- Kannada News Photo gallery Cricket photos Danish Kaneria greets on Diwali expresses wishes to pray at Ram Mandir in Ayodhya
ಜೈ ಶ್ರೀರಾಮ್ ಘೋಷಣೆ ಕೂಗಿ, ರಾಮ ಮಂದಿರಕ್ಕೆ ಭೇಟಿ ನೀಡುವುದೇ ನನ್ನ ಗುರಿ ಎಂದ ಪಾಕ್ ಕ್ರಿಕೆಟರ್..!
ಎಲ್ಲಾ ನಾಗರೀಕರಿಗೂ ದೀಪಾವಳಿಯ ಶುಭಾಶಯ ಕೋರಿರುವ ಪಾಕ್ ತಂಡದ ಮಾಜಿ ಆಟಗಾರ ಡ್ಯಾನಿಶ್ ಕನೇರಿಯಾ, ಜೈ ಶ್ರೀರಾಮ್ ಘೋಷಣೆ ಕೂಗುವುದರೊಂದಿಗೆ ರಾಮ ಮಂದಿರಕ್ಕೆ ಭೇಟಿ ನೀಡುವುದೇ ನನ್ನ ಗುರಿ ಎಂದು ಟ್ವೀಟ್ ಮಾಡಿದ್ದಾರೆ.
Updated on: Oct 24, 2022 | 12:37 PM

ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ತಂಡವನ್ನು 4 ವಿಕೆಟ್ಗಳಿಂದ ಮಣಿಸುವುದರೊಂದಿಗೆ ಟೀಂ ಇಂಡಿಯಾ ತನ್ನ ವಿಶ್ವಕಪ್ ಅಭಿಯಾನವನ್ನು ಆರಂಭಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕ್ ಪಡೆ ಟೀಂ ಇಂಡಿಯಾಕ್ಕೆ 160 ರನ್ ಟಾರ್ಗೆಟ್ ನೀಡಿತ್ತು. ಗುರಿ ಬೆನ್ನಟ್ಟಿದ ರೋಹಿತ್ ಪಡೆ 4 ವಿಕೆಟ್ಗಳಿಂದ ರೋಚಕ ಜಯ ಸಾದಿಸಿತು.

ಈ ಗೆಲುವಿನಲ್ಲಿ ಕೊಹ್ಲಿ ಹಾಗೂ ಹಾರ್ದಿಕ್ ಪಾಂಡ್ಯ ಅವರ ಶತಕದ ಜೊತೆಯಾಟ ಪ್ರಮುಖ ಪಾತ್ರವಹಿಸಿತು. ಈ ಇಬ್ಬರಲ್ಲದೆ ಬೌಲಿಂಗ್ನಲ್ಲಿ ತಲಾ 3 ವಿಕೆಟ್ ಪಡೆದು ಮಿಂಚಿದ ಅರ್ಷದೀಪ್ ಸಿಂಗ್ ಹಾಗೂ ಹಾರ್ದಿಕ್ ಪಾಂಡ್ಯ ಗೆಲುವಿನ ಹೀರೋಗಳು ಎನಿಸಿಕೊಂಡರು.

ಪಾಕ್ ವಿರುದ್ಧ ಸದಾ ಅದ್ಭುತ ಪ್ರದರ್ಶನ ನೀಡುವ ಕೊಹ್ಲಿ, ಈ ಪಂದ್ಯದಲ್ಲೂ ಮಿಂಚಿನ ಬ್ಯಾಟಿಂಗ್ ಪ್ರದರ್ಶಿಸಿದರು. ಈ ಪಂದ್ಯದಲ್ಲಿ 53 ಎಸೆತಗಳನ್ನು ಎದುರಿಸಿದ ಕೊಹ್ಲಿ ಅಜೇಯ 82 ರನ್ ಸಿಡಿಸಿದರು.

ಈ ಮೂಲಕ ಟೀಂ ಇಂಡಿಯಾ, ಬಾರತೀಯರಿಗೆ ಒಂದು ದಿನ ಮುಂಚಿತವಾಗಿಯೇ ದೀಪಾವಳಿಯ ಉಡುಗೂರೆ ನೀಡಿತು. ಟೀಂ ಇಂಡಿಯಾ ಮಾತ್ರವಲ್ಲದೆ ಪಾಕ್ ತಂಡದ ಮಾಜಿ ಕ್ರಿಕೆಟರ್ ಕೂಡ ದೀಪಾವಳಿಯ ಶುಭಾಶಯ ಕೋರಿದ್ದು, ತನ್ನಲ್ಲಿರುವ ಒಂದು ಬಯಕೆಯನ್ನು ಹೊರಹಾಕಿದ್ದಾರೆ.

ವಿಶ್ವದ ಎಲ್ಲಾ ನಾಗರೀಕರಿಗೂ ದೀಪಾವಳಿಯ ಶುಭಾಶಯ ಕೋರಿರುವ ಪಾಕ್ ತಂಡದ ಮಾಜಿ ಆಟಗಾರ ಡ್ಯಾನಿಶ್ ಕನೇರಿಯಾ, ಜೈ ಶ್ರೀರಾಮ್ ಘೋಷಣೆ ಕೂಗುವುದರೊಂದಿಗೆ ರಾಮ ಮಂದಿರಕ್ಕೆ ಭೇಟಿ ನೀಡುವುದೇ ನನ್ನ ಗುರಿ ಎಂದು ಟ್ವೀಟ್ ಮಾಡಿದ್ದಾರೆ.

ಇನ್ನು ಪಾಕಿಸ್ತಾನ ತಂಡದ ಪರ ಸಾಕಷ್ಟು ಕ್ರಿಕೆಟ್ ಆಡಿರುವ ಡ್ಯಾನಿಶ್ ಕನೇರಿಯಾ , 61 ಟೆಸ್ಟ್ ಮತ್ತು 18 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಕನೇರಿಯಾ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 261 ಟೆಸ್ಟ್ ವಿಕೆಟ್ ಮತ್ತು 15 ಏಕದಿನ ವಿಕೆಟ್‌ಗಳನ್ನು ಪಡೆದಿದ್ದಾರೆ.




