David Miller: ಸೋತರೂ, ಕಿಲ್ಲರ್ ಮಿಲ್ಲರ್ ಬ್ಯಾಟ್ನಿಂದ ಹೊಸ ವಿಶ್ವ ದಾಖಲೆ
TV9 Web | Updated By: ಝಾಹಿರ್ ಯೂಸುಫ್
Updated on:
Oct 03, 2022 | 12:32 PM
David Miller: ಟಿ20 ಕ್ರಿಕೆಟ್ನಲ್ಲಿ ಸೌತ್ ಆಫ್ರಿಕಾ ವಿರುದ್ಧ 2 ಸಾವಿರ ರನ್ ಪೂರೈಸಿದ ಮೊದಲ ಬ್ಯಾಟ್ಸ್ಮನ್ ಎಂಬ ಹೆಗ್ಗಳಿಕೆಗೂ ಮಿಲ್ಲರ್ ಪಾತ್ರರಾಗಿದ್ದಾರೆ. ಒಟ್ಟಿನಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ಕಿಲ್ಲರ್ ಮಿಲ್ಲರ್ ಹಲವು ದಾಖಲೆಗಳನ್ನು ಬರೆದಿರುವುದು ವಿಶೇಷ.
1 / 5
ಭಾರತ-ಸೌತ್ ಆಫ್ರಿಕಾ ನಡುವಣ 2ನೇ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ 16 ರನ್ಗಳ ರೋಚಕ ಜಯ ಸಾಧಿಸಿತು. ಆದರೆ ಒಂದು ಹಂತದಲ್ಲಿ ಹೊಡಿಬಡಿ ದಾಂಡಿಗ ಡೇವಿಡ್ ಮಿಲ್ಲರ್ ಟೀಮ್ ಇಂಡಿಯಾ ಸೋಲಿನ ಭೀತಿ ಹುಟ್ಟಿಸಿದ್ದರು ಎಂಬುದೇ ಸತ್ಯ.
2 / 5
238 ರನ್ಗಳ ಬೃಹತ್ ಟಾರ್ಗೆಟ್ ಅನ್ನು ಬೆನ್ನತ್ತಿದ ಡೇವಿಡ್ ಮಿಲ್ಲರ್ ಅಕ್ಷರಶಃ ಟೀಮ್ ಇಂಡಿಯಾ ಬೌಲರ್ಗಳ ಬೆಂಡೆತ್ತಿದರು. ಪರಿಣಾಮ ಕಿಲ್ಲರ್ ಮಿಲ್ಲರ್ ಬ್ಯಾಟ್ನಿಂದ ಕೇವಲ 46 ಎಸೆತಗಳಲ್ಲಿ 7 ಸಿಕ್ಸ್ ಹಾಗೂ 8 ಫೋರ್ನೊಂದಿಗೆ 106 ರನ್ಗಳ ಭರ್ಜರಿ ಶತಕ ಮೂಡಿಬಂತು.
3 / 5
ಈ ಶತಕದೊಂದಿಗೆ ಟಿ20 ಕ್ರಿಕೆಟ್ನಲ್ಲಿ ಯಾರು ಮಾಡದ ಸಾಧನೆಯನ್ನು ಡೇವಿಡ್ ಮಿಲ್ಲರ್ ಮಾಡಿದ್ದಾರೆ. ಅಂದರೆ ಟಿ20 ಕ್ರಿಕೆಟ್ನಲ್ಲಿ ಯಾವ ಬ್ಯಾಟ್ಸ್ಮನ್ ಕೂಡ 5ನೇ ಕ್ರಮಾಂಕದಲ್ಲಿ ಅಥವಾ ಅದಕ್ಕಿಂತ ಕೆಳಹಂತದ ಕ್ರಮಾಂಕದಲ್ಲಿ ಕಣಕ್ಕಿಳಿದು 2 ಶತಕ ಬಾರಿಸಿಲ್ಲ. ಇದೀಗ ಡೇವಿಡ್ ಮಿಲ್ಲರ್ ಟಿ20 ಕ್ರಿಕೆಟ್ನಲ್ಲಿ 5ನೇ ಕ್ರಮಾಂಕದಲ್ಲಿ ಕಣಕ್ಕಿಳಿದು 2 ಶತಕ ಬಾರಿಸಿ ಮೊದಲ ಬ್ಯಾಟ್ಸ್ಮನ್ ಎನಿಸಿಕೊಂಡಿದ್ದಾರೆ.
4 / 5
ಇದಕ್ಕೂ ಮುನ್ನ 2017 ರಲ್ಲಿ ಬಾಂಗ್ಲಾದೇಶ್ ವಿರುದ್ಧ ಡೇವಿಡ್ ಮಿಲ್ಲರ್ 5ನೇ ಕ್ರಮಾಂಕದಲ್ಲಿ ಭರ್ಜರಿ ಸೆಂಚುರಿ ಸಿಡಿಸಿದ್ದರು. ಇದೀಗ ಟೀಮ್ ಇಂಡಿಯಾ ವಿರುದ್ಧ ಕೂಡ ಸ್ಪೋಟಕ ಶತಕ ಬಾರಿಸುವ ಮೂಲಕ ವಿಶೇಷ ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾರೆ.
5 / 5
ಅಷ್ಟೇ ಅಲ್ಲದೆ ಟಿ20 ಕ್ರಿಕೆಟ್ನಲ್ಲಿ ಸೌತ್ ಆಫ್ರಿಕಾ ವಿರುದ್ಧ 2 ಸಾವಿರ ರನ್ ಪೂರೈಸಿದ ಮೊದಲ ಬ್ಯಾಟ್ಸ್ಮನ್ ಎಂಬ ಹೆಗ್ಗಳಿಕೆಗೂ ಮಿಲ್ಲರ್ ಪಾತ್ರರಾಗಿದ್ದಾರೆ. ಒಟ್ಟಿನಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ಕಿಲ್ಲರ್ ಮಿಲ್ಲರ್ ಹಲವು ದಾಖಲೆಗಳನ್ನು ಬರೆದಿರುವುದು ವಿಶೇಷ.