ಜಸ್ಪ್ರೀತ್ ಬುಮ್ರಾರ ಐತಿಹಾಸಿಕ ದಾಖಲೆ ಮುರಿದ ಓಲಿ ರಾಬಿನ್ಸನ್

Updated on: Sep 09, 2026 | 5:19 PM

ಇಂಗ್ಲೆಂಡ್‌ನ ಓಲಿ ರಾಬಿನ್ಸನ್ ಇಂಗ್ಲೆಂಡ್-ಪಾಕಿಸ್ತಾನ ಟೆಸ್ಟ್‌ನಲ್ಲಿ ಐತಿಹಾಸಿಕ ದಾಖಲೆ ನಿರ್ಮಿಸಿದ್ದಾರೆ. ಕೇವಲ 24 ಪಂದ್ಯಗಳಲ್ಲಿ 100 ಟೆಸ್ಟ್ ವಿಕೆಟ್‌ಗಳನ್ನು ಪಡೆದ ಅವರು, ಕಳೆದ 100 ವರ್ಷಗಳಲ್ಲಿ ಯಾವುದೇ ವೇಗಿ ಸಾಧಿಸದ 19.34 ರ ಕನಿಷ್ಠ ಸರಾಸರಿಯನ್ನು ಹೊಂದಿದ್ದಾರೆ. ಈ ಮೂಲಕ ಜಸ್ಪ್ರೀತ್ ಬುಮ್ರಾ ಅವರ ದಾಖಲೆಯನ್ನು ಮುರಿದು ವಿಶ್ವ ಕ್ರಿಕೆಟ್ ಇತಿಹಾಸದಲ್ಲಿ ತಮ್ಮ ಸ್ಥಾನ ಭದ್ರಪಡಿಸಿಕೊಂಡಿದ್ದಾರೆ.

1 / 5
ಇಂಗ್ಲೆಂಡ್‌ ಹಾಗೂ ಪಾಕಿಸ್ತಾನ ನಡುವಿನ ಮೂರನೇ ಟೆಸ್ಟ್ ಪಂದ್ಯ ಬರ್ಮಿಂಗ್ಹ್ಯಾಮ್‌ನಲ್ಲಿ ಆರಂಭವಾಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್‌ ಬೌಲಿಂಗ್ ಆಯ್ದುಕೊಂಡಿದೆ. ಹೀಗಾಗಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡುತ್ತಿರುವ ಪಾಕಿಸ್ತಾನ ತಂಡ ಮತ್ತೆ ಕಳಪೆ ಆರಂಭ ಪಡೆದುಕೊಂಡಿದೆ. ಇತ್ತ ಇಂಗ್ಲೆಂಡ್‌ ವೇಗಿ ಓಲಿ ರಾಬಿನ್ಸನ್ ಎರಡು ಪ್ರಮುಖ ವಿಕೆಟ್‌ಗಳನ್ನು ಕಬಳಿಸುವ ಮೂಲಕ ಅಂತರರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌ನಲ್ಲಿ ಐತಿಹಾಸಿಕ ದಾಖಲ ನಿರ್ಮಿಸಿದ್ದಾರೆ(PC-PTI).

2 / 5

ಕಳೆದ 100 ವರ್ಷಗಳಲ್ಲಿ ವಿಶ್ವದ ಯಾವುದೇ ಬೌಲರ್ ಸಾಧಿಸದ ದಾಖಲೆ ಇಂದು ರಾಬಿನ್ಸನ್ ಪಾಲಾಗಿದೆ. ಈ ಪಂದ್ಯದ ಮೊದಲ ಇನ್ನಿಂಗ್ಸ್​ನ ಮೂರನೇ ಓವರ್​ನಲ್ಲಿ ರಾಬಿನ್ಸನ್, ಪಾಕಿಸ್ತಾನದ ಆರಂಭಿಕ ಆಟಗಾರ ಸ್ಯಾಮ್ ಅಯೂಬ್ ಅವರನ್ನು ಎಲ್ಬಿಡಬ್ಲ್ಯೂ ಔಟ್ ಮಾಡುವ ಮೂಲಕ ತಮ್ಮ ವಿಕೆಟ್​ಗಳ ಖಾತೆ ತೆರೆದರು(PC-PTI).

3 / 5

ಈ ವಿಕೆಟ್‌ನೊಂದಿಗೆ, ರಾಬಿನ್ಸನ್ ತಮ್ಮ 24 ನೇ ಟೆಸ್ಟ್ ಪಂದ್ಯದಲ್ಲಿ 100 ವಿಕೆಟ್‌ಗಳ ಮೈಲಿಗಲ್ಲು ದಾಟಿದರು. ರಾಬಿನ್ಸನ್ ಕೇವಲ 100 ವಿಕೆಟ್‌ಗಳನ್ನು ಪೂರೈಸಿದಕ್ಕೆ ವಿಶ್ವ ದಾಖಲೆ ನಿರ್ಮಿಸಿಲ್ಲ. ಬದಲಿಗೆ ರಾಬಿನ್ಸನ್ ಅತ್ಯಂತ ಕಡಿಮೆ ಸರಾಸರಿಯಲ್ಲಿ 100 ವಿಕೆಟ್‌ಗಳನ್ನು ಪೂರೈಸಿದ ಸಾಧನೆ ಮಾಡಿದ್ದಾರೆ(PC-PTI).

4 / 5

ರಾಬಿನ್ಸನ್ ಕೇವಲ 19.34 ರ ಸರಾಸರಿಯಲ್ಲಿ 100 ವಿಕೆಟ್​ಗಳ ಗಡಿ ದಾಟಿದ್ದಾರೆ. ಕಳೆದ 100 ವರ್ಷಗಳ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಕಡಿಮೆ ಬೌಲಿಂಗ್ ಸರಾಸರಿಯಲ್ಲಿ 100 ಟೆಸ್ಟ್ ವಿಕೆಟ್‌ಗಳನ್ನು ತಲುಪಿದ ವೇಗಿ ಎಂಬ ದಾಖಲೆಯನ್ನು ನಿರ್ಮಿಸಿದ್ದಾರೆ. ಈ ಮೈಲಿಗಲ್ಲನ್ನು ತಲುಪುವ ಮೂಲಕ, ಅವರು 19.79 ರ ಸರಾಸರಿಯಲ್ಲಿ 100 ಟೆಸ್ಟ್ ವಿಕೆಟ್‌ಗಳನ್ನು ಪೂರೈಸಿದ್ದ ಭಾರತೀಯ ವೇಗಿ ಜಸ್ಪ್ರೀತ್ ಬುಮ್ರಾ ಅವರ ದಾಖಲೆಯನ್ನು ಮುರಿದಿದ್ದಾರೆ(PC-PTI).

5 / 5

Published On - 5:19 pm, Wed, 9 September 26

ಪೃಥ್ವಿಶಂಕರ

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
Loading...
Unable to load recommendations.
Follow Us