ಈ ಫೋಟೋದಲ್ಲಿರುವ ಇಬ್ಬರು ಸ್ಟಾರ್ ಆಟಗಾರರನ್ನು ಗುರುತಿಸಬಲ್ಲಿರಾ?

| Updated By: ಝಾಹಿರ್ ಯೂಸುಫ್

Updated on: Jan 15, 2022 | 4:49 PM

Ashes Series 2021-22: ಯುವರಾಜ್ ಸಿಂಗ್-ಮೊಹಮ್ಮದ್ ಕೈಫ್, ವಿರಾಟ್ ಕೊಹ್ಲಿ- ರವೀಂದ್ರ ಜಡೇಜಾ ಅಂಡರ್​ 19 ತಂಡಗಳಿಂದಲೇ ಜೊತೆಯಾಗಿ ಕಾಣಿಸಿಕೊಂಡು ನಂತರ ಟೀಮ್ ಇಂಡಿಯಾಗೆ ಎಂಟ್ರಿ ಕೊಟ್ಟಿದ್ದರು.

1 / 5
ಕ್ರಿಕೆಟ್​ ಅಂಗಳದಲ್ಲಿ ಬಾಲ್ಯದಲ್ಲಿ ಜೊತೆಯಾಗಿ ಇನಿಂಗ್ಸ್​ ಆರಂಭಿಸಿ ಆ ಬಳಿಕ ರಾಷ್ಟ್ರೀಯ ತಂಡದ ಪರ ಆಡಿದ ಕೆಲವೇ ಕೆಲವು ಆಟಗಾರರು ಮಾತ್ರ ಕಾಣ ಸಿಗುತ್ತಾರೆ. ಈ ಪಟ್ಟಿಯಲ್ಲಿ ಕೆಎಲ್ ರಾಹುಲ್ ಹಾಗೂ ಮಯಾಂಕ್ ಅಗರ್ವಾಲ್ ಹೆಸರು ಕೂಡ ಇದೆ. ಆದರೆ ಈ ಇಬ್ಬರು ಬಾಲ್ಯದಲ್ಲಿ ಜೊತೆಯಾಗಿ ಆಡಿರಲಿಲ್ಲ. ಇದಾಗ್ಯೂ ಇಬ್ಬರು ರಣಜಿ ಕ್ರಿಕೆಟ್​ನಲ್ಲಿ ಜೊತೆಯಾಗಿ ಆಡಿ ಆ ಬಳಿಕ ಟೀಮ್ ಇಂಡಿಯಾ ಪರ ಇನಿಂಗ್ಸ್​ ಆರಂಭಿಸಿದ್ದರು.

2 / 5
ಇನ್ನು ಸಚಿನ್ ತೆಂಡೂಲ್ಕರ್-ವಿನೋದ್ ಕಾಂಬ್ಳಿ ಕೂಡ ಬಾಲ್ಯದಲ್ಲಿ ಜೊತೆಯಾಗಿ ಆ ಬಳಿಕ ಟೀಮ್ ಇಂಡಿಯಾವನ್ನು ಪ್ರತಿನಿಧಿಸಿದ್ದರು. ಇನ್ನು ಯುವರಾಜ್ ಸಿಂಗ್-ಮೊಹಮ್ಮದ್ ಕೈಫ್, ವಿರಾಟ್ ಕೊಹ್ಲಿ- ರವೀಂದ್ರ ಜಡೇಜಾ  ಅಂಡರ್​ 19 ತಂಡಗಳಿಂದಲೇ ಜೊತೆಯಾಗಿ ಕಾಣಿಸಿಕೊಂಡು ನಂತರ ಟೀಮ್ ಇಂಡಿಯಾಗೆ ಎಂಟ್ರಿ ಕೊಟ್ಟಿದ್ದರು.

3 / 5
ಇದಾಗ್ಯೂ ಪುಟ್ಟ ಬಾಲಕರಾಗಿದ್ದಾಗ ಜೊತೆಯಾಗಿ ಆಡಿ ಆ ಬಳಿಕ ರಾಷ್ಟ್ರೀಯ ತಂಡದ ಪರ ಇನಿಂಗ್ಸ್​ ಆರಂಭಿಸಿದ ಅಪರೂಪದ ಕ್ಷಣಕ್ಕೆ ಹೊಬಾರ್ಟ್ ಮೈದಾನ ಸಾಕ್ಷಿಯಾಗಿತ್ತು. ಹೌದು, ಆ್ಯಶಸ್ ಸರಣಿಯ ಕೊನೆಯ ಪಂದ್ಯದಲ್ಲಿ ಆಸ್ಟ್ರೇಲಿಯಾ ಪರ ಡೇವಿಡ್ ವಾರ್ನರ್ ಹಾಗೂ ಉಸ್ಮಾನ್ ಖ್ವಾಜಾ ಇನಿಂಗ್ಸ್ ಆರಂಭಿಸಿದ್ದರು.

4 / 5
ಈ ಇಬ್ಬರು ಆಟಗಾರರು ಬಾಲ್ಯದಿಂದಲೇ ಜೊತೆಯಾಗಿ ಕ್ರಿಕೆಟ್ ಆಡುತ್ತಾ ಬೆಳೆದವರು ಎಂಬುದು ವಿಶೇಷ. ಹೀಗಾಗಿ ಇಂತಹದೊಂದು ಅಪರೂಪದ ಕ್ಷಣವನ್ನು ಡೇವಿಡ್ ವಾರ್ನರ್ ಹಂಚಿಕೊಂಡಿದ್ದರು. ಉಸ್ಮಾನ್ ಖ್ವಾಜಾ ಜೊತೆಗಿನ ಬಾಲ್ಯದ ಚಿತ್ರವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ವಾರ್ನರ್, 90 ರ ದಶಕದಲ್ಲಿ ನಮಗೆ ಎಲ್ಲವೂ ಸುಲಭದಂತೆ ತೋರುತ್ತಿತ್ತು ಉಸ್ಮಾನ್... ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

5 / 5
ಈ ಮೂಲಕ ಬಾಲ್ಯದಲ್ಲಿ ಜೊತೆಯಾಗಿ ಆಡಿ, ಅದೇ ಜೋಡಿ ಆಸ್ಟ್ರೇಲಿಯಾ ತಂಡದ ಪರ ಆರಂಭಿಕರಾಗಿ ಕಣಕ್ಕಿಳಿಯುತ್ತಿರುವ ಅಪರೂಪದ ಕ್ಷಣವನ್ನು ಡೇವಿಡ್ ವಾರ್ನರ್ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ. ಇದೀಗ ಡೇವಿಡ್ ವಾರ್ನರ್ ಹಾಗೂ ಉಸ್ಮಾನ್ ಖ್ವಾಜಾ ಅವರ ಈ ಬಾಲ್ಯದ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಇಬ್ಬರು ಎಡಗೈ ದಾಂಡಿಗರ ಗೆಳೆತನಕ್ಕೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.