Devon Conway: ವರ್ಷದ ಮೊದಲ ಶತಕ ಸಿಡಿಸಿ ವಿಶೇಷ ದಾಖಲೆ ಬರೆದ ಕಾನ್ವೆ..!

| Updated By: ಝಾಹಿರ್ ಯೂಸುಫ್

Updated on: Jan 02, 2023 | 6:36 PM

Pakistan vs New Zealand: ಕಾನ್ವೆಯ ಶತಕದ ನೆರವಿನಿಂದ ಮೊದಲ ದಿನದಾಟದ ಅಂತ್ಯಕ್ಕೆ ನ್ಯೂಜಿಲೆಂಡ್ ತಂಡವು 6 ವಿಕೆಟ್ ನಷ್ಟಕ್ಕೆ 309 ರನ್​ ಕಲೆಹಾಕಿದೆ. ಪಾಕ್ ಪರ ಅಘ ಸಲ್ಮಾನ್ 3 ವಿಕೆಟ್ ಪಡೆದರೆ, ನಸೀಮ್ ಶಾ 2 ವಿಕೆಟ್ ಕಬಳಿಸಿದರು.

1 / 5
ಕರಾಚಿಯಲ್ಲಿ ಪಾಕಿಸ್ತಾನ್ ವಿರುದ್ಧ ನಡೆಯುತ್ತಿರುವ 2ನೇ ಪಂದ್ಯದಲ್ಲಿ ನ್ಯೂಜಿಲೆಂಡ್​ ತಂಡದ ಎಡಗೈ ದಾಂಡಿಗ ಡೆವೊನ್ ಕಾನ್ವೆ ಭರ್ಜರಿ ಶತಕ ಸಿಡಿಸಿದ್ದಾರೆ. ಇದರೊಂದಿಗೆ 2023 ರಲ್ಲಿ ಮೊದಲ ಶತಕ ಬಾರಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಕಿವೀಸ್ ಆಟಗಾರ ಪಾತ್ರರಾಗಿದ್ದಾರೆ.

2 / 5
ವಿಶೇಷ ಎಂದರೆ ಡೆವೊನ್ ಕಾನ್ವೆ ವರ್ಷದ ಮೊದಲ ಶತಕ ಬಾರಿಸುತ್ತಿರುವುದು ಇದು ಮೊದಲೇನಲ್ಲ. 2022 ರಲ್ಲೂ ಬಾಂಗ್ಲಾದೇಶ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ 122 ರನ್​ಗಳ ಭರ್ಜರಿ ಸೆಂಚುರಿ ಸಿಡಿಸಿ ಮೊದಲ ಶತಕವೀರ ಎನಿಸಿಕೊಂಡಿದ್ದರು.

3 / 5
ಇದೀಗ ಪಾಕ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕಿಳಿದ ಕಾನ್ವೆ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದರು. ಆರಂಭದಲ್ಲಿ ಎಚ್ಚರಿಕೆಯ ಆಟವಾಡಿದ್ದ ಎಡಗೈ ದಾಂಡಿಗ ನಿಧಾನಕ್ಕೆ ರನ್ ​ಗತಿಯನ್ನು ಹೆಚ್ಚಿಸುತ್ತಾ ಸಾಗಿದರು. ಪರಿಣಾಮ 156 ಎಸೆತಗಳಲ್ಲಿ ಶತಕ ಮೂಡಿಬಂತು. ಈ ಶತಕದೊಂದಿಗೆ ಸತತ ಎರಡು ವರ್ಷ ಮೊದಲ ಸೆಂಚುರಿ ಸಿಡಿಸಿದ ವಿಶೇಷ ದಾಖಲೆಯನ್ನು ಕಾನ್ವೆ ಬರೆದರು.

4 / 5
ಇನ್ನು ಈ ಶತಕದ ಬಳಿಕ ಬಿರುಸಿನ ಆಟದತ್ತ ಮುಖ ಮಾಡಿದ ಕಾನ್ವೆ 1 ಸಿಕ್ಸ್ ಹಾಗೂ 16 ಫೋರ್​ನೊಂದಿಗೆ 190 ಎಸೆತಗಳಲ್ಲಿ 122 ರನ್ ಬಾರಿಸಿದ್ದರು. ಈ ಹಂತದಲ್ಲಿ ಅಘ ಸಲ್ಮಾನ್ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಮುಂದಾಗಿ ಔಟಾದರು. ಇದಾಗ್ಯೂ ಅಷ್ಟರಲ್ಲಾಗಲೇ ನ್ಯೂಜಿಲೆಂಡ್ ತಂಡವು 2 ವಿಕೆಟ್ ನಷ್ಟಕ್ಕೆ 234 ರನ್​ ಕಲೆಹಾಕಿತ್ತು.

5 / 5
ಕಾನ್ವೆಯ ಶತಕದ ನೆರವಿನಿಂದ ಮೊದಲ ದಿನದಾಟದ ಅಂತ್ಯಕ್ಕೆ ನ್ಯೂಜಿಲೆಂಡ್ ತಂಡವು 6 ವಿಕೆಟ್ ನಷ್ಟಕ್ಕೆ 309 ರನ್​ ಕಲೆಹಾಕಿದೆ. ಪಾಕ್ ಪರ ಅಘ ಸಲ್ಮಾನ್ 3 ವಿಕೆಟ್ ಪಡೆದರೆ, ನಸೀಮ್ ಶಾ 2 ವಿಕೆಟ್ ಕಬಳಿಸಿದರು.

Published On - 6:36 pm, Mon, 2 January 23