Team India: ಟೀಮ್ ಇಂಡಿಯಾದ ನಾಯಕತ್ವ ಬದಲಾಗುವುದು ಬಹುತೇಕ ಖಚಿತ..!
TV9 Web | Updated By: ಝಾಹಿರ್ ಯೂಸುಫ್
Updated on:
Nov 29, 2022 | 8:31 PM
Team India: ಒಟ್ಟಿನಲ್ಲಿ ಮುಂಬುರುವ ಟಿ20 ವಿಶ್ವಕಪ್ಗಾಗಿ ಈಗಲೇ ತಂಡದಲ್ಲಿ ಮಹತ್ವದ ಬದಲಾವಣೆ ತರಲು ಬಿಸಿಸಿಐ ಮುಂದಾಗಿದ್ದು, ಅದರಂತೆ ಟ್ವೆಂಟಿ-20 ತಂಡದಿಂದ ಯಾರೆಲ್ಲಾ ಹೊರಬೀಳಲಿದ್ದಾರೆ ಎಂಬುದು ಶೀಘ್ರದಲ್ಲೇ ಗೊತ್ತಾಗಲಿದೆ.
1 / 8
ಟಿ20 ವಿಶ್ವಕಪ್ನಲ್ಲಿನ ಸೋಲಿನ ಬಳಿಕ ಭಾರತೀಯ ಕ್ರಿಕೆಟ್ನಲ್ಲಿ ಬದಲಾವಣೆ ಪರ್ವ ಶುರುವಾಗಿದೆ. ಈಗಾಗಲೇ ಆಯ್ಕೆ ಸಮಿತಿಯನ್ನು ವಿಸರ್ಜಿಸಲಾಗಿದ್ದು, ನೂತನ ಆಯ್ಕೆದಾರರನ್ನು ಬಿಸಿಸಿಐ ಶೀಘ್ರದಲ್ಲೇ ಆಯ್ಕೆ ಮಾಡಲಿದೆ. ಇದರ ನಡುವೆ ಟೀಮ್ ಇಂಡಿಯಾದ ಹಿರಿಯ ಆಟಗಾರರನ್ನು ಬಿಸಿಸಿಐ ಸಭೆಗೆ ಕರೆಯಲಿದೆ ಎಂದು ವರದಿಯಾಗಿದೆ.
2 / 8
ಈ ಸಭೆಯ ಮುಖ್ಯ ಉದ್ದೇಶ ತಂಡದಲ್ಲಿ ಬದಲಾವಣೆ ತರುವುದು. ಅಂದರೆ 2024 ರ ಟಿ20 ವಿಶ್ವಕಪ್ ಅನ್ನು ಗಮನದಲ್ಲಿರಿಸಿ ಹಿರಿಯ ಆಟಗಾರರನ್ನು ಟಿ20 ತಂಡದಿಂದ ಕೈ ಬಿಡುವ ಬಗ್ಗೆ ಚರ್ಚಿಸಲು ಕೋಚ್ ರಾಹುಲ್ ದ್ರಾವಿಡ್, ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿಯನ್ನು ವಿಶೇಷ ಸಭೆಗೆ ಆಹ್ವಾನಿಸಲಾಗಿದೆ ಎಂದು ತಿಳಿದು ಬಂದಿದೆ.
3 / 8
ಅಂದರೆ ಮುಂದಿನ ಏಕದಿನ ವಿಶ್ವಕಪ್ ಹಾಗೂ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನತ್ತ ಹೆಚ್ಚಿನ ಗಮನ ಕೇಂದ್ರೀಕರಿಸುವಂತೆ ಹಿರಿಯ ಆಟಗಾರರಿಗೆ ಬಿಸಿಸಿಐ ಮನವಿ ಮಾಡಲಿದೆ. ಹೀಗಾಗಿ ಟಿ20 ತಂಡದಿಂದ ಹೊರಗುಳಿಯುವಂತೆ ಮನವೊಲಿಸುವ ಸಾಧ್ಯತೆಯಿದೆ.
