- Kannada News Photo gallery Cricket photos Duleep Trophy: Shreyas Iyer & Yashasvi Jaiswal's West Zone Semifinal Push
ಶ್ರೇಯಸ್ ಅಯ್ಯರ್, ಯಶಸ್ವಿ ಜೈಸ್ವಾಲ್‌ಗೆ ಅವಕಾಶ; ತಂಡಕ್ಕೆ ಬಂತು ಆನೆಬಲ
Duleep Trophy 2025: ಏಷ್ಯಾಕಪ್ ತಂಡದಿಂದ ವಂಚಿತರಾದ ಶ್ರೇಯಸ್ ಅಯ್ಯರ್ ಮತ್ತು ಯಶಸ್ವಿ ಜೈಸ್ವಾಲ್, ಸೆಪ್ಟೆಂಬರ್ 4 ರಿಂದ ಆರಂಭವಾಗುವ ದುಲೀಪ್ ಟ್ರೋಫಿ ಸೆಮಿಫೈನಲ್‌ನಲ್ಲಿ ಪಶ್ಚಿಮ ವಲಯ ತಂಡವನ್ನು ಪ್ರತಿನಿಧಿಸಲಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಗೆ ಇದು ಅವರಿಬ್ಬರಿಗೂ ಮಹತ್ವದ ಪಂದ್ಯವಾಗಿದ್ದು, ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಪ್ರಯತ್ನಿಸಲಿದ್ದಾರೆ. ಪಶ್ಚಿಮ ವಲಯ ತಂಡಕ್ಕೆ ಇವರ ಸೇರ್ಪಡೆ ಆನೆಬಲ ತಂದಿದೆ.
Updated on: Sep 03, 2025 | 7:09 PM

ಭಾರತ ಏಷ್ಯಾಕಪ್ ತಂಡದಲ್ಲಿ ಅವಕಾಶ ವಂಚಿತರಾಗಿರುವ ಶ್ರೇಯಸ್ ಅಯ್ಯರ್ ಮತ್ತು ಯಶಸ್ವಿ ಜೈಸ್ವಾಲ್ ಸೆಪ್ಟೆಂಬರ್ 4 ರಿಂದ ಆರಂಭವಾಗಲಿರುವ ದುಲೀಪ್ ಟ್ರೋಫಿಯ ಸೆಮಿಫೈನಲ್‌ನಲ್ಲಿ ಪಶ್ಚಿಮ ವಲಯ ತಂಡದ ಪರ ಆಡಲಿದ್ದಾರೆ. ಇವರಿಬ್ಬರ ಆಗಮನ ಪಶ್ಚಿಮ ವಲಯ ತಂಡಕ್ಕೆ ಆನೆಬಲವನ್ನು ತಂದುಕೊಟ್ಟಿದೆ.

ವಾಸ್ತವವಾಗಿ ಏಷ್ಯಾಕಪ್ ನಂತರ, ಟೀಂ ಇಂಡಿಯಾ ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ಸರಣಿಯನ್ನು ಆಡಬೇಕಾಗಿರುವುದರಿಂದ, ಆ ಸರಣಿಗೆ ತಂಡದಲ್ಲಿ ಸ್ಥಾನ ಪಡೆಯಲು ಶ್ರೇಯಸ್ ಅಯ್ಯರ್ ಮತ್ತು ಜೈಸ್ವಾಲ್‌ಗೆ ಈ ಪಂದ್ಯ ಮುಖ್ಯವಾಗಿದೆ. ಟೆಸ್ಟ್ ತಂಡದಲ್ಲಿ ಜೈಸ್ವಾಲ್ ಅವರ ಸ್ಥಾನ ದೃಢಪಟ್ಟಿದೆ ಆದರೆ ಅಯ್ಯರ್ ಇನ್ನೂ ಟೆಸ್ಟ್ ಮತ್ತು ಟಿ20 ತಂಡದಿಂದ ಹೊರಗಿದ್ದಾರೆ.

ಪಶ್ಚಿಮ ವಲಯದ ಬಗ್ಗೆ ಹೇಳುವುದಾದರೆ, ತಂಡದ ನಾಯಕತ್ವವನ್ನು ಶಾರ್ದೂಲ್ ಠಾಕೂರ್ ವಹಿಸಿಕೊಂಡಿದ್ದಾರೆ. ಇಂಗ್ಲೆಂಡ್ ಪ್ರವಾಸದಲ್ಲಿ ಶಾರ್ದೂಲ್ಗೆ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಅವರನ್ನು ಹೊರತುಪಡಿಸಿ, ತಂಡದಲ್ಲಿರುವ ರುತುರಾಜ್ ಗಾಯಕ್ವಾಡ್ ಮತ್ತು ತನುಷ್ ಕೋಟ್ಯಾನ್ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ.

ಇತ್ತ ಸೆಮಿಫೈನಲ್‌ನಲ್ಲಿ ಪಶ್ಚಿಮ ವಲಯದ ಎದುರಾಳಿಯಾಗಿರುವ ಕೇಂದ್ರ ವಲಯ ತಂಡ ಕೂಡ ತುಂಬಾ ಬಲಿಷ್ಠವಾಗಿದೆ. ಕಳೆದ ಪಂದ್ಯದಲ್ಲಿ ತಂಡದ ಹಂಗಾಮಿ ನಾಯಕರಾಗಿದ್ದ ರಜತ್ ಪಟಿದಾರ್ ಅವರಂತಹ ಆಟಗಾರ ಈ ತಂಡದಲ್ಲಿದ್ದಾರೆ. ಪಾಟಿದಾರ್ ಜೊತೆಗೆ, ಕಳೆದ ಪಂದ್ಯದಲ್ಲಿ ದ್ವಿಶತಕ ಬಾರಿಸಿದ್ದ ಡ್ಯಾನಿಶ್ ಮಾಲೆವಾರ್ ಕೂಡ ಇದ್ದಾರೆ. ಶುಭಂ ಶರ್ಮಾ ಕೂಡ ಅದ್ಭುತ ಶತಕ ಬಾರಿಸಿದ್ದಾರೆ. ಹರ್ಷ್ ದುಬೆ, ಖಲೀಲ್ ಅಹ್ಮದ್ ಮತ್ತು ದೀಪಕ್ ಚಾಹರ್ ಅವರಂತಹ ಆಟಗಾರರು ಸಹ ಕೇಂದ್ರ ವಲಯ ತಂಡದಲ್ಲಿದ್ದಾರೆ.

ಪಶ್ಚಿಮ ವಲಯ ಸಂಭಾವ್ಯ ಪ್ಲೇಯಿಂಗ್ 11: ಯಶಸ್ವಿ ಜೈಸ್ವಾಲ್, ಹಾರ್ವಿಕ್ ದೇಸಾಯಿ, ರುತುರಾಜ್ ಗಾಯಕ್ವಾಡ್, ಶ್ರೇಯಸ್ ಅಯ್ಯರ್, ಶಿವಾಲಿಕ್ ಶರ್ಮಾ, ಜಯಮೀತ್ ಪಟೇಲ್, ಶಾರ್ದೂಲ್ ಠಾಕೂರ್ (ನಾಯಕ), ಶಮ್ಸ್ ಮುಲಾನಿ, ತನುಷ್ ಕೋಟ್ಯಾನ್, ತುಷಾರ್ ದೇಶಪಾಂಡೆ, ಧರ್ಮೇಂದ್ರಸಿನ್ಹ್ ಜಡೇಜಾ/ಅರ್ಜಾನ್ ನಾಗ್ವಾಸ್ವಾಲಾ
