IND vs ENG: ಒಂದೇ ಸರಣಿಯಲ್ಲಿ ಕಪಿಲ್, ಗಂಗೂಲಿಯಂತಹ ನಾಯಕರನ್ನು ಸರಿಗಟ್ಟಿದ ಗಿಲ್

Updated on: Aug 04, 2025 | 10:28 PM

Shubman Gill's England Triumph: ಇಂಗ್ಲೆಂಡ್ ಪ್ರವಾಸದಲ್ಲಿ ಶುಭಮನ್ ಗಿಲ್ ಅವರ ನಾಯಕತ್ವ ಮತ್ತು ಬ್ಯಾಟಿಂಗ್ ಅದ್ಭುತವಾಗಿತ್ತು. 2-2 ರಿಂದ ಸರಣಿ ಡ್ರಾ ಆದರೂ, ಗಿಲ್ ತಮ್ಮ ಚೊಚ್ಚಲ ನಾಯಕತ್ವದಲ್ಲಿ ಎರಡು ಟೆಸ್ಟ್ ಪಂದ್ಯಗಳನ್ನು ಗೆದ್ದು ಇತಿಹಾಸ ನಿರ್ಮಿಸಿದರು. ಅವರು 75.40 ರ ಸರಾಸರಿಯಲ್ಲಿ 754 ರನ್ ಗಳಿಸಿ ನಾಲ್ಕು ಶತಕಗಳನ್ನು ಬಾರಿಸಿದರು ಮತ್ತು 'ಪಂದ್ಯದ ಆಟಗಾರ' ಹಾಗೂ 'ಸರಣಿಯ ಆಟಗಾರ' ಪ್ರಶಸ್ತಿಗಳನ್ನು ಪಡೆದರು.

1 / 6
ಭಾರತ ಟೆಸ್ಟ್ ಕ್ರಿಕೆಟ್ ತಂಡದ ಯುವ ನಾಯಕ ಶುಭಮನ್ ಗಿಲ್, ಇಂಗ್ಲೆಂಡ್ ಪ್ರವಾಸದಲ್ಲಿ ತಮ್ಮ ನಾಯಕತ್ವ ಮತ್ತು ಬ್ಯಾಟಿಂಗ್ ಮೂಲಕ ಇತಿಹಾಸ ನಿರ್ಮಿಸಿದರು. ಈ ಸರಣಿಯನ್ನು ಗೆಲ್ಲಲಾಗದಿದ್ದರೂ 2-2 ರಿಂದ ಡ್ರಾದಲ್ಲಿ ಕೊನೆಗೊಳಿಸುವಲ್ಲಿ ಯಶಸ್ವಿಯಾದರು. ಆದಾಗ್ಯೂ ಗಿಲ್ ತಮ್ಮ ಚೊಚ್ಚಲ ನಾಯಕತ್ವದಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಇತಿಹಾಸ ಸೃಷ್ಟಿಸಿದರು.

2 / 6
ಈ ಸರಣಿಯಲ್ಲಿ, ಗಿಲ್ ನಾಯಕತ್ವದಲ್ಲಿ ಭಾರತ ತಂಡ ಎರಡು ಟೆಸ್ಟ್ ಪಂದ್ಯಗಳನ್ನು ಗೆದ್ದಿದೆ. ಈ ಸಾಧನೆಯೊಂದಿಗೆ, ಅವರು ಸೆನಾ (ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ನ್ಯೂಜಿಲೆಂಡ್, ಆಸ್ಟ್ರೇಲಿಯಾ) ದೇಶಗಳಲ್ಲಿ ತಲಾ ಎರಡು ಟೆಸ್ಟ್ ಗೆಲುವುಗಳನ್ನು ದಾಖಲಿಸಿದ್ದ ಕಪಿಲ್ ದೇವ್, ಸೌರವ್ ಗಂಗೂಲಿ ಮತ್ತು ಸುನಿಲ್ ಗವಾಸ್ಕರ್ ಅವರಂತಹ ಲೆಜೆಂಡರಿ ನಾಯಕರ ಪಟ್ಟಿಯಲ್ಲಿ ಸೇರ್ಪಡೆಗೊಂಡಿದ್ದಾರೆ.

