BAN vs SA: ಕಡಿಮೆ ಎಸೆತಗಳಲ್ಲಿ ತ್ರಿಶತಕ; ಟೆಸ್ಟ್ ಕ್ರಿಕೆಟ್ನಲ್ಲಿ ದಾಖಲೆ ಬರೆದ ರಬಾಡ
Kagiso Rabada: ಮುಶ್ಫಿಕರ್ ರಹೀಮ್ ಅವರ ವಿಕೆಟ್ ಪಡೆಯುವ ಮೂಲಕ ರಬಾಡ, ವಿಕೆಟ್‌ಗಳ ತ್ರಿಶತಕ ಪೂರೈಸಿದರು. ಇದರೊಂದಿಗೆ ರಬಾಡ ಅತಿ ಕಡಿಮೆ ಎಸೆತಗಳಲ್ಲಿ 300 ವಿಕೆಟ್ ಪಡೆದ ಬೌಲರ್ ಎಂಬ ವಿಶ್ವ ದಾಖಲೆ ಬರೆದಿದ್ದು, ಈ ವಿಚಾರದಲ್ಲಿ ಪಾಕಿಸ್ತಾನದ ಮಾಜಿ ವೇಗದ ಬೌಲರ್ ವಕಾರ್ ಯೂನಿಸ್ ದಾಖಲೆಯನ್ನು ಸಹ ರಬಾಡ ಮುರಿದಿದ್ದಾರೆ.