Babar Azam: ಭರ್ಜರಿ ಅರ್ಧಶತಕ ಸಿಡಿಸಿ ಕೊಹ್ಲಿ ದಾಖಲೆಯನ್ನು ಸರಿಗಟ್ಟಿದ ಪಾಕ್ ನಾಯಕ ಬಾಬರ್..!

| Updated By: ಪೃಥ್ವಿಶಂಕರ

Updated on: Oct 08, 2022 | 9:19 PM

Babar Azam: ಅಂತರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅತ್ಯಂತ ಕಡಿಮೆ ಇನ್ನಿಂಗ್ಸ್​ಗಳಲ್ಲಿ 28 ಅರ್ಧಶತಕಗಳನ್ನು ಗಳಿಸಿರುವ ಬಾಬರ್, ಈ ವಿಚಾರದಲ್ಲಿ ಕೊಹ್ಲಿಯನ್ನು ಸರಿಗಟ್ಟಿದ್ದಾರೆ.

1 / 5
ನ್ಯೂಜಿಲೆಂಡ್ ವಿರುದ್ಧದ ತ್ರಿಕೋನ ಸರಣಿಯಲ್ಲಿ ಪಾಕಿಸ್ತಾನದ ನಾಯಕ ಬಾಬರ್ ಅಜಮ್ ಅರ್ದಶತಕ ಸಿಡಿಸಿದ್ದು, ಈ ಮೂಲಕ ಭಾರತದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿಯ ಮತ್ತೊಂದು ದಾಖಲೆಯನ್ನು ಸರಿಗಟ್ಟಿದ್ದಾರೆ.

2 / 5
ಅಂತರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅತ್ಯಂತ ಕಡಿಮೆ ಇನ್ನಿಂಗ್ಸ್​ಗಳಲ್ಲಿ 28 ಅರ್ಧಶತಕಗಳನ್ನು ಗಳಿಸಿರುವ ಬಾಬರ್, ಈಗ ಕೊಹ್ಲಿಯನ್ನು ಸರಿಗಟ್ಟಿದ್ದಾರೆ. ಪಾಕಿಸ್ತಾನದ ನಾಯಕ 84 ಇನ್ನಿಂಗ್ಸ್‌ಗಳಲ್ಲಿ 28 ಅಂತರಾಷ್ಟ್ರೀಯ ಟಿ20 ಅರ್ಧಶತಕಗಳನ್ನು ಪೂರೈಸಿದ್ದಾರೆ.

3 / 5
ಬಾಬರ್ ನ್ಯೂಜಿಲೆಂಡ್ ವಿರುದ್ಧ 53 ಎಸೆತಗಳಲ್ಲಿ ಅಜೇಯ 79 ರನ್ ಗಳಿಸಿದರು. ಬಿರುಸಿನ ಬ್ಯಾಟಿಂಗ್ ಮಾಡಿದ ಬಾಬರ್ ತಮ್ಮ ಇನ್ನಿಂಗ್ಸ್‌ನಲ್ಲಿ 11 ಬೌಂಡರಿಗಳನ್ನು ಹೊಡೆದರು. ಈ ಪಂದ್ಯವನ್ನು ಪಾಕಿಸ್ತಾನ 6 ವಿಕೆಟ್‌ಗಳಿಂದ ಗೆದ್ದುಕೊಂಡಿತು.

4 / 5
ಈ ತ್ರಿಕೋನ ಸರಣಿಯ ಬಳಿಕ ಪಾಕಿಸ್ತಾನ ತಂಡ ಟಿ20 ವಿಶ್ವಕಪ್‌ಗಾಗಿ ಆಸ್ಟ್ರೇಲಿಯಾಕ್ಕೆ ಹಾರಲಿದ್ದು, ಬಾಬರ್ ಪಡೆ ಅಕ್ಟೋಬರ್ 23 ರಂದು ಭಾರತದ ವಿರುದ್ಧ ತಮ್ಮ ಅಭಿಯಾನವನ್ನು ಪ್ರಾರಂಭಿಸಲಿದೆ.

5 / 5
ಕಳೆದ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನದ ವಿರುದ್ಧ ಭಾರತ 10 ವಿಕೆಟ್‌ಗಳ ಸೋಲನ್ನು ಎದುರಿಸಬೇಕಾಯಿತು.