- Kannada News Photo gallery Cricket photos Ex pakistan skipper misbah ul haq predicted the finalist of t20 world cup 2024
T20 World Cup 2024: ಟಿ20 ವಿಶ್ವಕಪ್ ಫೈನಲ್ ಆಡುವ 2 ತಂಡಗಳನ್ನು ಹೆಸರಿಸಿದ ಪಾಕ್ ಮಾಜಿ ನಾಯಕ ಮಿಸ್ಬಾ-ಉಲ್-ಹಕ್
T20 World Cup 2024: ವಿಶ್ವಕಪ್ ಆರಂಭಕ್ಕೂ ಮುನ್ನ ಪಾಕಿಸ್ತಾನದ ಮಾಜಿ ನಾಯಕ ಮಿಸ್ಬಾ-ಉಲ್-ಹಕ್ ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಫೈನಲ್ ಆಡಬಹುದಾದ ಎರಡು ತಂಡಗಳು ಯಾವುವು ಎಂಬುದರ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಸ್ಟಾರ್ ಸ್ಪೋರ್ಟ್ಸ್ ಕಾರ್ಯಕ್ರಮದಲ್ಲಿ ಮಿಸ್ಬಾ ತಮ್ಮ ಆಯ್ಕೆಯ ಎರಡು ತಂಡಗಳ ಹೆಸರನ್ನು ಪ್ರಕಟಿಸಿದ್ದಾರೆ.
Updated on: Jun 01, 2024 | 7:15 PM

9ನೇ ಆವೃತ್ತಿಯ ಟಿ20 ವಿಶ್ವಕಪ್ ನಾಳೆಯಿಂದ ಆರಂಭವಾಗಲಿದೆ. ಈ ಚುಟುಕು ಸಮರಕ್ಕಾಗಿ ಎಲ್ಲಾ ತಂಡಗಳು ಈಗಾಗಲೇ ಪೂರ್ಣ ಸಿದ್ಧಗೊಂಡಿವೆ. ಈ ಆವೃತ್ತಿಯಲ್ಲಿ 20 ತಂಡಗಳು ಸ್ಪರ್ಧೆಯಲ್ಲಿರುವುದರಿಂದ ಲೀಗ್ನ ರೋಚಕತೆ ಇನ್ನಷ್ಟು ಹೆಚ್ಚಿದೆ. ಹೀಗಾಗಿ ಈ ಬಾರಿ ಯಾವ ತಂಡ ಚಾಂಪಿಯನ್ ಆಗಲಿದೆ ಎಂಬುದು ಸಾಕಷ್ಟು ಕುತೂಹಲ ಕೆರಳಿಸಿದೆ.

ಆದರೆ ವಿಶ್ವಕಪ್ ಆರಂಭಕ್ಕೂ ಮುನ್ನ ಪಾಕಿಸ್ತಾನದ ಮಾಜಿ ನಾಯಕ ಮಿಸ್ಬಾ-ಉಲ್-ಹಕ್ ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಫೈನಲ್ ಆಡಬಹುದಾದ ಎರಡು ತಂಡಗಳು ಯಾವುವು ಎಂಬುದರ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಸ್ಟಾರ್ ಸ್ಪೋರ್ಟ್ಸ್ ಕಾರ್ಯಕ್ರಮದಲ್ಲಿ ಮಿಸ್ಬಾ ತಮ್ಮ ಆಯ್ಕೆಯ ಎರಡು ತಂಡಗಳ ಹೆಸರನ್ನು ಪ್ರಕಟಿಸಿದ್ದಾರೆ.

ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ ಮಿಸ್ಬಾ, ನೋಡಿ ಟಿ20 ಯಲ್ಲಿ ಏನನ್ನೂ ಊಹಿಸುವುದು ಕಷ್ಟ ಆದರೆ ನಾನು ಆಸ್ಟ್ರೇಲಿಯಾದ ಹೆಸರನ್ನು ಇಲ್ಲಿ ತೆಗೆದುಕೊಳ್ಳಲು ಬಯಸುತ್ತೇನೆ. ಆಸ್ಟ್ರೇಲಿಯಾವು ಫೈನಲ್‌ಗೆ ಹೇಗೆ ತಲುಪಬೇಕು ಎಂದು ತಿಳಿದಿರುವ ತಂಡವಾಗಿದೆ. ಈ ತಂಡ ಯಾವುದೇ ಪರಿಸ್ಥಿತಿಯಲ್ಲಿ ಉತ್ತಮವಾಗಿ ಆಡುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನನ್ನ ಮೊದಲ ಹೆಸರು ಖಂಡಿತವಾಗಿಯೂ ಆಸ್ಟ್ರೇಲಿಯಾ ತಂಡವಾಗಿರುತ್ತದೆ.

ಎರಡನೇ ತಂಡವನ್ನು ಹೆಸರಿಸಿರುವ ಮಿಸ್ವಾ, ನಾನು ಪಾಕಿಸ್ತಾನದವನು, ಹಾಗಾಗಿ ಪಾಕಿಸ್ತಾನ ತಂಡ ಫೈನಲ್‌ಗೆ ತಲುಪಲು ನಾನು ಖಂಡಿತವಾಗಿಯೂ ಬಯಸುತ್ತೇನೆ. ಆದರೆ ಭಾರತ ತಂಡವು ಬಲಿಷ್ಠ ತಂಡವಾಗಿದೆ. ಆದರೆ ನನ್ನ ದೃಷ್ಟಿಯಲ್ಲಿ, ಭಾರತವನ್ನು ಹೊರತುಪಡಿಸಿ, ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ ಈ ಬಾರಿ ಫೈನಲ್ ಆಡುತ್ತವೆ ಎಂದಿದ್ದಾರೆ.

ಈ ಬಾರಿಯ ಟಿ20 ವಿಶ್ವಕಪ್‌ನ ಮೊದಲ ಪಂದ್ಯ ಕೆನಡಾ ಮತ್ತು ಯುಎಸ್‌ಕೆ ನಡುವೆ ನಡೆಯಲಿದೆ. ಅದೇ ಸಮಯದಲ್ಲಿ ಜೂನ್ 5 ರಂದು ಐರ್ಲೆಂಡ್ ವಿರುದ್ಧ ಭಾರತ ತಂಡ ತನ್ನ ಮೊದಲ ಪಂದ್ಯವನ್ನು ಆಡಲಿದೆ.ನಂತರ ಟಿ20 ವಿಶ್ವಕಪ್‌ನ ಅತಿದೊಡ್ಡ ಪಂದ್ಯವು ಜೂನ್ 9 ರಂದು ನ್ಯೂಯಾರ್ಕ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ನಡೆಯಲಿದೆ.




