- Kannada News Photo gallery Cricket photos Brett Lee Joins Australian Cricket Hall of Fame: A Fast Bowler's Legacy
ಆಸೀಸ್ ಲೆಜೆಂಡರಿ ವೇಗಿ ಬ್ರೆಟ್ ಲೀಗೆ ಹಾಲ್ ಆಫ್ ಫೇಮ್ ಗೌರವ
Brett Lee Hall of Fame: ಆಸ್ಟ್ರೇಲಿಯಾದ ವೇಗದ ಬೌಲರ್ ಬ್ರೆಟ್ ಲೀ ಅವರನ್ನು ಆಸ್ಟ್ರೇಲಿಯಾದ ಕ್ರಿಕೆಟ್ ಹಾಲ್ ಆಫ್ ಫೇಮ್‌ಗೆ ಸೇರಿಸಲಾಗಿದೆ. 1999 ರಿಂದ 2012 ರವರೆಗೆ ಆಸ್ಟ್ರೇಲಿಯಾ ಪರ ಆಡಿದ ಬ್ರೆಟ್ ಲೀ ವಿಶ್ವದ ಅತ್ಯಂತ ವೇಗದ ಬೌಲರ್‌ಗಳಲ್ಲಿ ಒಬ್ಬರಾಗಿದ್ದರು. ಅವರ ವೃತ್ತಿಜೀವನದಲ್ಲಿ 718 ವಿಕೆಟ್‌ಗಳನ್ನು ಪಡೆದಿದ್ದು, ಮೂರು ವಿಶ್ವಕಪ್ ಗೆದ್ದ ತಂಡದ ಭಾಗವಾಗಿದ್ದರು. ಕ್ರೀಡಾ ಮನೋಭಾವ ಮತ್ತು ಪ್ರಭಾವಕ್ಕಾಗಿ ಈ ಪ್ರತಿಷ್ಠಿತ ಗೌರವ ಲಭಿಸಿದೆ.
Updated on: Dec 28, 2025 | 4:54 PM

ಆಸ್ಟ್ರೇಲಿಯಾದ ಕ್ರಿಕೆಟ್ ಹಾಲ್ ಆಫ್ ಫೇಮ್‌ಗೆ ಮತ್ತೊಬ್ಬ ಲೆಜೆಂಡರಿ ವೇಗಿಯ ಸೇರ್ಪಡೆಯಾಗಿದೆ. ಆಸ್ಟ್ರೇಲಿಯಾದ ಮಾಜಿ ವೇಗದ ಬೌಲರ್ ಬ್ರೆಟ್ ಲೀ ಅವರಿಗೆ ಡಿಸೆಂಬರ್ 28, 2025 ರಂದು ಆಸ್ಟ್ರೇಲಿಯಾದ ಕ್ರಿಕೆಟ್ ಹಾಲ್ ಆಫ್ ಫೇಮ್ ಗೌರವ ನೀಡಲಾಗಿದೆ. ವಿಶ್ವದ ಅತ್ಯಂತ ವೇಗದ ಬೌಲರ್‌ಗಳಲ್ಲಿ ಒಬ್ಬರಾಗಿದ್ದ ಬ್ರೆಟ್ ಲೀಗೆ ಅರ್ಹಗೌರವ ಸಂದಿದೆ.

ಬ್ರೆಟ್ ಲೀ 1999 ರಿಂದ 2012 ರವರೆಗೆ ಆಸ್ಟ್ರೇಲಿಯಾ ಪರ ಅಂತರರಾಷ್ಟ್ರೀಯ ಕ್ರಿಕೆಟ್ ಆಡಿದ್ದರು. ತಮ್ಮ ವೇಗದ ಮೂಲಕ ಪ್ರಪಂಚದಾದ್ಯಂತದ ಬ್ಯಾಟ್ಸ್‌ಮನ್‌ಗಳಲ್ಲಿ ಭಯ ಹುಟ್ಟಿಸಿದ ಬ್ರೆಟ್ ಲೀ ನಿರಂತರವಾಗಿ 150 ಕಿಮೀ/ಗಂಟೆಗಿಂತ ಹೆಚ್ಚಿನ ವೇಗದಲ್ಲಿ ಬೌಲಿಂಗ್ ಮಾಡುತ್ತಿದ್ದರು. ಅಲ್ಲದೆ ಗಂಟೆಗೆ 161.1 ಕಿಮೀ ವೇಗದಲ್ಲಿ ಬೌಲ್ ಮಾಡಿ ಬ್ರೆಟ್ ಲೀ ದಾಖಲೆ ಕೂಡ ನಿರ್ಮಿಸಿದ್ದರು. ಶೋಯೆಬ್ ಅಖ್ತರ್ ಜೊತೆಗೆ, ಅವರನ್ನು ಕ್ರಿಕೆಟ್‌ನ ಅತ್ಯಂತ ವೇಗದ ಬೌಲರ್‌ಗಳಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ.

