ENG vs SL: ಚೊಚ್ಚಲ ಶತಕ ಸಿಡಿಸಿ 94 ವರ್ಷಗಳ ಹಳೆಯ ದಾಖಲೆ ಮುರಿದ ಜೇಮಿ ಸ್ಮಿತ್

Jamie Smith: ತಂಡದ ಪರ ನಾಲ್ಕನೇ ಟೆಸ್ಟ್ ಪಂದ್ಯವನ್ನಾಡುತ್ತಿರುವ ಯುವ ಬ್ಯಾಟರ್ ಜೇಮಿ ಸ್ಮಿತ್ ಅಮೋಘ ಶತಕ ಸಿಡಿಸಿದರು. ಸ್ಮಿತ್ ಕೇವಲ 136 ಎಸೆತಗಳಲ್ಲಿ ತಮ್ಮ ಚೊಚ್ಚಲ ಟೆಸ್ಟ್ ಶತಕ ಪೂರ್ಣಗೊಳಿಸಿದರು. ಇದರೊಂದಿಗೆ ಜೇಮಿ ಸ್ಮಿತ್ 94 ವರ್ಷಗಳ ಹಳೆಯ ದಾಖಲೆಯನ್ನು ಮುರಿದಿದ್ದಾರೆ.

ಪೃಥ್ವಿಶಂಕರ
|

Updated on: Aug 23, 2024 | 9:10 PM

ಪ್ರಸ್ತುತ ಇಂಗ್ಲೆಂಡ್​ನ ಮ್ಯಾಂಚೆಸ್ಟರ್​ನಲ್ಲಿ ಇಂಗ್ಲೆಂಡ್ ಹಾಗೂ ಶ್ರೀಲಂಕಾ ನಡುವೆ ಮೊದಲ ಟೆಸ್ಟ್ ಪಂದ್ಯ ನಡೆಯುತ್ತಿದೆ. ಈ ಪಂದ್ಯದಲ್ಲಿ ಉಭಯ ತಂಡಗಳ ಮೊದಲ ಇನ್ನಿಂಗ್ಸ್ ಮುಗಿದಿದ್ದು, ಇಂಗ್ಲೆಂಡ್ ತಂಡ ಇನ್ನಿಂಗ್ಸ್ ಮುನ್ನಡೆ ಕಾಯ್ದುಕೊಂಡಿದೆ.

1 / 6
ಮೊದಲ ಇನ್ನಿಂಗ್ಸ್​ನಲ್ಲಿ ಶ್ರೀಲಂಕಾ ತಂಡ 236 ರನ್​ಗಳಿಗೆ ಆಲೌಟ್ ಆದರೆ, ಈ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ತಂಡ 358 ರನ್​ಗಳಿಗೆ ಆಲೌಟ್ ಆಯಿತು. ಇದರೊಂದಿಗೆ ಇಂಗ್ಲೆಂಡ್ ಮೊದಲ ಇನ್ನಿಂಗ್ಸ್​ನಲ್ಲಿ 122 ರನ್​ಗಳ ಮುನ್ನಡೆ ಪಡೆದುಕೊಂಡಿದೆ. ಒಂದು ಹಂತದಲ್ಲಿ ಇಂಗ್ಲೆಂಡ್ ಕೂಡ ಸತತ ವಿಕೆಟ್ ಕಳೆದುಕೊಂಡು ಹಿನ್ನಡೆ ಅನುಭವಿಸಿತ್ತು.

2 / 6
ಆದರೆ ತಂಡದ ಪರ ನಾಲ್ಕನೇ ಟೆಸ್ಟ್ ಪಂದ್ಯವನ್ನಾಡುತ್ತಿರುವ ಯುವ ಬ್ಯಾಟರ್ ಜೇಮಿ ಸ್ಮಿತ್ ಅಮೋಘ ಶತಕ ಸಿಡಿಸಿದರು. ಸ್ಮಿತ್ ಕೇವಲ 136 ಎಸೆತಗಳಲ್ಲಿ ತಮ್ಮ ಚೊಚ್ಚಲ ಟೆಸ್ಟ್ ಶತಕ ಪೂರ್ಣಗೊಳಿಸಿದರು. ಇದರೊಂದಿಗೆ ಜೇಮಿ ಸ್ಮಿತ್ 94 ವರ್ಷಗಳ ಹಳೆಯ ದಾಖಲೆಯನ್ನು ಮುರಿದಿದ್ದಾರೆ.

