- Kannada News Photo gallery Cricket photos Daryl Mitchell's Record Breaking ODI Dominance vs India: Centuries & Historic Feats
ಟೀಂ ಇಂಡಿಯಾ ವಿರುದ್ಧ ಈ ಸಾಧನೆ ಮಾಡಿದ ವಿಶ್ವದ ಮೊದಲ ಆಟಗಾರ ಡ್ಯಾರಿಲ್ ಮಿಚೆಲ್
Daryl Mitchell Masterclass: ಭಾರತ-ನ್ಯೂಜಿಲೆಂಡ್ ಏಕದಿನ ಸರಣಿಯಲ್ಲಿ ಡ್ಯಾರಿಲ್ ಮಿಚೆಲ್ ಭರ್ಜರಿ ಪ್ರದರ್ಶನ ನೀಡಿದ್ದಾರೆ. ಮೂರು ಪಂದ್ಯಗಳಲ್ಲಿ ಎರಡು ಶತಕ, ಒಂದು ಅರ್ಧಶತಕ ಸೇರಿದಂತೆ 352 ರನ್ ಗಳಿಸಿ ದಾಖಲೆ ಬರೆದಿದ್ದಾರೆ. ಭಾರತದ ವಿರುದ್ಧ ನಾಲ್ಕು ಬಾರಿ 130ಕ್ಕೂ ಹೆಚ್ಚು ರನ್ ಗಳಿಸಿದ ವಿಶ್ವದ ಮೊದಲ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದು ಕಿವೀಸ್ ಆಟಗಾರನೊಬ್ಬ 3 ಪಂದ್ಯಗಳ ಸರಣಿಯಲ್ಲಿ ಗಳಿಸಿದ ಅತ್ಯಧಿಕ ರನ್.
Updated on:Jan 18, 2026 | 7:12 PM

ಭಾರತ-ನ್ಯೂಜಿಲೆಂಡ್ ಏಕದಿನ ಸರಣಿಯಲ್ಲಿ ಕಿವೀಸ್ ಪರ ಸ್ಥಿರ ಪ್ರದರ್ಶನ ನೀಡಿದ ಆಟಗಾರನೆಂದರೆ ಅದು ಅನುಭವಿ ಡ್ಯಾರಿಲ್ ಮಿಚೆಲ್. ಈ ಸರಣಿಯಲ್ಲಿ ಆಡಿದ ಮೂರು ಪಂದ್ಯಗಳಲ್ಲೂ ಅವರು 1 ಅರ್ಧಶತಕ ಹಾಗೂ 2 ಶತಗಳನ್ನು ಬಾರಿಸಿದ್ದಾರೆ. ಮೂರನೇ ಪಂದ್ಯದಲ್ಲೂ ಅವರಿಂದ ಶತಕದ ಇನ್ನಿಂಗ್ಸ್ ಮೂಡಿಬಂತು.

ಸರಣಿಯ ಅಂತಿಮ ಪಂದ್ಯದಲ್ಲಿ 131 ಎಸೆತಗಳನ್ನು ಎದುರಿಸಿದ ಮಿಚೆಲ್ 15 ಬೌಂಡರಿ ಮತ್ತು ಮೂರು ಸಿಕ್ಸರ್‌ಗಳೊಂದಿಗೆ 104.58 ರ ಸ್ಟ್ರೈಕ್ ರೇಟ್ನಲ್ಲಿ137 ರನ್ ಗಳಿಸಿದರು ಡ್ಯಾರಿಲ್ ಮಿಚೆಲ್ ಹಿಂದಿನ ಪಂದ್ಯದಲ್ಲಿಯೂ ಶತಕ ಬಾರಿಸಿದ್ದರು. ಇದು ಭಾರತದ ವಿರುದ್ಧ ಅವರ ನಾಲ್ಕನೇ ಏಕದಿನ ಶತಕವಾಗಿದೆ.

ಡ್ಯಾರಿಲ್ ಮಿಚೆಲ್ ಭಾರತದ ವಿರುದ್ಧ ಶತಕ ಗಳಿಸಿದಾಗಲೆಲ್ಲಾ 130 ಅಥವಾ ಅದಕ್ಕಿಂತ ಹೆಚ್ಚು ರನ್ ಗಳಿಸಿದ್ದಾರೆ ಎಂಬುದು ಗಮನಾರ್ಹ. ಅವರ ಕೊನೆಯ ಮೂರು ಸ್ಕೋರ್‌ಗಳು 130, 134 ಮತ್ತು ಅಜೇಯ 131 ಆಗಿದೆ. ಈ ಮೂಲಕ ಭಾರತದ ವಿರುದ್ಧ ಏಕದಿನ ಪಂದ್ಯಗಳಲ್ಲಿ ನಾಲ್ಕು ಬಾರಿ 130 ಅಥವಾ ಅದಕ್ಕಿಂತ ಹೆಚ್ಚು ರನ್ ಗಳಿಸಿದ ವಿಶ್ವದ ಮೊದಲ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ.

ಏಕದಿನ ಪಂದ್ಯಗಳಲ್ಲಿ ಒಂದೇ ತಂಡದ ವಿರುದ್ಧ ಈ ಸಾಧನೆ ಮಾಡಿದ ಕೇವಲ ನಾಲ್ಕನೇ ಬ್ಯಾಟ್ಸ್‌ಮನ್ ಕೂಡ ಅವರು. ರೋಹಿತ್ ಆಸ್ಟ್ರೇಲಿಯಾ ವಿರುದ್ಧ ಈ ಸಾಧನೆ ಮಾಡಿದ್ದರೆ, ಸಚಿನ್ ತೆಂಡೂಲ್ಕರ್ ಆಸ್ಟ್ರೇಲಿಯಾ ವಿರುದ್ಧ ಐದು ಬಾರಿ 130 ಅಥವಾ ಅದಕ್ಕಿಂತ ಹೆಚ್ಚು ರನ್ ಗಳಿಸಿದ್ದಾರೆ.

ಈ ಸರಣಿಯಲ್ಲಿ, ಡ್ಯಾರಿಲ್ ಮಿಚೆಲ್ ಮೂರು ಪಂದ್ಯಗಳಲ್ಲಿ ಎರಡು ಶತಕಗಳು ಮತ್ತು ಒಂದು ಅರ್ಧಶತಕ ಸೇರಿದಂತೆ ಒಟ್ಟು 352 ರನ್ ಕಲೆಹಾಕಿದ್ದಾರೆ. ಇದು ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ನ್ಯೂಜಿಲೆಂಡ್ ಆಟಗಾರನೊಬ್ಬ ಗಳಿಸಿದ ಅತಿ ಹೆಚ್ಚು ರನ್ಗಳ ದಾಖಲೆಯಾಗಿದೆ.
Published On - 7:11 pm, Sun, 18 January 26
