AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಿಢೀರ್ ನಿವೃತ್ತಿ ಘೋಷಿಸಿದ ನ್ಯೂಝಿಲೆಂಡ್ ಆಟಗಾರ

Doug Bracewell retirement: ನ್ಯೂಝಿಲೆಂಡ್ ತಂಡದ ಅನುಭವಿ ಆಲ್​ರೌಂಡರ್ ಡೌಗ್ ಬ್ರೇಸ್‌ವೆಲ್ ಎಲ್ಲಾ ಮಾದರಿಯ ಕ್ರಿಕೆಟ್​ನಿಂದ ನಿವೃತ್ತಿ ಘೋಷಿಸಿದ್ದಾರೆ. ನ್ಯೂಝಿಲೆಂಡ್ ಪರ 28 ಟೆಸ್ಟ್​, 21 ಏಕದಿನ ಹಾಗೂ 20 ಟಿ20 ಪಂದ್ಯಗಳನ್ನಾಡಿರುವ ಡೌಗ್ ಬ್ರೇಸ್​ವೆಲ್ 2012 ರಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲೂ ಕಾಣಿಸಿಕೊಂಡಿದ್ದರು.

ಝಾಹಿರ್ ಯೂಸುಫ್
|

Updated on: Dec 29, 2025 | 10:01 AM

Share
ನ್ಯೂಝಿಲೆಂಡ್ ತಂಡದ ಅನುಭವಿ ಆಲ್​ರೌಂಡರ್ ಡೌಗ್ ಬ್ರೇಸ್‌ವೆಲ್ (Doug Bracewell) ಎಲ್ಲಾ ಮಾದರಿಯ ಕ್ರಿಕೆಟ್​ಗೆ ವಿದಾಯ ಹೇಳಿದ್ದಾರೆ. ಈ ಹಿಂದೆ ನ್ಯೂಝಿಲೆಂಡ್ ಪರ ಟೆಸ್ಟ್, ಏಕದಿನ ಹಾಗೂ ಟಿ20 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದ ಬ್ರೇಸ್​ವೆಲ್ 18 ವರ್ಷಗಳ ಕ್ರಿಕೆಟ್​ ಕೆರಿಯರ್​ ಅನ್ನು ಅಂತ್ಯಗೊಳಿಸಿದ್ದಾರೆ.

1 / 5
ಡೌಗ್ ಬ್ರೇಸ್‌ವೆಲ್ ನ್ಯೂಝಿಲೆಂಡ್ ಪರ 28 ಟೆಸ್ಟ್​, 21 ಏಕದಿನ ಹಾಗೂ 20 ಟಿ20 ಪಂದ್ಯಗಳನ್ನಾಡಿದ್ದಾರೆ. ಟೆಸ್ಟ್​ನಲ್ಲಿ 568 ರನ್ ಕಲೆಹಾಕುವುದರೊಂದಿಗೆ 74 ವಿಕೆಟ್​ಗಳನ್ನು ಕಬಳಿಸಿದ್ದಾರೆ. ಇನ್ನು 21 ಪಂದ್ಯಗಳಿಂದ 221 ರನ್ ಹಾಗೂ 26 ವಿಕೆಟ್ ಪಡೆದಿದ್ದಾರೆ. ಹಾಗೆಯೇ 20 ಟಿ20 ಮ್ಯಾಚ್​ಗಳಲ್ಲಿ ನ್ಯೂಝಿಲೆಂಡ್ ತಂಡವನ್ನು ಪ್ರತಿನಿಧಿಸಿದ್ದ ಡೌಗ್ 126 ರನ್ ಜೊತೆ 20 ವಿಕೆಟ್​ ಅನ್ನು ಸಹ ಕಬಳಿಸಿದ್ದಾರೆ.

2 / 5
ಅಷ್ಟೇ ಅಲ್ಲದೆ ಇಂಡಿಯನ್ ಪ್ರೀಮಿಯರ್ ಲೀಗ್​ನಲೂ ಡೌಗ್ ಬ್ರೇಸ್​ವೆಲ್ ಕಾಣಿಸಿಕೊಂಡಿದ್ದರು. 2012 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಏಕೈಕ ಪಂದ್ಯವಾಡಿದ್ದ ಕಿವೀಸ್ ಆಲ್​ರೌಂಡರ್ 4 ಓವರ್​ಗಳಲ್ಲಿ 32 ರನ್ ನೀಡಿ 3 ವಿಕೆಟ್ ಕಬಳಿಸಿ ಮಿಂಚಿದ್ದರು. ಹಾಗೆಯೇ ಚಾಂಪಿಯನ್ಸ್ ಲೀಗ್ ಟಿ20 ಟೂರ್ನಿಯಲ್ಲೂ ಅವರು ಕಣಕ್ಕಿಳಿದಿದ್ದರು.

