‘ನಿಮ್ಮನ್ನು ಭೇಟಿಯಾಗಿದ್ದು ನನ್ನ ಸೌಭಾಗ್ಯ’; ಗೃಹ ಸಚಿವ ಅಮಿತ್ ಶಾರನ್ನು ಭೇಟಿಯಾದ ಪಾಂಡ್ಯ ಬ್ರದರ್ಸ್

| Updated By: ಪೃಥ್ವಿಶಂಕರ

Updated on: Dec 31, 2022 | 1:47 PM

ಟ್ವಿಟರ್​ನಲ್ಲಿ ಫೋಟೋ ಶೇರ್ ಮಾಡಿರುವ ಪಾಂಡ್ಯ, ‘ನಮ್ಮನ್ನು ಆಹ್ವಾನಿಸಿದ್ದಕ್ಕಾಗಿ ಮತ್ತು ನಮಗಾಗಿ ಸಮಯ ಮೀಸಲಿಟ್ಟಿದ್ದಕ್ಕಾಗಿ ಗೃಹ ಸಚಿವ ಅಮಿತ್ ಶಾ ಅವರಿಗೆ ಧನ್ಯವಾದಗಳು. ನಿಮ್ಮನ್ನು ಭೇಟಿಯಾಗಿದ್ದು, ನನ್ನ ಸೌಭಾಗ್ಯ’ ಎಂದು ಬರೆದುಕೊಂಡಿದ್ದಾರೆ.

1 / 5
ಶ್ರೀಲಂಕಾ ವಿರುದ್ಧ ನಡೆಯಲಿರುವ ಮೂರು ಪಂದ್ಯಗಳ ಟಿ20 ಸರಣಿಗೆ ಟೀಂ ಇಂಡಿಯಾದ ಟಿ20 ತಂಡದ ನೂತನ ನಾಯಕನಾಗಿ ಆಯ್ಕೆಯಾಗಿರುವ ಆಲ್​ರೌಂಡರ್ ಹಾರ್ದಿಕ್ ಪಾಂಡ್ಯ, ತಮ್ಮ ಸಹೋದರನೊಂದಿಗೆ ಇತ್ತೀಚೆಗೆ ದೇಶದ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದಾರೆ.

2 / 5
ಪಾಂಡ್ಯ ತಮ್ಮ ಟ್ವಿಟ್ಟರ್​ನಲ್ಲಿ ಅಮಿತ್ ಶಾ ಭೇಟಿಯ ಫೋಟೋವನ್ನು ಹಾಕಿದ್ದು, ಇದರಲ್ಲಿ ಅವರೊಂದಿಗೆ ತಮ್ಮ ಸಹೋದರನಿರುವುದನ್ನು ಕಾಣಬಹುದಾಗಿದೆ.

3 / 5
ಟ್ವಿಟರ್​ನಲ್ಲಿ ಫೋಟೋ ಶೇರ್ ಮಾಡಿರುವ ಪಾಂಡ್ಯ, ‘ನಮ್ಮನ್ನು ಆಹ್ವಾನಿಸಿದ್ದಕ್ಕಾಗಿ ಮತ್ತು ನಮಗಾಗಿ ಸಮಯ ಮೀಸಲಿಟ್ಟಿದ್ದಕ್ಕಾಗಿ ಗೃಹ ಸಚಿವ ಅಮಿತ್ ