ಮುಂಬೈ ವಿರುದ್ಧ ಏಕೈಕ ವಿಕೆಟ್ ಪಡೆದು ಐಪಿಎಲ್‌ನಲ್ಲಿ ಇತಿಹಾಸ ನಿರ್ಮಿಸಿದ ಭುವನೇಶ್ವರ್ ಕುಮಾರ್

|

Updated on: Apr 08, 2025 | 4:52 PM

Bhuvneshwar Kumar Breaks Dwayne Bravo's Record: ಐಪಿಎಲ್ 2025 ರಲ್ಲಿ, ಆರ್‌ಸಿಬಿ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯದಲ್ಲಿ ಭುವನೇಶ್ವರ್ ಕುಮಾರ್ ಅವರು ಅದ್ಭುತ ಪ್ರದರ್ಶನ ನೀಡಿದರು. 18ನೇ ಓವರ್‌ನಲ್ಲಿ ತಿಲಕ್ ವರ್ಮಾ ಅವರ ವಿಕೆಟ್ ಪಡೆಯುವ ಮೂಲಕ, ಅವರು ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ವೇಗದ ಬೌಲರ್ ಎಂಬ ದಾಖಲೆಯನ್ನು ಸೃಷ್ಟಿಸಿದರು. ಡ್ವೇನ್ ಬ್ರಾವೊ ಅವರ ದೀರ್ಘಕಾಲದ ದಾಖಲೆಯನ್ನು ಮುರಿದ ಭುವನೇಶ್ವರ್, 179 ಇನ್ನಿಂಗ್ಸ್‌ಗಳಲ್ಲಿ 184 ವಿಕೆಟ್‌ಗಳನ್ನು ಪಡೆದಿದ್ದಾರೆ.

1 / 6
2025 ರ ಐಪಿಎಲ್‌ನಲ್ಲಿ 20ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದ ಈ ಪಂದ್ಯವನ್ನು ಆರ್​ಸಿಬಿ 12 ರನ್​​ಗಳಿಂದ ಗೆದ್ದುಕೊಂಡಿತು. ತಂಡದ ಈ ಗೆಲುವಿನಲ್ಲಿ ಬೌಲರ್​ಗಳ ಪಾತ್ರ ಪ್ರಮುಖವಾಗಿತ್ತು.

2 / 6
ಆದರಲ್ಲೂ ಆರ್​ಸಿಬಿ ಪರ 18ನೇ ಓವರ್​ ಬೌಲ್ ಮಾಡಿದ ಭುವನೇಶ್ವರ್ ಕುಮಾರ್ 13 ರನ್ ನೀಡಿದರಾದರೂ ಮುಂಬೈ ಪರ ಸ್ಫೋಟಕ ಅರ್ಧಶತಕ ಸಿಡಿಸಿ ತಂಡವನ್ನು ಗೆಲುವಿನತ್ತ ಕೊಂಡೊಯ್ಯುತ್ತಿದ್ದ ತಿಲಕ್ ವರ್ಮಾ ಅವರ ವಿಕೆಟ್ ಪಡೆದರು. ಈ ಮೂಲಕ ಐಪಿಎಲ್‌ನಲ್ಲಿ ಅತ್ಯಧಿಕ ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ನಂಬರ್ 1 ಸ್ಥಾನಕ್ಕೇರಿದರು.

3 / 6
ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಭುವಿ 4 ಓವರ್‌ಗಳಲ್ಲಿ 48 ರನ್‌ಗಳನ್ನು ನೀಡಿ 1 ವಿಕೆಟ್ ಪಡೆದಿದ್ದರು. ಆದಾಗ್ಯೂ, ಒಂದು ವಿಕೆಟ್ ಪಡೆಯುವ ಮೂಲಕ ಭುವನೇಶ್ವರ್ ಕುಮಾರ್ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ವೇಗದ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

4 / 6
ಐಪಿಎಲ್ ಇತಿಹಾಸದಲ್ಲಿ ವೇಗದ ಬೌಲರ್ ಆಗಿ ಅತಿ ಹೆಚ್ಚು ವಿಕೆಟ್ ಪಡೆದ ದಾಖಲೆಯನ್ನು ಹೊಂದಿದ್ದ ಮಾಜಿ ಸಿಎಸ್‌ಕೆ ಆಟಗಾರ ಡ್ವೇನ್ ಬ್ರಾವೋ ಅವರನ್ನು ಅವರು ಹಿಂದಿಕ್ಕಿದ ಭುವಿ ಈ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. ಭುವಿ ಐಪಿಎಲ್‌ನಲ್ಲಿ ಆಡಿರುವ 179 ಇನ್ನಿಂಗ್ಸ್‌ಗಳಲ್ಲಿ 184 ವಿಕೆಟ್‌ಗಳನ್ನು ಪಡೆದಿದ್ದು ಅಗ್ರಸ್ಥಾನಕ್ಕೇರಿದ್ದಾರೆ.

5 / 6
ಇದೀಗ ಎರಡನೇ ಸ್ಥಾನಕ್ಕೆ ಜಾರಿರುವ ವೆಸ್ಟ್​ ಇಂಡೀಸ್​ನ ಡ್ವೇನ್ ಬ್ರಾವೋ 158 ಇನ್ನಿಂಗ್ಸ್‌ಗಳಲ್ಲಿ 183 ವಿಕೆಟ್‌ಗಳನ್ನು ಪಡೆದಿದ್ದಾರೆ. ಪಟ್ಟಿಯಲ್ಲಿರುವ ಮೂರನೇ ಸ್ಥಾನದಲ್ಲಿರುವ ಲಸಿತ್ ಮಾಲಿಂಗ ಅವರು 122 ಇನ್ನಿಂಗ್ಸ್‌ಗಳಲ್ಲಿ 170 ವಿಕೆಟ್‌ಗಳನ್ನು ಪಡೆದಿದ್ದರೆ, ನಾಲ್ಕನೇ ಸ್ಥಾನದಲ್ಲಿರುವ ಜಸ್ಪ್ರೀತ್ ಬುಮ್ರಾ 165 ವಿಕೆಟ್‌ಗಳನ್ನು ಪಡೆದಿದ್ದಾರೆ. ಉಮೇಶ್ ಯಾದವ್ ಕೂಡ 147 ಇನ್ನಿಂಗ್ಸ್‌ಗಳಲ್ಲಿ 144 ವಿಕೆಟ್‌ಗಳೊಂದಿಗೆ ಐದನೇ ಸ್ಥಾನದಲ್ಲಿದ್ದಾರೆ.

6 / 6
ಭುವನೇಶ್ವರ್ ಕುಮಾರ್ ಪ್ರಸ್ತುತ ಭಾರತ ತಂಡದಿಂದ ದೂರವಿದ್ದಾರೆ. ಭಾರತ ಪರ ಇದುವರೆಗೆ ಆಡಿರುವ 21 ಟೆಸ್ಟ್ ಪಂದ್ಯಗಳಲ್ಲಿ 63 ವಿಕೆಟ್‌ಗಳನ್ನು ಪಡೆದಿರುವ ಭುವಿ 121 ಏಕದಿನ ಪಂದ್ಯಗಳಲ್ಲಿ 141 ವಿಕೆಟ್‌ಗಳನ್ನು ಪಡೆದಿದ್ದಾರೆ. ಇದಲ್ಲದೆ, ಭುವಿ 87 ಟಿ20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ 90 ವಿಕೆಟ್‌ಗಳನ್ನು ಪಡೆದಿದ್ದಾರೆ.