AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತಕ್ಕೆ ವಿಶ್ವಕಪ್ ಗೆಲ್ಲಿಸಿಕೊಟ್ಟ ಕೋಚ್​ಗೆ ಬಲೆ ಬೀಸಿದ ಪಾಕ್ ಮಂಡಳಿ..!

Pakistan Cricket: ಸತತ ಸೋಲುಗಳಿಂದ ಕಂಗೆಟ್ಟಿರುವ ಪಾಕಿಸ್ತಾನ ತಂಡ ಟಿ20 ವಿಶ್ವಕಪ್​ ಆರಂಭಕ್ಕೂ ಮುನ್ನ ತಂಡದ ಮುಖ್ಯ ಕೋಚ್​ಗಳನ್ನು ಬದಲಿಸಿದೆ. ಅದರಂತೆ ಟೀಂ ಇಂಡಿಯಾ 2011ರ ಏಕದಿನ ವಿಶ್ವಕಪ್‌ ಗೆಲ್ಲುವಂತೆ ಮಾಡಿದ ಲೆಜೆಂಡರಿ ಆಟಗಾರನನ್ನು ಟಿ20 ತಂಡದ ಮುಖ್ಯ ಕೋಚ್‌ ಆಗಿ ನೇಮಿಸಿದೆ.

ಪೃಥ್ವಿಶಂಕರ
|

Updated on: Apr 28, 2024 | 6:38 PM

Share
2024ರ ಟಿ20 ವಿಶ್ವಕಪ್‌ಗೆ ಒಂದು ತಿಂಗಳಿಗೂ ಕಡಿಮೆ ಸಮಯ ಉಳಿದಿದೆ. ಈ ಮಿಲಿಯನ್ ಡಾಲರ್ ಟೂರ್ನಿಗಾಗಿ ಎಲ್ಲಾ ತಂಡಗಳು ತಮ್ಮ ತಯಾರಿ ಆರಂಭಿಸಿವೆ. ಅದರಂತೆ ಪಾಕ್ ತಂಡವೂ ಈ ಬಾರಿ ವಿಶ್ವಕಪ್ ಗೆಲ್ಲುವ ಇರಾದೆಯೊಂದಿಗೆ ತಂಡದಲ್ಲಿ ಮಹತ್ತರ ಬದಲಾವಣೆ ಮಾಡಿದೆ.

1 / 6
ವಾಸ್ತವವಾಗಿ ಸತತ ಸೋಲುಗಳಿಂದ ಕಂಗೆಟ್ಟಿರುವ ಪಾಕಿಸ್ತಾನ ತಂಡ ಟಿ20 ವಿಶ್ವಕಪ್​ ಆರಂಭಕ್ಕೂ ಮುನ್ನ ತಂಡದ ಮುಖ್ಯ ಕೋಚ್​ಗಳನ್ನು ಬದಲಿಸಿದೆ. ಅದರಂತೆ ಟೀಂ ಇಂಡಿಯಾ 2011ರ ಏಕದಿನ ವಿಶ್ವಕಪ್‌ ಗೆಲ್ಲುವಂತೆ ಮಾಡಿದ ಲೆಜೆಂಡರಿ ಆಟಗಾರನನ್ನು ಟಿ20 ತಂಡದ ಮುಖ್ಯ ಕೋಚ್‌ ಆಗಿ ನೇಮಿಸಿದೆ.

2 / 6
ಟಿ20 ವಿಶ್ವಕಪ್‌ಗೂ ಮುನ್ನ ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಗ್ಯಾರಿ ಕರ್ಸ್ಟನ್ ಅವರನ್ನು ವೈಟ್ ಬಾಲ್ ಮಾದರಿಗೆ ಮುಖ್ಯ ಕೋಚ್ ಆಗಿ ಪಿಸಿಬಿ ನೇಮಕ ಮಾಡಿದೆ. ಪಿಸಿಬಿಯ ಈ ನಿರ್ಧಾರವನ್ನು ಮಾಸ್ಟರ್ ಸ್ಟ್ರೋಕ್ ಎಂದು ಪರಿಗಣಿಸಲಾಗುತ್ತಿದೆ. ಇದರಿಂದ ಪಾಕ್ ತಂಡಕ್ಕೆ ಹೆಚ್ಚಿನ ಬಲ ಬರಲಿದೆ ಎಂಬ ಅಭಿಪ್ರಾಯವೂ ವ್ಯಕ್ತವಾಗುತ್ತಿದೆ. ಏಕೆಂದರೆ ಗ್ಯಾರಿ ಕರ್ಸ್ಟನ್ ಅವರಿಗೆ ವಿಶ್ವಕಪ್ ಗೆದ್ದ ಅನುಭವವಿದೆ.

3 / 6
ವೈಟ್ ಬಾಲ್ ಮಾದರಿಯಂತೆ ಟೆಸ್ಟ್ ಮಾದರಿಗೂ ಪಿಸಿಬಿ ಹೊಸ ಕೋಚ್ ನೇಮಿಸಿದೆ. ಅದರಂತೆ ಆಸ್ಟ್ರೇಲಿಯಾದ ಮಾಜಿ ವೇಗದ ಬೌಲರ್ ಜೇಸನ್ ಗಿಲ್ಲೆಸ್ಪಿ ಅವರನ್ನು ಕೆಂಪು ಚೆಂಡು ಕ್ರಿಕೆಟ್‌ಗೆ ಮುಖ್ಯ ಕೋಚ್ ಆಗಿ ನೇಮಿಸಿದೆ.

4 / 6
2011ರ ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಭಾರತವನ್ನು ಗೆಲ್ಲುವಂತೆ ಮಾಡಿದ ಗ್ಯಾರಿ ಕರ್ಸ್ಟನ್, ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಭಾರತ ಎರಡನೇ ಏಕದಿನ ವಿಶ್ವಕಪ್ ಗೆಲ್ಲುವಂತೆ ಮಾಡಿದ್ದರು. ಇದಲ್ಲದೆ ಗ್ಯಾರಿ ಕರ್ಸ್ಟನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮುಖ್ಯ ಕೋಚ್ ಆಗಿಯೂ ಕೆಲಸ ಮಾಡಿದ್ದಾರೆ.

5 / 6
ಪ್ರಸ್ತುತ ಗ್ಯಾರಿ ಕರ್ಸ್ಟನ್ ಐಪಿಎಲ್‌ನಲ್ಲಿ ಗುಜರಾತ್‌ ಟೈಟಾನ್ಸ್ ತಂಡದ ಬ್ಯಾಟಿಂಗ್ ಕೋಚ್ ಮತ್ತು ತಂಡದ ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

6 / 6