6,6,6,6,6,6: IPL ಆರಂಭಕ್ಕೂ ಮುನ್ನವೇ DK ಯ ಸಿಡಿಲಬ್ಬರ ಶುರು
TV9 Web | Updated By: ಝಾಹಿರ್ ಯೂಸುಫ್
Updated on:
Feb 21, 2023 | 8:30 PM
Dinesh Karthik: ನವಿ ಮುಂಬೈನಲ್ಲಿ ನಡೆಯುತ್ತಿರುವ ಡಿವೈ ಪಾಟೀಲ್ ಟಿ20 ಕಪ್ನಲ್ಲಿ ದಿನೇಶ್ ಕಾರ್ತಿಕ್ ಕಾಣಿಸಿಕೊಂಡಿದ್ದಾರೆ. ಆರ್ಬಿಐ ನಡುವಣ ಈ ಪಂದ್ಯದಲ್ಲಿ ಡಿಕೆ ಡಿವೈ ಪಾಟೀಲ್-ಬಿ ತಂಡದ ಪರ ಕಣಕ್ಕಿಳಿದಿದ್ದರು.
1 / 8
ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 16 ಶುರುವಾಗಲು ಇನ್ನು ತಿಂಗಳು ಮಾತ್ರ ಉಳಿದಿವೆ. ಈಗಾಗಲೇ ಕೆಲ ಫ್ರಾಂಚೈಸಿಗಳು ಅಭ್ಯಾಸ ಕ್ಯಾಂಪ್ಗಳನ್ನು ಕೂಡ ಶುರು ಮಾಡಿದೆ. ಆದರೆ ಆರ್ಸಿಬಿ ಆಟಗಾರ ದಿನೇಶ್ ಕಾರ್ತಿಕ್ ಮಾತ್ರ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಕಾಮೆಂಟೇಟರ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.
2 / 8
ಆದರೆ 2ನೇ ಟೆಸ್ಟ್ ಪಂದ್ಯವು ಕೇವಲ 3 ದಿನಕ್ಕೆ ಮುಕ್ತಾಯಗೊಂಡಿರುವ ಹಿನ್ನಲೆಯಲ್ಲಿ ಇದೀಗ ಕಾರ್ತಿಕ್ ಫುಲ್ ಫ್ರೀಯಾಗಿದ್ದಾರೆ. ಏಕೆಂದರೆ ಭಾರತ-ಆಸ್ಟ್ರೇಲಿಯಾ ನಡುವಣ 3ನೇ ಪಂದ್ಯ ಶುರುವಾಗುವುದು ಮಾರ್ಚ್ 1 ರಿಂದ. ಇದರ ನಡುವೆ ಸಿಕ್ಕಿರುವ ಈ ಕಾಲಾವಕಾಶದಲ್ಲಿ ಡಿಕೆ ಟಿ20 ಲೀಗ್ ಆಡಲು ತೆರಳಿದ್ದಾರೆ.
3 / 8
ಹೌದು, ನವಿ ಮುಂಬೈನಲ್ಲಿ ನಡೆಯುತ್ತಿರುವ ಡಿವೈ ಪಾಟೀಲ್ ಟಿ20 ಕಪ್ನಲ್ಲಿ ದಿನೇಶ್ ಕಾರ್ತಿಕ್ ಕಾಣಿಸಿಕೊಂಡಿದ್ದಾರೆ. ಆರ್ಬಿಐ ನಡುವಣ ಈ ಪಂದ್ಯದಲ್ಲಿ ಡಿಕೆ ಡಿವೈ ಪಾಟೀಲ್-ಬಿ ತಂಡದ ಪರ ಕಣಕ್ಕಿಳಿದಿದ್ದರು. ಮೊದಲ ಬ್ಯಾಟ್ ಮಾಡಿದ ಡಿವೈ ಪಾಟೀಲ್ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ಯಶ್ ಧುಲ್ 29 ರನ್ಗಳಿಸಿದರೆ, ಹಾರ್ದಿಕ್ ತಮೋರೆ 28 ರನ್ ಬಾರಿಸಿ ಔಟಾಗಿದ್ದರು.