ಬ್ರೆಟ್ ಲೀ ಅವರ ವಿಶೇಷ ಗುಣಗಳೆಂದರೆ ಅವರ ವೇಗ ಮಾತ್ರವಲ್ಲ, ಅವರ ಕೌಶಲ್ಯ, ದೀರ್ಘಕಾಲೀನ ಫಿಟ್ನೆಸ್ ಮತ್ತು ಕ್ರೀಡಾ ಮನೋಭಾವವೂ ಆಗಿತ್ತು. ಅವರ ಶ್ರೇಷ್ಠ ವೃತ್ತಿಜೀವನ ಮತ್ತು ಕ್ರೀಡೆಯ ಮೇಲಿನ ಪ್ರಭಾವವನ್ನು ಗುರುತಿಸಿ ಆಸ್ಟ್ರೇಲಿಯಾ ಅವರಿಗೆ ಈ ಪ್ರತಿಷ್ಠಿತ ಗೌರವವನ್ನು ನೀಡಿದೆ.

ತಮ್ಮ ಅಂತರರಾಷ್ಟ್ರೀಯ ವೃತ್ತಿಜೀವನದ ಅವಧಿಯಲ್ಲಿ, ಬ್ರೆಟ್ ಲೀ 76 ಟೆಸ್ಟ್, 221 ಏಕದಿನ ಮತ್ತು 25 ಟಿ20ಪಂದ್ಯಗಳನ್ನು ಆಡಿದ್ದಾರೆ. ಅವರು ಮೂರು ಸ್ವರೂಪಗಳಲ್ಲಿ ಒಟ್ಟು 718 ವಿಕೆಟ್‌ಗಳನ್ನು ಪಡೆದಿದ್ದಾರೆ. ಇದರಲ್ಲಿ ಟೆಸ್ಟ್‌ನಲ್ಲಿ 310, ಏಕದಿನಗಳಲ್ಲಿ 221 ಮತ್ತು ಟಿ20ಮಾದರಿಯಲ್ಲಿ 38 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಇದು ಮಾತ್ರವಲ್ಲದೆ ಬ್ರೆಟ್ ಲೀ ಐಪಿಎಲ್ ಮತ್ತು ಬಿಗ್ ಬ್ಯಾಷ್ ಲೀಗ್‌ನಂತಹ ಪ್ರಮುಖ ಕ್ರಿಕೆಟ್ ಲೀಗ್‌ಗಳಲ್ಲಿಯೂ ಆಡಿದ್ದಾರೆ.

ತಮ್ಮ ಅದ್ಭುತ ವೃತ್ತಿಜೀವನದಲ್ಲಿ, ಬ್ರೆಟ್ ಲೀ ಮೂರು ಏಕದಿನ ವಿಶ್ವಕಪ್‌ಗಳನ್ನು ಗೆದ್ದ ತಂಡದ ಭಾಗವಾಗಿದ್ದರು. ಅವರು 1999, 2003 ಮತ್ತು 2007 ರ ವಿಶ್ವಕಪ್ ಗೆದ್ದ ಆಸ್ಟ್ರೇಲಿಯಾ ತಂಡದ ಪರ ಆಡಿದ್ದರು. ಹಾಗೆಯೇ ಪ್ರತಿಷ್ಠಿತ ಆಶಸ್ ಸರಣಿ ಗೆಲುವಿನಲ್ಲೂ ಬ್ರೆಟ್ ಲೀ ಪಾತ್ರ ಪ್ರಮುಖವಾಗಿತ್ತು. ಮಾತ್ರವಲ್ಲದೆ 2008 ರಲ್ಲಿ ಬ್ರೆಟ್ ಲೀಗೆ ಅಲನ್ ಬಾರ್ಡರ್ ಪದಕವನ್ನು ಸಹ ಲಭಿಸಿತ್ತು.
