- Kannada News Photo gallery Cricket photos GT vs MI Eliminator Fight between Jasprit Bumrah and Jayawardene fight in the middle of the match
GT vs MI, IPL 2025: ಪಂದ್ಯದ ಮಧ್ಯೆ ಬೌಂಡರಿ ಲೈನ್ ಬಳಿ ಬುಮ್ರಾ-ಜಯವರ್ಧನೆ ನಡುವೆ ಜಗಳ
Jasprit Bumrah: ಮುಂಬೈ ಇಂಡಿಯನ್ಸ್ ಮತ್ತು ಗುಜರಾತ್ ಟೈಟಾನ್ಸ್ ನಡುವಣ ಐಪಿಎಲ್ 2025ರ ಎಲಿಮಿನೇಟರ್ ಪಂದ್ಯದ ಮಧ್ಯೆ ಬೌಂಡರಿಯಲ್ಲಿ ಮುಖ್ಯ ಕೋಚ್ ಮಹೇಲ ಜಯವರ್ಧನೆ ಮತ್ತು ಜಸ್ಪ್ರೀತ್ ಬುಮ್ರಾ ನಡುವೆ ವಾಗ್ವಾದ ನಡೆಯಿತು. ಈ ಘಟನೆ ಗುಜರಾತ್ ಟೈಟಾನ್ಸ್ ತಂಡದ ಇನ್ನಿಂಗ್ಸ್‌ನ 13 ನೇ ಓವರ್‌ನಲ್ಲಿ ಸಂಭವಿಸಿದೆ.
Updated on: May 31, 2025 | 7:45 AM

ಕಳೆದ ಶುಕ್ರವಾರ ರಾತ್ರಿ ನಡೆದ ಎಲಿಮಿನೇಟರ್ ಪಂದ್ಯದಲ್ಲಿ ಐದು ಬಾರಿಯ ಐಪಿಎಲ್ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡ ಗುಜರಾತ್ ಟೈಟಾನ್ಸ್ ತಂಡವನ್ನು ಸೋಲಿಸಿತು. ಗುಜರಾತ್ ಈ ಪಂದ್ಯವನ್ನು 20 ರನ್‌ಗಳಿಂದ ಸೋತು ಟೂರ್ನಿಯಿಂದ ಹೊರಬಿದ್ದಿದೆ. ಈಗ ಮುಂಬೈ ತಂಡವು ಜೂನ್ 1 ರಂದು ಅಹಮದಾಬಾದ್‌ನಲ್ಲಿ ನಡೆಯಲಿರುವ ಎರಡನೇ ಕ್ವಾಲಿಫೈಯರ್‌ನಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಎದುರಿಸಲಿದೆ.

ಎಲಿಮಿನೇಟರ್ ಪಂದ್ಯದ ಬಗ್ಗೆ ಹೇಳುವುದಾದರೆ, ಮುಂಬೈ ಇಂಡಿಯನ್ಸ್ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಗುಜರಾತ್ ಟೈಟಾನ್ಸ್‌ಗಿಂತ ಉತ್ತಮವಾಗಿ ಕಂಡಿತು. ಆದರೆ, ಸಾಯಿ ಸುದರ್ಶನ್ ಮತ್ತು ವಾಷಿಂಗ್ಟನ್ ಸುಂದರ್ ಕ್ರೀಸ್‌ನಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ಸಮಯವಿತ್ತು. ಆ ಸಮಯದಲ್ಲಿ ಮುಂಬೈಗೆ ಸೋಲಿನ ಭಯ ಕಾಡಿತ್ತು. ಹೇಗಾದರೂ ಮಾಡಿ ಇಬ್ಬರ ಜೊತೆಯಾಟವನ್ನು ಮುರಿಯಲು ಬಯಸಿದ್ದರು.