4 / 8
ಇತ್ತ 35 ವರ್ಷದ ರೋಹಿತ್ ಶರ್ಮಾ ಮುಂದಿನ ಟಿ20 ವಿಶ್ವಕಪ್ ಆಡುವುದು ಅನುಮಾನ. ಹೀಗಾಗಿ ತಂಡದ ನಾಯಕತ್ವನ್ನು ತ್ಯಜಿಸುವಂತೆ ಮನವಿ ಮಾಡುವ ಸಾಧ್ಯತೆ ಹೆಚ್ಚು. ಇದಾಗ್ಯೂ ಹಿಟ್ಮ್ಯಾನ್ ಟೆಸ್ಟ್ ಹಾಗೂ ಏಕದಿನ ತಂಡದ ನಾಯಕರಾಗಿ ಮುಂದುವರೆಯಲಿದ್ದಾರೆ.
5 / 8
ಈ ಸಭೆಯ ಬಳಿಕ ರೋಹಿತ್ ಶರ್ಮಾ ಟಿ20 ತಂಡದಿಂದ ಹೊರಗುಳಿಯುವ ಸಾಧ್ಯತೆಯಿದ್ದು, ಆ ಬಳಿಕ ಹಾರ್ದಿಕ್ ಪಾಂಡ್ಯರನ್ನು ಟಿ20 ತಂಡದ ನಾಯಕರಾಗಿ ಆಯ್ಕೆ ಮಾಡುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ. ಇಂತಹದೊಂದು ಬದಲಾವಣೆಯಾಗಲಿರುವುದನ್ನು ಬಿಸಿಸಿಐ ಮೂಲಗಳು ಕೂಡ ದೃಢಪಡಿಸಿದೆ.
6 / 8
ಈ ಬಗ್ಗೆ ಮಾತನಾಡಿರುವ ಬಿಸಿಸಿಐ ಅಧಿಕಾರಿಯೊಬ್ಬರು, ತಂಡದಲ್ಲಿರುವ ಹಿರಿಯ ಆಟಗಾರರು ಕೇವಲ ಟೆಸ್ಟ್ ಮತ್ತು ಏಕದಿನ ಪಂದ್ಯಗಳತ್ತ ಗಮನ ಕೇಂದ್ರೀಕರಿಸಲಿದ್ದಾರೆ. ಹಾಗೆಯೇ ಮುಂದಿನ ವರ್ಷ ಭಾರತ ಆಡಲಿರುವ ಬೆರಳೆಣಿಕೆಯ ಟಿ20 ಪಂದ್ಯಗಳಲ್ಲಿ ಯುವ ಆಟಗಾರರಿಗೆ ಆದ್ಯತೆ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.
7 / 8
ಈಗಾಗಲೇ ನ್ಯೂಜಿಲೆಂಡ್ ಸರಣಿಯಲ್ಲಿ ಹಾರ್ದಿಕ್ ಪಾಂಡ್ಯ ಟೀಮ್ ಇಂಡಿಯಾ ಟಿ20 ತಂಡದ ನಾಯಕರಾಗಿ ಕಾಣಿಸಿಕೊಂಡಿದ್ದಾರೆ. ಹೀಗಾಗಿ ರೋಹಿತ್ ಶರ್ಮಾ ಬಳಿಕ ಪಾಂಡ್ಯ ಅವರೇ ಭಾರತ ತಂಡದ ಕಪ್ತಾನನಾಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನಬಹುದು.
8 / 8
ಒಟ್ಟಿನಲ್ಲಿ ಮುಂಬುರುವ ಟಿ20 ವಿಶ್ವಕಪ್ಗಾಗಿ ಈಗಲೇ ತಂಡದಲ್ಲಿ ಮಹತ್ವದ ಬದಲಾವಣೆ ತರಲು ಬಿಸಿಸಿಐ ಮುಂದಾಗಿದ್ದು, ಅದರಂತೆ ಟ್ವೆಂಟಿ-20 ತಂಡದಿಂದ ಯಾರೆಲ್ಲಾ ಹೊರಬೀಳಲಿದ್ದಾರೆ ಎಂಬುದು ಶೀಘ್ರದಲ್ಲೇ ಗೊತ್ತಾಗಲಿದೆ.