AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ಆಟಗಾರ ತಂಡದಲ್ಲಿದ್ದಾಗ ಟೀಂ ಇಂಡಿಯಾ ಎಂದಿಗೂ ಸೋತಿಲ್ಲ..! ಇದು ಅಂಕಿಅಂಶ ಹೇಳಿದ ಸತ್ಯ

Dhruv Jurel: ಧ್ರುವ್ ಜುರೆಲ್ ಆಡಿರುವ ತಮ್ಮ 5 ಟೆಸ್ಟ್ ಪಂದ್ಯಗಳ ವೃತ್ತಿಜೀವನದಲ್ಲಿ ಟೀಂ ಇಂಡಿಯಾ ಎಲ್ಲಾ ಪಂದ್ಯಗಳನ್ನು ಗೆದ್ದಿದೆ. ಯಾವುದೇ ಸೋಲನ್ನು ಅನುಭವಿಸದೆ 5 ಪಂದ್ಯಗಳನ್ನು ಗೆದ್ದಿರುವ ಇವರು, ವೆಸ್ಟ್ ಇಂಡೀಸ್‌ನ ಮಾಜಿ ಆಟಗಾರ ಆಲ್ಡೈನ್ ಬ್ಯಾಪ್ಟಿಸ್ಟ್ ಅವರ ದಾಖಲೆಯನ್ನು ಸಮೀಪಿಸುತ್ತಿದ್ದಾರೆ. ಬ್ಯಾಟಿಂಗ್ ಮತ್ತು ವಿಕೆಟ್ ಕೀಪಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಧ್ರುವ್, ಟೀಂ ಇಂಡಿಯಾಗೆ ಅಮೂಲ್ಯ ಸ್ವತ್ತು ಎನಿಸಿಕೊಂಡಿದ್ದಾರೆ.

ಪೃಥ್ವಿಶಂಕರ
|

Updated on: Aug 06, 2025 | 9:24 PM

Share
ಯುವ ಆಟಗಾರರನ್ನು ಕಟ್ಟಿಕೊಂಡು ಇಂಗ್ಲೆಂಡ್‌ ಪ್ರವಾಸ ಮಾಡಿದ್ದ ಟೀಂ ಇಂಡಿಯಾ ಸರಣಿಯನ್ನು ಗೆಲ್ಲಲಾಗದಿದ್ದರೂ, ಆಂಗ್ಲರನ್ನು ಅವರದ್ದೇ ನೆಲದಲ್ಲಿ 2 ಪಂದ್ಯಗಳಲ್ಲಿ ಸೋಲಿಸುವ ಕೆಲಸ ಮಾಡಿತ್ತು. ಶುಭ್​ಮನ್ ಗಿಲ್ ನಾಯಕತ್ವದಲ್ಲಿ, ಯುವ ಭಾರತೀಯ ತಂಡವು ಇಂಗ್ಲೆಂಡ್ ವಿರುದ್ಧ ಅದ್ಭುತ ಪ್ರದರ್ಶನ ನೀಡಿ ಸರಣಿಯನ್ನು 2-2 ರಲ್ಲಿ ಸಮಬಲಗೊಳಿಸಿತು. ಈ ಸರಣಿಯ ಕೊನೆಯ ಪಂದ್ಯದಲ್ಲಿ ಆಡುವ ಅವಕಾಶ ಪಡೆದಿದ್ದ ಅವನ್ನೊಬ್ಬ ಆಟಗಾರ ಟೀಂ ಇಂಡಿಯಾಕ್ಕೆ ಅದೃಷ್ಟಶಾಲಿ ಎಂಬುದು ಮತ್ತೊಮ್ಮೆ ಸಾಬೀತಾಯಿತು.

1 / 5
ಟೀಂ ಇಂಡಿಯಾದ ಈ ಅದೃಷ್ಟಶಾಲಿಯ ಹೆಸರು ಧ್ರುವ್ ಜುರೆಲ್. ತಮ್ಮ ವಿಕೆಟ್ ಕೀಪಿಂಗ್ ಮತ್ತು ಬ್ಯಾಟಿಂಗ್‌ನಿಂದ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯುವ ಯತ್ನದಲ್ಲಿರುವ ಧ್ರುವ್, ಟೀಂ ಇಂಡಿಯಾದ ಪಾಲಿಗೆ ಅದೃಷ್ಟಶಾಲಿಯಾಗಿಯೂ ಹೊರಹೊಮ್ಮುತ್ತಿದ್ದಾರೆ.