3 / 6
ಅದರಲ್ಲೂ ಶುಭ್​ಮನ್ ಗಿಲ್ ತಮ್ಮ ಮೊದಲ ನಾಯಕತ್ವದಲಿತೇ ಈ ಮೈಲಿಗಲ್ಲನ್ನು ಸಾಧಿಸಿದ್ದು, ಅವರ ಪಾಲಿಗೆ ದೊಡ್ಡ ಸಾಧನೆಯಾಗಿದೆ. ಇನ್ನು ಈ ವಿಚಾರದಲ್ಲಿ ಮೊದಲ ಸ್ಥಾನದಲ್ಲಿರುವ ವಿರಾಟ್ ಕೊಹ್ಲಿ ಸೆನಾ ದೇಶಗಳಲ್ಲಿ ಭಾರತದ ಪರ ಅತಿ ಹೆಚ್ಚು ಟೆಸ್ಟ್ ಪಂದ್ಯಗಳನ್ನು ಗೆದ್ದ ನಾಯಕ ಎನಿಸಿಕೊಂಡಿದ್ದಾರೆ. ಕೊಹ್ಲಿ ನಾಯಕತ್ವದಲ್ಲಿ ಭಾರತ 7 ಟೆಸ್ಟ್ ಪಂದ್ಯಗಳನ್ನು ಗೆದ್ದಿದೆ.

4 / 6
ಬ್ಯಾಟ್ಸ್‌ಮನ್ ಆಗಿ, ಗಿಲ್ ಇಂಗ್ಲೆಂಡ್‌ನ ಕಠಿಣ ಪರಿಸ್ಥಿತಿಗಳಲ್ಲಿಯೂ ಅದ್ಭುತ ಪ್ರದರ್ಶನ ನೀಡಿದರು. ಆಡಿದ ಐದು ಟೆಸ್ಟ್ ಪಂದ್ಯಗಳಲ್ಲಿ 75.40 ರ ಸರಾಸರಿಯಲ್ಲಿ 754 ರನ್ ಗಳಿಸಿದರು, ಇದರಲ್ಲಿ ನಾಲ್ಕು ಶತಕಗಳು ಸೇರಿವೆ. ಅವರ ಬ್ಯಾಟಿಂಗ್ ತಂಡವನ್ನು ಬಲಪಡಿಸಿದ್ದಲ್ಲದೆ, ಅವರಿಗೆ ಅನೇಕ ವೈಯಕ್ತಿಕ ಗೌರವಗಳನ್ನು ತಂದುಕೊಟ್ಟಿತು.

5 / 6
 ಈ ಪ್ರವಾಸದಲ್ಲಿ ಅಮೋಘ ಪ್ರದರ್ಶನ ನೀಡಿದ ಗಿಲ್​ಗೆ ‘ಪಂದ್ಯದ ಆಟಗಾರ' ಮತ್ತು 'ಸರಣಿಯ ಆಟಗಾರ' ಪ್ರಶಸ್ತಿಗಳು ಲಭಿಸಿದವು. ಇದರೊಂದಿಗೆ, ಇಂಗ್ಲೆಂಡ್‌ನಲ್ಲಿ ಈ ಎರಡೂ ಪ್ರಶಸ್ತಿಗಳನ್ನು ಗೆದ್ದ ಭಾರತದ ಎರಡನೇ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅವರಿಗಿಂತ ಮೊದಲು, ವಿರಾಟ್ ಕೊಹ್ಲಿ ಮಾತ್ರ ಈ ಸಾಧನೆ ಮಾಡಿದ್ದರು.

6 / 6
ಈ ಪ್ರವಾಸವು ಗಿಲ್ ಅವರ ವೃತ್ತಿಜೀವನದಲ್ಲಿ ಒಂದು ಪ್ರಮುಖ ಮೈಲಿಗಲ್ಲು ಮಾತ್ರವಲ್ಲ, ಭಾರತೀಯ ಕ್ರಿಕೆಟ್‌ನ ಭವಿಷ್ಯಕ್ಕೂ ಉತ್ತಮ ಸಂಕೇತವಾಗಿದೆ. ಶುಭಮನ್ ಗಿಲ್ ಈ ಪ್ರವಾಸದ ಮೂಲಕ ತಾವು ಒಬ್ಬ ಶ್ರೇಷ್ಠ ಬ್ಯಾಟ್ಸ್‌ಮನ್ ಮಾತ್ರವಲ್ಲದೆ ಶ್ರೇಷ್ಠ ನಾಯಕ ಎಂದು ಸಾಬೀತುಪಡಿಸಿದರು.