James Anderson Retirement: ವೃತ್ತಿಜೀವನಕ್ಕೆ ಇಂಗ್ಲೆಂಡ್ ದಿಗ್ಗಜ ವೇಗಿ ಜೇಮ್ಸ್ ಆಂಡರ್ಸನ್ ವಿದಾಯ

James Anderson Retirement: ಇಂಗ್ಲೆಂಡ್ ತಂಡದ ದಿಗ್ಗಜ ವೇಗದ ಬೌಲರ್​ ಜೇಮ್ಸ್ ಆಂಡರ್ಸನ್ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿಯಾಗುವ ಕುರಿತು ಬಿಗ್ ಅಪ್‌ಡೇಟ್ ನೀಡಿದ್ದಾರೆ. ಟೆಸ್ಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ವಿಶ್ವದಾಖಲೆ ನಿರ್ಮಿಸಿರುವ ಆಂಡರ್ಸನ್ ವಿಂಡೀಸ್ ವಿರುದ್ಧ ಕೊನೆಯ ಟೆಸ್ಟ್ ಪಂದ್ಯವನ್ನಾಡುವುದಾಗಿ ತಿಳಿಸಿದ್ದಾರೆ.

ಪೃಥ್ವಿಶಂಕರ
|

Updated on: May 11, 2024 | 6:46 PM

ಇಂಗ್ಲೆಂಡ್ ತಂಡದ ದಿಗ್ಗಜ ವೇಗದ ಬೌಲರ್​ ಜೇಮ್ಸ್ ಆಂಡರ್ಸನ್ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿಯಾಗುವ ಕುರಿತು ಬಿಗ್ ಅಪ್‌ಡೇಟ್ ನೀಡಿದ್ದಾರೆ. ಟೆಸ್ಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ವಿಶ್ವದಾಖಲೆ ನಿರ್ಮಿಸಿರುವ ಆಂಡರ್ಸನ್ ವಿಂಡೀಸ್ ವಿರುದ್ಧ ಕೊನೆಯ ಟೆಸ್ಟ್ ಪಂದ್ಯವನ್ನಾಡುವುದಾಗಿ ತಿಳಿಸಿದ್ದಾರೆ.

1 / 6
ವಾಸ್ತವವಾಗಿ ಜುಲೈನಲ್ಲಿ ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ನಡುವೆ ಟೆಸ್ಟ್ ಸರಣಿ ನಡೆಯಲಿದೆ. ಈ ಸರಣಿಯ ಮೊದಲ ಪಂದ್ಯ (10-14 ಜುಲೈ) ಆಂಡರ್ಸನ್ ವೃತ್ತಿಜೀವನದ ಕೊನೆಯ ಟೆಸ್ಟ್ ಪಂದ್ಯವಾಗಿರಲಿದೆ. ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಆಂಡರ್ಸನ್ ಮಾಹಿತಿ ನೀಡಿದ್ದಾರೆ.

2 / 6
ಇತ್ತೀಚೆಗಷ್ಟೇ ಭಾರತ ವಿರುದ್ಧದ ಟೆಸ್ಟ್ ಸರಣಿಯ ವೇಳೆ ಆ್ಯಂಡರ್ಸನ್ ಟೆಸ್ಟ್‌ನಲ್ಲಿ 700 ವಿಕೆಟ್‌ಗಳನ್ನು ಪೂರೈಸಿದ್ದ ಸಾಧನೆ ಮಾಡಿದ್ದ ಆಂಡರ್ಸನ್ ತಮ್ಮ ಪೋಸ್ಟ್​ನಲ್ಲಿ, ‘ನಾನು ಇಂಗ್ಲೆಂಡ್ ತಂಡವನ್ನು ಬಹಳಷ್ಟು ಮಿಸ್ ಮಾಡಿಕೊಳ್ಳಲದ್ದೇನೆ. ಆದರೆ ಈಗ ನಿವೃತ್ತಿ ಹೊಂದಲು ಸರಿಯಾದ ಸಮಯ ಎಂದು ನನಗೆ ತಿಳಿದಿದೆ.

3 / 6
ಅಲ್ಲದೆ ನಾನು ಮಾಡಿದಂತೆ ಇತರರು ಅವರ ಕನಸುಗಳನ್ನು ನನಸು ಮಾಡಿಕೊಳ್ಳಲು ಅವಕಾಶ ಮಾಡಿಕೊಡುವುದು ಅವಶ್ಯಕ. ಇಷ್ಟು ವರ್ಷ ನನ್ನನ್ನು ಬೆಂಬಲಿಸಿದ ಎಲ್ಲರಿಗೂ ಧನ್ಯವಾದಗಳು. ವಿಂಡೀಸ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಸಿಗುವ ಎಂದು ಬರೆದುಕೊಂಡಿದ್ದಾರೆ.

4 / 6
ವೆಸ್ಟ್ ಇಂಡೀಸ್ ತಂಡ ಜುಲೈನಲ್ಲಿ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದೆ. ಈ ಪ್ರವಾಸದಲ್ಲಿ ಉಭಯ ತಂಡಗಳ ನಡುವೆ 3 ಟೆಸ್ಟ್ ಪಂದ್ಯಗಳ ಸರಣಿ ನಡೆಯಲಿದೆ. ಸರಣಿಯ ಮೊದಲ ಟೆಸ್ಟ್ ಜುಲೈ 10 ರಿಂದ 14 ರವರೆಗೆ ಲಾರ್ಡ್ಸ್‌ನಲ್ಲಿ ನಡೆಯಲಿದೆ. ಇದು ಆಂಡರ್ಸನ್ ಅವರ ಕೊನೆಯ ಟೆಸ್ಟ್ ಪಂದ್ಯವಾಗಿರಲಿದೆ.

5 / 6
ವಾಸ್ತವವಾಗಿ ಆಂಡರ್ಸನ್ ಲಾರ್ಡ್ಸ್‌ನಲ್ಲಿ ಅಂತಾರಾಷ್ಟ್ರೀಯ ಟೆಸ್ಟ್‌ಗೆ ಪದಾರ್ಪಣೆ ಮಾಡಿದ್ದರು. ಇದೀಗ ಅವರ ವೃತ್ತಿ ಬದುಕಿನ ಕೊನೆಯ ಪಂದ್ಯ ಕೂಡ ಇಲ್ಲೇ ನಡೆಯಲ್ಲಿದೆ. ತಮ್ಮ ವೃತ್ತಿಜೀವನದಲ್ಲಿ ಇದುವರೆಗೆ ಆಡಿರುವ 187 ಟೆಸ್ಟ್‌ಗಳ 348 ಇನ್ನಿಂಗ್ಸ್‌ಗಳಲ್ಲಿ 700 ವಿಕೆಟ್‌ಗಳನ್ನು ಪಡೆದಿದ್ದಾರೆ. ಟೆಸ್ಟ್​ನಲ್ಲಿ 32 ಬಾರಿ 5 ವಿಕೆಟ್ ಹಾಗೂ 3 ಬಾರಿ 10 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಅಲ್ಲದೆ ಟೆಸ್ಟ್​ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ವೇಗದ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

6 / 6
Follow us