4 / 8
ಆದರೆ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ದಿನೇಶ್ ಕಾರ್ತಿಕ್ ಇಡೀ ಪಂದ್ಯದ ಚಿತ್ರಣ ಬದಲಿಸಿದರು. ಆರ್ಬಿಐ ತಂಡದ ಬೌಲರ್ಗಳ ಬೆಂಡೆತ್ತಿದ ಡಿಕೆ ಮೈದಾನದ ಮೂಲೆ ಮೂಲೆಗೂ ಸಿಕ್ಸ್-ಫೋರ್ಗಳನ್ನು ಬಾರಿಸಿದರು.
5 / 8
ಅಲ್ಲದೆ ಕೇವಲ 38 ಎಸೆತಗಳಲ್ಲಿ 5 ಫೋರ್ ಹಾಗೂ 6 ಭರ್ಜರಿ ಸಿಕ್ಸರ್ಗಳೊಂದಿಗೆ 75 ರನ್ ಚಚ್ಚಿದರು. ಪರಿಣಾಮ ಡಿವೈ ಪಾಟೀಲ್ ಬಿ ತಂಡವು ನಿಗದಿತ 20 ಓವರ್ಗಳಲ್ಲಿ 186 ರನ್ ಕಲೆಹಾಕಿತು.
6 / 8
187 ರನ್ಗಳ ಕಠಿಣ ಗುರಿ ಪಡೆದ ಆರ್ಬಿಐ ತಂಡವು 7 ವಿಕೆಟ್ ನಷ್ಟಕ್ಕೆ 161 ರನ್ಗಳಿಸಲಷ್ಟೇ ಶಕ್ತರಾದರು. ಇದರೊಂದಿಗೆ ಡಿವೈ ಪಾಟೀಲ್ ಬಿ ತಂಡವು 25 ರನ್ಗಳ ಜಯ ಸಾಧಿಸಿತು. ಅಲ್ಲದೆ ಗೆಲುವಿನ ರೂವಾರಿ ದಿನೇಶ್ ಕಾರ್ತಿಕ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
7 / 8
ಸದ್ಯ ಡಿವೈ ಪಾಟೀಲ್ ಕಪ್ನಲ್ಲಿ ಭರ್ಜರಿ ಫಾರ್ಮ್ ಪ್ರದರ್ಶಿಸಿರುವ ದಿನೇಶ್ ಕಾರ್ತಿಕ್ ಐಪಿಎಲ್ ಆರಂಭಕ್ಕೂ ಮುನ್ನ ಅಬ್ಬರಿಸುವ ಸೂಚನೆ ನೀಡಿದ್ದಾರೆ. ಹೀಗಾಗಿ ಈ ಬಾರಿಯು ಆರ್ಸಿಬಿ ಡಿಕೆಯ ಫಿನಿಶಿಂಗ್ ಮೂಲಕ ಪಂದ್ಯಗಳನ್ನು ಗೆಲ್ಲಲಿದೆಯಾ ಕಾದು ನೋಡಬೇಕಿದೆ.
8 / 8
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ: ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ (ನಾಯಕ), ಮಹಿಪಾಲ್ ಲೊಮ್ರೋರ್, ಗ್ಲೆನ್ ಮ್ಯಾಕ್ಸ್‌ವೆಲ್, ಶಹಬಾಜ್ ಅಹ್ಮದ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ವನಿಂದು ಹಸರಂಗ, ಸುಯಶ್ ಪ್ರಭುದೇಸಾಯಿ, ಹರ್ಷಲ್ ಪಟೇಲ್, ವೇಯ್ನ್ ಪಾರ್ನೆಲ್, ಮೊಹಮ್ಮದ್ ಸಿರಾಜ್, ವೈಶಾಕ್ ವಿಜಯ್‌ಕುಮಾರ್, ಕರ್ಣ್ ಶರ್ಮಾ, ಡೇವಿಡ್ ವಿಲ್ಲಿ, ಮೈಕೆಲ್ ಬ್ರೇಸ್‌ವೆಲ್, ಫಿನ್ ಅಲೆನ್, ಸೋನು ಯಾದವ್, ಅನೂಜ್ ರಾವತ್, ಮನೋಜ್ ಭಾಂಡಗೆ, ಆಕಾಶ್ ದೀಪ್, ರಾಜನ್ ಕುಮಾರ್, ಅವಿನಾಶ್ ಸಿಂಗ್, ಹಿಮಾಂಶು ಶರ್ಮಾ