ.
2 / 5
ಬಾಂಗ್ಲಾ ವಿರುದ್ದ 40 ಎಸೆತಗಳಲ್ಲಿ 55 ರನ್ ಬಾರಿಸುವ ಮೂಲಕ ಬಾಬರ್ ಆಜಂ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 11 ಸಾವಿರ ರನ್ ಪೂರೈಸಿದರು. ಈ ಮೂಲಕ ಅತೀ ವೇಗವಾಗಿ 11 ಸಾವಿರ ರನ್ ಕಲೆಹಾಕಿದ ಏಷ್ಯಾದ ನಂಬರ್ 1 ಬ್ಯಾಟ್ಸ್ಮನ್ ಎನಿಸಿಕೊಂಡಿದ್ದಾರೆ.
3 / 5
ಈ ಹಿಂದೆ ಈ ದಾಖಲೆ ವಿರಾಟ್ ಕೊಹ್ಲಿ ಹೆಸರಿನಲ್ಲಿತ್ತು. ಕೊಹ್ಲಿ 261 ಇನಿಂಗ್ಸ್ಗಳ ಮೂಲಕ ಈ ವಿಶೇಷ ದಾಖಲೆ ಬರೆದಿದ್ದರು. ಇದೀಗ 251 ಇನಿಂಗ್ಸ್ ಮೂಲಕ 11 ಸಾವಿರ ರನ್ ಪೂರೈಸುವ ಮೂಲಕ ಬಾಬರ್ ಹೊಸ ದಾಖಲೆ ಬರೆದಿದ್ದಾರೆ.
4 / 5
ಬಾಬರ್ ಆಜಂ 42 ಟೆಸ್ಟ್‌ಗಳ 75 ಇನ್ನಿಂಗ್ಸ್‌ಗಳಿಂದ 3,122 ರನ್, 92 ಏಕದಿನ ಪಂದ್ಯಗಳ 90 ಇನ್ನಿಂಗ್ಸ್‌ಗಳಿಂದ 4664 ರನ್ ಮತ್ತು 91 ಟಿ20 ಪಂದ್ಯಗಳ 86 ಇನ್ನಿಂಗ್ಸ್‌ಗಳಿಂದ 3216 ರನ್ ಗಳಿಸಿದ್ದಾರೆ. ಈ ಮೂಲಕ 11 ಸಾವಿರ ರನ್ ಪೂರೈಸಿದ್ದಾರೆ.
5 / 5
251 ಇನಿಂಗ್ಸ್ ಮೂಲಕ 11 ಸಾವಿರ ರನ್ಗಳ ವಿಶೇಷ ಸಾಧನೆಗೈದಿರುವ ಬಾಬರ್ ಆಜಂ ಭಾರತದ ಸುನೀಲ್ ಗವಾಸ್ಕರ್ (262 ಇನಿಂಗ್ಸ್) ಹಾಗೂ ಪಾಕಿಸ್ತಾನದ ಜಾವೇದ್ ಮಿಯಾಂದಾದ್ (266 ಇನಿಂಗ್ಸ್) ಅವರ ದಾಖಲೆಯನ್ನು ಕೂಡ ಹಿಂದಿಕ್ಕಿದ್ದಾರೆ.