3 / 6
ಜೇಮಿ ಸ್ಮಿತ್ ಇಂಗ್ಲೆಂಡ್ ಪರ ಟೆಸ್ಟ್ ಶತಕ ಸಿಡಿಸಿದ ಅತ್ಯಂತ ಕಿರಿಯ ವಿಕೆಟ್ ಕೀಪರ್ ಎನಿಸಿಕೊಂಡಿದ್ದಾರೆ. ಅವರು ಕೇವಲ 24 ವರ್ಷ 42 ದಿನಗಳ ವಯಸ್ಸಿನಲ್ಲಿ ಈ ಶತಕ ಗಳಿಸಿದರು. ಇದಕ್ಕೂ ಮುನ್ನ ವೆಸ್ಟ್ ಇಂಡೀಸ್ ವಿರುದ್ಧ 24 ವರ್ಷ, 63 ದಿನಗಳಲ್ಲಿ ಶತಕ ಸಿಡಿಸಿದ್ದ ಲೆಸ್ ಏಮ್ಸ್ ಹೆಸರಲ್ಲಿ ಈ ದಾಖಲೆ ಇತ್ತು.

4 / 6
ಕುತೂಹಲಕಾರಿ ವಿಷಯವೆಂದರೆ ಕಳೆದ ಟೆಸ್ಟ್ ಪಂದ್ಯದಲ್ಲಿ ಜೇಮಿ ಸ್ಮಿತ್ ಶತಕ ಸಿಡಿಸುವ ಅವಕಾಶದಿಂದ ವಂಚಿತರಾಗಿದ್ದರು. ಸ್ಮಿತ್ ಈ ಹಿಂದೆ ವೆಸ್ಟ್ ಇಂಡೀಸ್ ವಿರುದ್ಧ ನಡೆದ ಪಂದ್ಯದಲ್ಲಿ 95 ರನ್‌ ಬಾರಿಸಿ ವಿಕೆಟ್ ಒಪ್ಪಿಸಿದ್ದರು. ಆದರೆ ಶ್ರೀಲಂಕಾ ವಿರುದ್ಧ ತಮ್ಮ ಚೊಚ್ಚಲ ಶತಕ ಸಿಡಿಸುವಲ್ಲಿ ಜೇಮೀ ಸ್ಮಿತ್ ಯಶಸ್ವಿಯಾದರು. ಅಂತಿವಾಗಿ ಸ್ಮಿತ್ ಅವರ ಇನ್ನಿಂಗ್ಸ್ 111 ರನ್‌ಗಳಿಗೆ ಕೊನೆಗೊಂಡಿತು. ಇದರಲ್ಲಿ ಅವರು ಒಂದು ಸಿಕ್ಸರ್ ಮತ್ತು 8 ಬೌಂಡರಿಗಳನ್ನು ಹೊಡೆದರು.

5 / 6
ಜೇಮಿ ಸ್ಮಿತ್ ಇಂಗ್ಲೆಂಡ್‌ನಲ್ಲಿ ಇದುವರೆಗೆ 62 ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಇದರಲ್ಲಿ 10 ಶತಕಗಳ ಸಹಾಯದಿಂದ 3641 ರನ್ ಗಳಿಸಿದ್ದಾರೆ. ಇದಲ್ಲದೆ, ಅವರು 17 ಲಿಸ್ಟ್ ಎ ಮತ್ತು 84 ಟಿ20 ಪಂದ್ಯಗಳನ್ನು ಆಡಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಏಕದಿನ ಹಾಗೂ ಟಿ20 ಸರಣಿಯಲ್ಲೂ ಈ ಆಟಗಾರನಿಗೆ ಅವಕಾಶ ಸಿಗಬಹುದು ಎಂದು ಹೇಳಲಾಗುತ್ತಿದೆ.

6 / 6
Follow us