3 / 5
ವಿಶೇಷ ಎಂದರೆ ಡೌಗ್ ಬ್ರೇಸ್‌ವೆಲ್ ಅವರ ಕುಟುಂಬಸ್ಥರೆಲ್ಲರೂ ನ್ಯೂಝಿಲೆಂಡ್ ಪರ ಆಡಿದ ಆಟಗಾರರು. ಅವರ ತಂದೆ ಬ್ರೆಂಡನ್ ಬ್ರೇಸ್​ವೆಲ್ ಕಿವೀಸ್ ಪರ 7 ಪಂದ್ಯಗಳನ್ನಾಡಿದ್ದಾರೆ. ಹಾಗೆಯೇ ಅಂಕಲ್ ಜಾನ್ ಬ್ರೇಸ್​ವೆಲ್ ನ್ಯೂಝಿಲೆಂಡ್ ಪರ 94 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದಾರೆ. 

4 / 5
ಹಾಗೆಯೇ ಪ್ರಸ್ತುತ ನ್ಯೂಝಿಲೆಂಡ್ ತಂಡದಲ್ಲಿರುವ ಆಟಗಾರ ಮೈಕೆಲ್ ಬ್ರೇಸ್​ವೆಲ್ ಡೌಗ್ ಬ್ರೇಸ್​ವೆಲ್ ಅವರ ಕಸಿನ್ ಎಂಬುದು ವಿಶೇಷ. ಇನ್ನು ಡೌಗ್ ಬ್ರೇಸ್​ವೆಲ್ ಅವರ ಇನ್ನಿಬ್ಬರು ಅಂಕಲ್​ಗಳಾದ ಡೌಗಲ್ಸ್ ಬ್ರೇಸ್​ವೆಲ್ ಹಾಗೂ ಮಾರ್ಕ್​ ಬ್ರೇಸ್​ವೆಲ್ ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ ಕಾಣಿಸಿಕೊಂಡಿದ್ದರು. ಇದೀಗ 35 ವರ್ಷದ ಡೌಗ್ ಬ್ರೇಸ್​ವೆಲ್ ಎಲ್ಲಾ ಮಾದರಿಯ ಕ್ರಿಕೆಟ್​ಗೆ ಗುಡ್ ಬೈ ಹೇಳಿದ್ದಾರೆ.

5 / 5
ವಿಭಜಕಕ್ಕೆ ಡಿಕ್ಕಿ ಹೊಡೆದು ಕಾರಿನ ಮೇಲೆ ಉರುಳಿದ ಲಾರಿ

ಕತ್ರಿಗುಪ್ಪೆಯಲ್ಲಿ ಗ್ಯಾಂಗ್​ ವಾರ್, ಲಾಂಗು ಮಚ್ಚಿನ ಹೊಡೆತಕ್ಕೆ ಕಾರು ಪೀಸ್!

ಬಿಜೆಪಿ ಶಾಸಕ ಶರಣು ಸಲಗರ ವಿರುದ್ಧ ಎಫ್ಐಆರ್ ದಾಖಲು

ಪೊಲೀಸರ ಕಣ್ಣಿಗೆ ಬಿದ್ದ ಚಿರತೆ, ಗ್ರಾಮಸ್ಥರಲ್ಲಿ ಆತಂಕ

ಕರ್ನಾಟಕವನ್ನೇ ಬೆಚ್ಚಿ ಬೀಳಿಸಿದ ದರೋಡೆ ಪ್ರಕರಣಗಳ ಲಿಸ್ಟ್ ಇಲ್ಲಿದೆ ನೋಡಿ!

ಅಬ್ಬರಿಸಿದ ಸಾಲ್ಟ್ ಅ್ಯಂಡ್ ಪೆಪ್ಪರ್: ಪ್ಲೇಆಫ್​ಗೆ ನೈಟ್ ರೈಡರ್ಸ್​

ಡಿಕೆಶಿ​ಗೆ 16 ಲಕ್ಷ ರೂ ಮೌಲ್ಯದ ಗಿಫ್ಟ್: ಅಂಥದ್ದೇನಿದೆ? ಇಲ್ಲಿದೆ ನೋಡಿ

ಈ ಡ್ಯಾನ್ಸ್ ನೋಡಲು ಎರಡು ಕಣ್ಣು ಸಾಲದು; ನಮ್ರತಾ-ಸಂಗೀತಾ ಪ್ರೀತಿಯ ಅಪ್ಪುಗೆ

ಅಮೆರಿಕದಲ್ಲಿ ಎರಡು ಹೆಲಿಕಾಪ್ಟರ್​ಗಳ ನಡುವೆ ಡಿಕ್ಕಿ, ಪೈಲಟ್ ಸಾವು

ಮತ್ತೆ ಅಶ್ವಿನಿ-ಗಿಲ್ಲಿ ಮಧ್ಯೆ ದೊಡ್ಡ ಫೈಟ್; ಕೊಟ್ಟ ಶಿಕ್ಷೆ ಘನಘೋರ