IPL 2023: ಮೊದಲ ಓವರ್ನ ಮ್ಯಾಜಿಷಿಯನ್: ಭುವನೇಶ್ವರ್ ಕುಮಾರ್ ಹೊಸ ದಾಖಲೆ
TV9 Web | Updated By: ಝಾಹಿರ್ ಯೂಸುಫ್
Updated on:
Apr 25, 2023 | 3:07 PM
IPL 2023 Kannada: ಭುವನೇಶ್ವರ್ ಕುಮಾರ್ ಅವರನ್ನು ಹೊರತುಪಡಿಸಿದರೆ, ಈ ಪಟ್ಟಿಯಲ್ಲಿ ಎಡಗೈ ವೇಗಿ ಟ್ರೆಂಟ್ ಬೌಲ್ಟ್ 2ನೇ ಸ್ಥಾನದಲ್ಲಿದ್ದಾರೆ. ಬೌಲ್ಟ್ ಮೊದಲ ಓವರ್ನಲ್ಲಿ ಒಟ್ಟು 21 ವಿಕೆಟ್ಗಳನ್ನು ಕಬಳಿಸಿದ್ದಾರೆ.
1 / 8
IPL 2023: ಐಪಿಎಲ್ನಲ್ಲಿ ಬ್ಯಾಟ್ಸ್ಮನ್ಗಳ ಅಬ್ಬರದ ನಡುವೆ ಬೌಲರ್ಗಳು ಕೂಡ ಅಮೋಘ ದಾಖಲೆ ಬರೆಯುತ್ತಿದ್ದಾರೆ. ಈ ಬಾರಿ ಭುವನೇಶ್ವರ್ ಕುಮಾರ್ ಬರೆದಿರುವುದು ಅಂತಿಂಥ ದಾಖಲೆಯಲ್ಲ. ಬದಲಾಗಿ ಮೊದಲ ಓವರ್ನಲ್ಲೇ ಮ್ಯಾಜಿಕ್ ಸೃಷ್ಟಿಸಿ ಹೊಸ ಇತಿಹಾಸವನ್ನೇ ನಿರ್ಮಿಸಿದ್ದಾರೆ.
2 / 8
ಹೌದು, ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಭುವನೇಶ್ವರ್ ಕುಮಾರ್ 4 ಓವರ್ಗಳಲ್ಲಿ ಕೇವಲ 11 ರನ್ ನೀಡಿ 2 ವಿಕೆಟ್ ಕಬಳಿಸಿ ಮಿಂಚಿದ್ದರು. ಈ ಎರಡು ವಿಕೆಟ್ಗಳಲ್ಲಿ ಮೊದಲ ವಿಕೆಟ್ ಲಭಿಸಿದ್ದು ಮೊದಲ ಓವರ್ನಲ್ಲಿ ಎಂಬುದು ವಿಶೇಷ.
3 / 8
ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಫಿಲ್ ಸಾಲ್ಟ್ (0) ವಿಕೆಟ್ ಪಡೆಯುವ ಮೂಲಕ ಭುವಿ ಎಸ್ಆರ್ಹೆಚ್ ತಂಡಕ್ಕೆ ಆರಂಭಿಕ ಯಶಸ್ಸು ತಂದುಕೊಟ್ಟಿದ್ದರು. ಇದರೊಂದಿಗೆ ಐಪಿಎಲ್ನಲ್ಲಿ ಮೊದಲ ಓವರ್ನಲ್ಲಿ ಅತ್ಯಧಿಕ ವಿಕೆಟ್ ಪಡೆದ ವಿಶೇಷ ದಾಖಲೆಯೊಂದು ಭುವನೇಶ್ವರ್ ಕುಮಾರ್ ಪಾಲಾಗಿದೆ.
4 / 8
ಭುವನೇಶ್ವರ್ ಕುಮಾರ್ ಐಪಿಎಲ್ನಲ್ಲಿ 23 ಬಾರಿ ಮೊದಲ ಓವರ್ನಲ್ಲಿ ವಿಕೆಟ್ ಕಬಳಿಸಿ ಎದುರಾಳಿಗಳಿಗೆ ಆಘಾತ ನೀಡಿದ್ದಾರೆ. ಈ ಮೂಲಕ ಐಪಿಎಲ್ನ ಮೊದಲ ಓವರ್ನ ಮ್ಯಾಜೀಷಿಯನ್ ಎನಿಸಿಕೊಂಡಿದ್ದಾರೆ.
5 / 8
ಇನ್ನು ಭುವನೇಶ್ವರ್ ಕುಮಾರ್ ಅವರನ್ನು ಹೊರತುಪಡಿಸಿದರೆ, ಈ ಪಟ್ಟಿಯಲ್ಲಿ ಎಡಗೈ ವೇಗಿ ಟ್ರೆಂಟ್ ಬೌಲ್ಟ್ 2ನೇ ಸ್ಥಾನದಲ್ಲಿದ್ದಾರೆ. ಬೌಲ್ಟ್ ಮೊದಲ ಓವರ್ನಲ್ಲಿ ಒಟ್ಟು 21 ವಿಕೆಟ್ಗಳನ್ನು ಕಬಳಿಸಿದ್ದಾರೆ.
6 / 8
ಮೂರನೇ ಸ್ಥಾನದಲ್ಲಿ ಮಾಜಿ ಪ್ರವೀಣ್ ಕುಮಾರ್ ಇದ್ದು, ಪಿಕೆ ಮೊದಲ ಓವರ್ನಲ್ಲಿ ಒಟ್ಟು 15 ವಿಕೆಟ್ ಕಬಳಿಸಿದ್ದರು.
7 / 8
ಇನ್ನು ಸಂದೀಪ್ ಶರ್ಮಾ ಮೊದಲ ಓವರ್ನಲ್ಲಿ ಒಟ್ಟು 13 ವಿಕೆಟ್ ಪಡೆಯುವ ಮೂಲಕ ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ.
8 / 8
ಹಾಗೆಯೇ ಮಾಜಿ ವೇಗಿ ಝಹೀರ್ ಖಾನ್ ಐಪಿಎಲ್ನ ಮೊದಲ ಓವರ್ನಲ್ಲಿ ಒಟ್ಟು 12 ವಿಕೆಟ್ ಕಬಳಿಸಿದ್ದರು.