- Kannada News Photo gallery Cricket photos SA20 League: Durban Super Giants launch New Jersey Kannada News zp
SA20 League: ಡರ್ಬನ್ ಸೂಪರ್ ಜೈಂಟ್ಸ್ ತಂಡದ ಹೊಸ ಜೆರ್ಸಿ ಅನಾವರಣ..!
Durban Super Giants: ಡಿಕಾಕ್ ಪ್ರಸ್ತುತ ಲಕ್ನೋ ಸೂಪರ್ ಜೈಂಟ್ಸ್ ತಂಡದ ಭಾಗ ಕೂಡ ಹೌದು. ಇದೀಗ ಡರ್ಬನ್ ತಂಡದ ನಾಯಕತ್ವ ವಿಕೆಟ್ ಕೀಪರ್ ಬ್ಯಾಟ್ಸ್ಮನ್ಗೆ ಒಲಿದಿದೆ.
Updated on: Nov 29, 2022 | 10:10 PM

ಸೌತ್ ಆಫ್ರಿಕಾ ಟಿ20 ಲೀಗ್ನಲ್ಲಿ ಕಣಕ್ಕಿಳಿಯಲಿರುವ ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿ ಮಾಲಕತ್ವದ ಡರ್ಬನ್ ಸೂಪರ್ ಜೈಂಟ್ಸ್ ತಂಡವು ತನ್ನ ನೂತನ ಜೆರ್ಸಿಯನ್ನು ಅನಾವರಣಗೊಳಿಸಿದೆ.

ಗಾಢವಾದ ನೀಲಿ ಛಾಯೆಯಲ್ಲಿರುವ ನೂತನ ಜೆರ್ಸಿಯ ತೋಳ್ಭಾಗದಲ್ಲಿ ಸೌತ್ ಆಫ್ರಿಕಾ ಧ್ವಜ ಬಣ್ಣಗಳನ್ನು ನೀಡಿರುವುದು ವಿಶೇಷ.

ಇನ್ನು ಡರ್ಬನ್ ಸೂಪರ್ ಜೈಂಟ್ಸ್ ತಂಡದ ನಾಯಕರಾಗಿ ಕ್ವಿಂಟನ್ ಡಿಕಾಕ್ ಆಯ್ಕೆಯಾಗಿದ್ದಾರೆ. ಡಿಕಾಕ್ ಪ್ರಸ್ತುತ ಲಕ್ನೋ ಸೂಪರ್ ಜೈಂಟ್ಸ್ ತಂಡದ ಭಾಗ ಕೂಡ ಹೌದು. ಇದೀಗ ಡರ್ಬನ್ ತಂಡದ ನಾಯಕತ್ವ ವಿಕೆಟ್ ಕೀಪರ್ ಬ್ಯಾಟ್ಸ್ಮನ್ಗೆ ಒಲಿದಿದೆ.

ಸೌತ್ ಆಫ್ರಿಕಾ ಲೀಗ್ನಲ್ಲಿ ಒಟ್ಟು 6 ತಂಡಗಳಿದ್ದು, ಈ ಎಲ್ಲಾ ತಂಡಗಳನ್ನು ಐಪಿಎಲ್ನಲ್ಲಿ ತಂಡಗಳ ಮಾಲೀಕತ್ವವನ್ನು ಹೊಂದಿರುವ ಫ್ರಾಂಚೈಸಿಗಳೇ ಖರೀದಿಸಿರುವುದು ವಿಶೇಷ. ಅದರಂತೆ ಕೇಪ್ ಟೌನ್ ತಂಡವನ್ನು ಮುಂಬೈ ಇಂಡಿಯನ್ಸ್ ಖರೀದಿಸಿದರೆ , ಜೋಹಾನ್ಸ್ ಬರ್ಗ್ ತಂಡವು ಚೆನ್ನೈ ಸೂಪರ್ ಕಿಂಗ್ಸ್ ಪಾಲಾಗಿದೆ.

ಇನ್ನು ಡರ್ಬನ್ ತಂಡವು ಲಕ್ನೋ ಸೂಪರ್ ಜೈಂಟ್ಸ್ ಒಡೆತನದಲ್ಲಿದ್ದರೆ, ಪೋರ್ಟ್ ಎಲಿಜಬೆತ್ ತಂಡವನ್ನು ಸನ್ ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ಖರೀದಿಸಿದೆ. ಹಾಗೆಯೇ ಪ್ರಿಟೋರಿಯಾ ಡೆಲ್ಲಿ ಕ್ಯಾಪಿಟಲ್ಸ್ ಪಾಲಾದರೆ, ಪರ್ಲ್ ತಂಡವನ್ನು ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿ ಖರೀದಿಸಿದೆ. ಹೀಗಾಗಿಯೇ ಸೌತ್ ಆಫ್ರಿಕಾ ಟಿ20 ಲೀಗ್ ಅನ್ನು ಮಿನಿ ಐಪಿಎಲ್ ಎಂದೇ ವರ್ಣಿಸಲಾಗುತ್ತಿದೆ.

ಡರ್ಬನ್ ಸೂಪರ್ ಜೈಂಟ್ಸ್ ತಂಡ ಹೀಗಿದೆ: ಕ್ವಿಂಟನ್ ಡಿ ಕಾಕ್ (ನಾಯಕ), ಪ್ರೆನೆಲನ್ ಸುಬ್ರಾಯೆನ್, ಜೇಸನ್ ಹೋಲ್ಡರ್, ಕೈಲ್ ಮೇಯರ್ಸ್, ರೀಸ್ ಟೋಪ್ಲಿ, ಡ್ವೈನ್ ಪ್ರಿಟೋರಿಯಸ್, ಹೆನ್ರಿಕ್ ಕ್ಲಾಸೆನ್, ಕೀಮೋ ಪೌಲ್, ಕೇಶವ್ ಮಹಾರಾಜ್, ಕೈಲ್ ಅಬಾಟ್, ಜೂನಿಯರ್ ಡಾಲಾ, ದಿಲ್ಶನ್ ಮಧುಶಂಕ, ಜಾನ್ಸನ್ ಚಾರ್ಲ್ಸ್, ಮ್ಯಾಥ್ಯೂ ಬ್ರೀಟ್ಜ್ಕೆರ್, ಕ್ರಿಸ್ಚಿಯನ್ ಜೋನ್ಕರ್, ವಿಯಾನ್ ಮಲ್ಡರ್, ಸೈಮನ್ ಹಾರ್ಮರ್



















