- Kannada News Photo gallery Cricket photos Deepika Padukone off to Qatar to unveil FIFA World Cup 2022 Trophy photo viral
ಫಿಫಾ ವಿಶ್ವಕಪ್ ಟ್ರೋಫಿಯನ್ನು ಅನಾವರಣಗೊಳಿಸಲು ಕತಾರ್‌ಗೆ ಹಾರಿದ ದೀಪಿಕಾ ಪಡುಕೋಣೆ..! ಫೋಟೋ ನೋಡಿ
FIFA World Cup 2022: ಇಂದು (ಭಾನುವಾರ) ಫ್ರಾನ್ಸ್ ಮತ್ತು ಅರ್ಜೆಂಟೀನಾ ನಡುವಿನ ಫಿಫಾ ವಿಶ್ವಕಪ್ 2022 ಫೈನಲ್‌ನಲ್ಲಿ ದೀಪಿಕಾ ವಿಶ್ವಕಪ್ ಟ್ರೋಫಿಯನ್ನು ಅನಾವರಣಗೊಳಿಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದ್ದಿದೆ.
Updated on: Dec 18, 2022 | 11:45 AM

ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಅಭಿನಯದ 'ಪಠಾಣ್' ಚಿತ್ರದ ಮೊದಲ ಹಾಡು 'ಬೇಷರಂ ರಂಗ್' ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಸಾಕಷ್ಟು ಟೀಕೆಗೆ ಗುರಿಯಾಗಿದೆ. ಇದರಿಂದ ದೀಪಿಕಾ ಕೂಡ ನಿಂದನೆಗೆ ಒಳಗಾಗಿದ್ದಾರೆ. ಇಂಟರ್ನೆಟ್ನಲ್ಲಿ ಭಾರಿ ವೈರಲ್ ಆಗುತ್ತಿರುವ ಈ ಹಾಡನ್ನು ನೆಟ್ಟಿಗರು ಟೀಕಿಸಿದ್ದಾರೆ.

ಕೆಲವರು ದೀಪಿಕಾ ಅವರ ಬಿಕಿನಿ ಲುಕ್ ಮತ್ತು ಎಕ್ಸ್ ಪೋಷರ್ ಬಗ್ಗೆ ಕೋಪಗೊಂಡಿದ್ದಾರೆ. ಈ ಕಾರಣಕ್ಕಾಗಿ ಇದು 2022 ರ ಅತ್ಯಂತ ದೊಡ್ಡ ವಿವಾದಗಳಲ್ಲಿ ಒಂದಾಗಿದೆ. ದೇಶದಲ್ಲಿನ ಈ ವಿವಾದಗಳ ನಡುವೆ, ಕತಾರ್‌ನಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್ ಫೈನಲ್ ನೋಡಲು ದೀಪಿಕಾ ಕತಾರ್‌ಗೆ ಹಾರಿದ್ದಾರೆ.

ಇಂದು (ಭಾನುವಾರ) ಫ್ರಾನ್ಸ್ ಮತ್ತು ಅರ್ಜೆಂಟೀನಾ ನಡುವಿನ ಫಿಫಾ ವಿಶ್ವಕಪ್ 2022 ಫೈನಲ್‌ನಲ್ಲಿ ದೀಪಿಕಾ ವಿಶ್ವಕಪ್ ಟ್ರೋಫಿಯನ್ನು ಅನಾವರಣಗೊಳಿಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದ್ದಿದೆ.

ಕತಾರ್‌ಗೆ ಹಾರಲು ವಿಮಾನ ನಿಲ್ದಾಣಕ್ಕೆ ಬಂದ ದೀಪಿಕ್ ಎದುರು ಪುಟ್ಟ ಬಾಲಕಿಯೊಬ್ಬಳು ವಿಶೇಷ ಮನವಿ ಇಟ್ಟಿದ್ದು, ಫುಟ್ಬಾಲ್ ದಂತಕತೆ ಮೆಸ್ಸಿ ಜೊತೆ ಸೆಲ್ಫಿ ತೆಗೆದುಕೊಳ್ಳುವಂತೆ ದೀಪಿಕಾರನ್ನು ಕೇಳಿಕೊಂಡಿದ್ದಾಳೆ. ದೀಪಿಕಾ ಕೂಡ ಬಾಲಕಿಯ ಮನವಿಗೆ ತಲೆಯಾಡಿಸಿದ್ದಾರೆ.

ದೀಪಿಕಾ ಅಭಿನಯದ ‘ಪಠಾಣ್’ ಪ್ರೇಕ್ಷಕರಿಗಾಗಿ ಬರುತ್ತಿರುವ ಅದ್ಧೂರಿ ಆ್ಯಕ್ಷನ್ ಸಿನಿಮಾ ಎಂದೇ ಹೇಳಬೇಕು. ಬಾಲಿವುಡ್ ನಟರಾದ ಶಾರುಖ್ ಖಾನ್, ಜಾನ್ ಅಬ್ರಹಾಂ ಮತ್ತು ನಟಿ ದೀಪಿಕಾ ಪಡುಕೋಣೆ ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಏತನ್ಮಧ್ಯೆ, 'ಪಠಾಣ್' ಸಿನಿಮಾ ಮುಂದಿನ ವರ್ಷ (2023) ಜನವರಿ 25 ರಂದು ಹಿಂದಿ ಜೊತೆಗೆ ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.



















