Babar Azam: ಟಿ20 ವಿಶ್ವಕಪ್‌ ಫೈನಲ್​ಗೂ ಮುನ್ನ ತಂಡ ತೊರೆದ ಬಾಬರ್ ಅಜಮ್..!

Updated By: ಪೃಥ್ವಿಶಂಕರ

Updated on: Nov 12, 2022 | 3:43 PM

Babar Azam: ಪಾಕ್ ತಂಡದ ನಾಯಕ ಬಾಬರ್ ಕರಾಚಿ ಕಿಂಗ್ಸ್‌ನೊಂದಿಗಿನ ಸಂಬಂಧವನ್ನು ಕೊನೆಗೊಳಿಸಿದ್ದು, ಪೇಶಾವರ್ ತಂಡ ಬಾಬರ್ ಅವರನ್ನು ಬದಲಿ ಆಟಗಾರನಾಗಿ ತಂಡಕ್ಕೆ ಸೇರಿಸಿಕೊಂಡಿದೆ.

1 / 6
ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡ ತನ್ನ ಸಾಮರ್ಥ್ಯ ಪ್ರದರ್ಶಿಸಿ ಫೈನಲ್‌ಗೆ ಲಗ್ಗೆ ಇಟ್ಟಿದೆ. ಇದೀಗ ನವೆಂಬರ್ 13ರಂದು ಇಂಗ್ಲೆಂಡ್ ವಿರುದ್ಧ ಚಾಂಪಿಯನ್ ಆಗಲು ಪೈಪೋಟಿ ನಡೆಸಲಿದೆ. ಇದೆಲ್ಲದರ ನಡುವೆ ಪಾಕ್ ಕ್ರಿಕೆಟ್​ನಲ್ಲಿ ಸಂಚಲನ ಮೂಡಿದ್ದು, ಆಟಗಾರರ ವಿನಿಮಯ ಶುರುವಾಗಿದೆ.

2 / 6
ಈ ವಿನಿಮಯದ ಭಾಗವಾಗಿ ಪಾಕಿಸ್ತಾನಿ ತಂಡದ ನಾಯಕ ಬಾಬರ್ ಅಜಮ್ ಅವರು ಟಿ20 ವಿಶ್ವಕಪ್​ ಫೈನಲ್‌ಗೂ ಮುಂಚಿತವಾಗಿ ತಮ್ಮ ತಂಡವನ್ನು ತೊರೆದಿದ್ದಾರೆ. ವಾಸ್ತವವಾಗಿ ನಾವಿಲ್ಲಿ ಮಾತನಾಡುತ್ತಿರುವುದು ಪಾಕಿಸ್ತಾನದ ರಾಷ್ಟ್ರೀಯ ತಂಡದ ಬಗ್ಗೆ ಅಲ್ಲ. ಬದಲಿಗೆ ಪಾಕಿಸ್ತಾನ ಸೂಪರ್ ಲೀಗ್ ಬಗ್ಗೆ.

3 / 6
ಪಿಎಸ್‌ಎಲ್‌ನ ಎಂಟನೇ ಸೀಸನ್‌ನ ಡ್ರಾಫ್ಟ್‌ಗೆ ಮೊದಲು, ಆಟಗಾರರ ಧಾರಣ ಮತ್ತು ವ್ಯಾಪಾರದ ಅಡಿಯಲ್ಲಿ, ಪಾಕ್ ತಂಡದ ನಾಯಕ ಬಾಬರ್, ಕರಾಚಿ ಕಿಂಗ್ಸ್‌ನೊಂದಿಗಿನ ಸಂಬಂಧವನ್ನು ಕೊನೆಗೊಳಿಸಿದ್ದು, ಪೇಶಾವರ್ ತಂಡ ಬಾಬರ್ ಅವರನ್ನು ಬದಲಿ ಆಟಗಾರನಾಗಿ ಆಯ್ಕೆ ಮಾಡಿಕೊಂಡಿದೆ. ಈಗ ಹೊಸ ಸೀಸನ್​ನಿಂದ ಬಾಬರ್ 2017 ರ ಚಾಂಪಿಯನ್ ಪೇಶಾವರ್ ತಂಡದ ಪರ ಆಡಲಿದ್ದಾರೆ.

4 / 6
ಕಳೆದ ಸೀಸನ್​ನಲ್ಲಿ ಕರಾಚಿ ಕಿಂಗ್ಸ್‌ ತಂಡದ ನಾಯಕರನ್ನಾಗಿ ಬಾಬರ್ ಅಜಮ್ ಅವರನ್ನು ಆಯ್ಕೆ ಮಾಡಲಾಗಿತ್ತು. ಆದರೆ ಅವರ ನಾಯಕತ್ವದಲ್ಲಿ ತಂಡವು ಕೊನೆಯ ಅಂದರೆ ಆರನೇ ಸ್ಥಾನವನ್ನು ಗಳಿಸಿತು. ಸ್ವತಃ ಬಾಬರ್ ಕೂಡ ಬ್ಯಾಟ್‌ನಿಂದ ವಿಶೇಷವಾಗಿ ಏನನ್ನೂ ಮಾಡಲು ಸಾಧ್ಯವಾಗಲಿಲ್ಲ.

5 / 6
ತಮಾಷೆಯೆಂದರೆ ಬಾಬರ್ ಬದಲಿಗೆ ಅನುಭವಿ ಆಲ್ ರೌಂಡರ್ ಶೋಯೆಬ್ ಮಲಿಕ್ ಅವರನ್ನು ಪೇಶಾವರ ತಂಡ ಕರಾಚಿ ತಂಡಕ್ಕೆ ಬಿಟ್ಟುಕೊಟ್ಟಿದೆ. ಇತ್ತೀಚೆಗೆ, ಶೋಯೆಬ್ ಮಲಿಕ್ ಅವರನ್ನು ಏಷ್ಯಾಕಪ್ ಮತ್ತು ನಂತರ ಟಿ20 ವಿಶ್ವಕಪ್ ತಂಡದಿಂದ ಕೈಬಿಟ್ಟಿದಕ್ಕಾಗಿ ಬಾಬರ್ ಮೇಲೆ ಪ್ರಶ್ನೆಗಳನ್ನು ಎದಿದ್ದವು.

6 / 6
ಬಾಬರ್ ಮಾತ್ರವಲ್ಲದೆ ಮತ್ತೊಂದು ಆಘಾತಕಾರಿ ನಿರ್ಧಾರವನ್ನು ಕ್ವೆಟ್ಟಾ ಗ್ಲಾಡಿಯೇಟರ್ಸ್ ತಂಡ ತೆಗೆದುಕೊಂಡಿದೆ. 2019 ರ ಚಾಂಪಿಯನ್ ಆಗಿರುವ ಈ ತಂಡವು ಪಾಕಿಸ್ತಾನದ ಯುವ ವೇಗದ ಬೌಲರ್ ನಸೀಮ್ ಶಾ ಅವರನ್ನು ತಂಡದಿಂದ ಬಿಡುಗಡೆ ಮಾಡಿದೆ. ನಸೀಮ್ ಸದ್ಯ ಪಾಕಿಸ್ತಾನದೊಂದಿಗೆ ಟಿ20 ವಿಶ್ವಕಪ್ ಫೈನಲ್ ಆಡಲು ತಯಾರಿ ನಡೆಸುತ್ತಿದ್ದಾರೆ.