2 / 5
ಧ್ರುವ್ ಜುರೆಲ್ ತಮ್ಮ ಸಣ್ಣ ಟೆಸ್ಟ್ ವೃತ್ತಿಜೀವನದಲ್ಲಿ ಇಲ್ಲಿಯವರೆಗೆ ಐದು ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಆಶ್ಚರ್ಯಕರವಾಗಿ, ಭಾರತ ಈ ಎಲ್ಲಾ ಪಂದ್ಯಗಳನ್ನು ಗೆದ್ದಿದೆ. ಅಂದರೆ, ಧ್ರುವ್ ಜುರೆಲ್ ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ ಇನ್ನೂ ಒಂದೇ ಒಂದು ಸೋಲನ್ನು ಅನುಭವಿಸಿಲ್ಲ.

3 / 5
ವಾಸ್ತವವಾಗಿ, ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ, ಒಂದೇ ಒಂದು ಪಂದ್ಯವನ್ನು ಸೋಲದೆ ಅತಿ ಹೆಚ್ಚು ಟೆಸ್ಟ್ ಗೆಲುವು ಸಾಧಿಸಿದ ದಾಖಲೆ ವೆಸ್ಟ್ ಇಂಡೀಸ್‌ನ ಮಾಜಿ ಆಲ್‌ರೌಂಡರ್ ಆಲ್ಡೈನ್ ಬ್ಯಾಪ್ಟಿಸ್ಟ್ ಅವರ ಹೆಸರಿನಲ್ಲಿದೆ. ಬ್ಯಾಪ್ಟಿಸ್ಟ್ ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ ಸತತ 10 ಟೆಸ್ಟ್ ಪಂದ್ಯಗಳ ಗೆಲುವಿನಲ್ಲಿ ಭಾಗಿಯಾಗಿದ್ದರು. ವಿಶೇಷವೆಂದರೆ ಆಲ್ಡೈನ್ ಬ್ಯಾಪ್ಟಿಸ್ಟ್ ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ ಕೇವಲ 10 ಪಂದ್ಯಗಳನ್ನು ಆಡಿದ್ದಾರೆ, ಅಂದರೆ, ಅವರು ತಮ್ಮ ವೃತ್ತಿಜೀವನದ ಕೊನೆಯವರೆಗೂ ಯಾವುದೇ ಟೆಸ್ಟ್ ಪಂದ್ಯವನ್ನು ಸೋತಿಲ್ಲ.

4 / 5
ಉತ್ತರ ಪ್ರದೇಶದ ಈ ಯುವ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ 2024 ರಲ್ಲಿ ಇಂಗ್ಲೆಂಡ್ ವಿರುದ್ಧ ತಮ್ಮ ಟೆಸ್ಟ್ ವೃತ್ತಿಜೀವನವನ್ನು ಪ್ರಾರಂಭಿಸಿದರು. ಮೊದಲ ಟೆಸ್ಟ್‌ನಲ್ಲಿಯೇ ತಮ್ಮ ಬ್ಯಾಟಿಂಗ್ ಮತ್ತು ವಿಕೆಟ್ ಕೀಪಿಂಗ್ ಮೂಲಕ ಎಲ್ಲರ ಗಮನ ಸೆಳೆದರು. ಜುರೇಲ್ ಇದುವರೆಗೆ ಆಡಿರುವ 5 ಪಂದ್ಯಗಳಲ್ಲಿ 36.42 ಸರಾಸರಿಯಲ್ಲಿ 255 ರನ್ ಗಳಿಸಿದ್ದಾರೆ, ಇದರಲ್ಲಿ 1 ಅರ್ಧಶತಕವೂ ಸೇರಿದೆ. ಅದೇ ಸಮಯದಲ್ಲಿ, ವಿಕೆಟ್ ಕೀಪರ್ ಆಗಿ, ಅವರು 9 ಕ್ಯಾಚ್‌ಗಳನ್ನು ಮತ್ತು 2 ಸ್ಟಂಪಿಂಗ್‌ಗಳನ್ನು ಸಹ ಮಾಡಿದ್ದಾರೆ.

5 / 5
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ

NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ

ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!

ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ

ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್

ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ

ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು

ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ

ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!