ಈ ವೇಳೆ, ಬೌಂಡರಿಯಲ್ಲಿ ಮುಖ್ಯ ಕೋಚ್ ಮಹೇಲ ಜಯವರ್ಧನೆ ಮತ್ತು ಜಸ್ಪ್ರೀತ್ ಬುಮ್ರಾ ನಡುವೆ ವಾಗ್ವಾದ ನಡೆಯಿತು. ಈ ಘಟನೆ ಗುಜರಾತ್ ಟೈಟಾನ್ಸ್ ತಂಡದ ಇನ್ನಿಂಗ್ಸ್‌ನ 13 ನೇ ಓವರ್‌ನಲ್ಲಿ ಸಂಭವಿಸಿದೆ. ಈ ಓವರ್ ಅನ್ನು ಟ್ರೆಂಟ್ ಬೌಲ್ಟ್ ಬೌಲಿಂಗ್ ಮಾಡುತ್ತಿದ್ದರು. ಆ ಓವರ್‌ನ ಮೊದಲ ಎಸೆತದ ನಂತರ, ಕ್ಯಾಮೆರಾ ಬೌಂಡರಿಯಲ್ಲಿ ನಿಂತಿದ್ದ ಜಸ್‌ಪ್ರೀತ್ ಬುಮ್ರಾ ಕಡೆಗೆ ಹೋಯಿತು.

ಮುಖ್ಯ ಕೋಚ್ ಮಹೇಲ ಜಯವರ್ಧನೆ ಬೌಂಡರಿಯ ಹೊರಗೆ ಬುಮ್ರಾಗೆ ಏನೋ ಹೇಳುತ್ತಿರುವುದು ಕಂಡುಬಂದಿತು. ಆದರೆ, ಬುಮ್ರಾ ಅವರ ಮಾತನ್ನು ಒಪ್ಪಲಿಲ್ಲ. ಇದರಿಂದ ಜಯವರ್ಧನೆ ಕೂಡ ಅಸಮಾಧಾನಗೊಂಡಂತೆ ಕಂಡುಬಂದರು. ಇಬ್ಬರ ನಡುವೆ ಯಾವುದೋ ವಿಷಯದ ಬಗ್ಗೆ ವಾದ ನಡೆಯುತ್ತಿತ್ತು. ಆದರೆ, ಯಾವ ಏನೆಂಬುದರ ಬಗ್ಗೆ ಮಾಹಿತಿ ಇಲ್ಲ.

ಈ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ರೋಹಿತ್ ಶರ್ಮಾ ಅವರ ಅಮೋಘ 81 ರನ್ ಮತ್ತು ಜಾನಿ ಬೈರ್‌ಸ್ಟೋವ್ ಅವರ 47 ರನ್‌ಗಳ ನೆರವಿನಿಂದ ಮುಂಬೈ 5 ವಿಕೆಟ್‌ಗೆ 228 ರನ್ ಗಳಿಸಿತು. ಸೂರ್ಯಕುಮಾರ್ ಯಾದವ್ (33), ತಿಲಕ್ ವರ್ಮಾ (25) ಮತ್ತು ಹಾರ್ದಿಕ್ ಪಾಂಡ್ಯ (22*) ಕೂಡ ತ್ವರಿತ ಕೊಡುಗೆ ನೀಡಿದರು.

229 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಗುಜರಾತ್ 30 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 208 ರನ್‌ಗಳನ್ನು ಮಾತ್ರ ಗಳಿಸಲು ಶಕ್ತವಾಯಿತು ಮತ್ತು ಪಂದ್ಯವನ್ನು 20 ರನ್‌ಗಳಿಂದ ಸೋತಿತು. ಸಾಯಿ ಸುದರ್ಶನ್ 80 ರನ್ ಗಳಿಸಿ ಅದ್ಭುತ ಆಟವಾಡಿದರು. ವಾಷಿಂಗ್ಟನ್ ಸುಂದರ್ ಕೂಡ 48 ರನ್ ಗಳಿಸಿದರು.









