IPL 2024: CSK ತಂಡದ ಹೊಸ ಜೆರ್ಸಿ ಅನಾವರಣ
IPL 2024: ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಮಾರ್ಚ್ 22 ರಿಂದ ಶುರುವಾಗುವ ಸಾಧ್ಯತೆಯಿದೆ. ಈಗಾಗಲೇ ಎಲ್ಲಾ ಫ್ರಾಂಚೈಸಿಗಳು ಐಪಿಎಲ್ ಸೀಸನ್-17 ಗಾಗಿ ಸಿದ್ಧತೆಗಳನ್ನು ಶುರು ಮಾಡಿಕೊಂಡಿದೆ. ಇದರ ನಡುವೆ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ತನ್ನ ನೂತನ ಜೆರ್ಸಿಯನ್ನು ಅನಾವರಣಗೊಳಿಸಿದೆ.
Updated on: Feb 18, 2024 | 12:30 PM

ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-17 ಗಾಗಿ ಸಿದ್ಧತೆಗಳು ಶುರುವಾಗಿದೆ. ಈ ಸಿದ್ಧತೆಗಳ ನಡುವೆ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯು ತನ್ನ ನೂತನ ಜೆರ್ಸಿಯನ್ನು ಅನಾವರಣಗೊಳಿಸಿದೆ. ಈ ಹಿಂದಿನಂತೆ ಈ ಬಾರಿ ಕೂಡ ಸಿಎಸ್ಕೆ ಯೆಲ್ಲೊ ಜೆರ್ಸಿಯಲ್ಲೇ ಕಣಕ್ಕಿಳಿಯಲಿದೆ. ಅಲ್ಲದೆ ಕಳೆದ ಬಾರಿಗೆ ಹೋಲಿಸಿದರೆ ವಿನ್ಯಾಸದಲ್ಲೂ ಅಂತಹ ಯಾವುದೇ ಮಹತ್ವದ ಬದಲಾವಣೆ ಮಾಡಲಾಗಿಲ್ಲ.

ಹಿಂದಿನ ಸೀಸನ್‌ಗಳಂತೆ, ಹಳದಿ ಬಣ್ಣದ ಜೆರ್ಸಿಯ ಎರಡೂ ಭುಜಗಳ ಮೇಲೆ ಆರ್ಮಿ ಪಟ್ಟಿಯನ್ನು ನೀಡಲಾಗಿದೆ. ಈ ಮೂಲಕ ಭಾರತೀಯ ಸೇನೆಯ ಸೇವೆಯನ್ನು ಗೌರವಿಸಲಾಗುತ್ತಿದೆ. ಇನ್ನು CSK ಲಾಂಛನದ ಮೇಲೆ ಐದು ನಕ್ಷತ್ರಗಳಿದ್ದು, ಇದು ಚೆನ್ನೈ ಸೂಪರ್ ಕಿಂಗ್ಸ್ ತಂಡವು ಐದು ಬಾರಿ ಚಾಂಪಿಯನ್ ಪಟ್ಟ ಅಲಂಕರಿಸುವುದನ್ನು ಪ್ರತಿನಿಧಿಸುತ್ತದೆ.

ಇನ್ನು ಬಾರಿ ಜೆರ್ಸಿಯ ಮುಂಭಾಗದಲ್ಲಿ ಟಿವಿಎಸ್ ಯುರೋಗ್ರಿಪ್ ಟಯರ್ಸ್ ಜಾಹೀರಾತು ಕಾಣಿಸಿಕೊಳ್ಳಲಿದ್ದು, ಇದರ ಜೊತೆಗೆ ಹಿಂಭಾಗದಲ್ಲಿ ಇತಿಹಾದ್ ಏರ್ವೇಸ್ನ ಜಾಹೀರಾತು ಗೋಚರಿಸಲಿದೆ. ಅಂದರೆ ಈ ಹಿಂದೆಯಿದ್ದ ಇಂಡಿಯಾ ಸಿಮೆಂಟ್ನ ಜಾಹೀರಾತುನ್ನು ಕೈ ಬಿಟ್ಟು ಸಿಎಸ್ಕೆ ಫ್ರಾಂಚೈಸಿ ಈ ಬಾರಿ ಇತಿಹಾದ್ ಏರ್ವೇಸ್ ಜೊತೆ ಹೊಸ ಡೀಲ್ ಮಾಡಿಕೊಂಡಿದೆ.

ಈ ಸಣ್ಣ ಪುಟ್ಟ ಚೇಂಜ್ಗಳನ್ನು ಹೊರತುಪಡಿಸಿ ಚೆನ್ನೈ ಸೂಪರ್ ಕಿಂಗ್ಸ್ ಜೆರ್ಸಿಯಲ್ಲಿ ಮಹತ್ವದ ಬದಲಾವಣೆಯನ್ನು ಮಾಡಿಕೊಂಡಿಲ್ಲ. ಅದರಂತೆ ಸಿಎಸ್ಕೆ ತಂಡವು ಕಳೆದ ಬಾರಿಯ ಜೆರ್ಸಿಯ ವಿನ್ಯಾಸದಲ್ಲೇ ಐಪಿಎಲ್ ಸೀಸನ್-17 ರಲ್ಲೂ ಕಣಕ್ಕಿಳಿಯಲಿದೆ.

ಚೆನ್ನೈ ಸೂಪರ್ ಕಿಂಗ್ಸ್ ತಂಡ: ಎಂಎಸ್ ಧೋನಿ (ನಾಯಕ), ಮೊಯೀನ್ ಅಲಿ, ದೀಪಕ್ ಚಹರ್, ಡೆವೊನ್ ಕಾನ್ವೇ, ತುಷಾರ್ ದೇಶಪಾಂಡೆ, ಶಿವಂ ದುಬೆ, ರುತುರಾಜ್ ಗಾಯಕ್ವಾಡ್, ರಾಜವರ್ಧನ್ ಹಂಗರ್ಗೇಕರ್, ರವೀಂದ್ರ ಜಡೇಜಾ, ಅಜಯ್ ಮಂಡಲ್, ಮುಖೇಶ್ ಚೌಧರಿ, ಮಥೀಶ ಪತಿರಾನಾ, ಅಜಿಂಕ್ಯ ರಹಾನೆ, ಶೇಕ್ ಸಿಂಘೆಲ್ ರಷೀದ್, ಎಂ. , ನಿಶಾಂತ್ ಸಿಂಧು, ಪ್ರಶಾಂತ್ ಸೋಲಂಕಿ, ಮಹೇಶ್ ತೀಕ್ಷಣ, ರಚಿನ್ ರವೀಂದ್ರ, ಶಾರ್ದೂಲ್ ಠಾಕೂರ್, ಡೇರಿಲ್ ಮಿಚೆಲ್, ಸಮೀರ್ ರಿಜ್ವಿ, ಮುಸ್ತಾಫಿಜುರ್ ರೆಹಮಾನ್, ಅವನೀಶ್ ರಾವ್, ರಚಿನ್ ರವೀಂದ್ರ, ಶಾರ್ದೂಲ್ ಠಾಕೂರ್, ಡೇರಿಲ್ ಮಿಚೆಲ್, ಸಮೀರ್ ರಿಜ್ವಿ, ಅವನೀಶ್ ರಾವ್ ಅರವೆಲ್ಲಿ.




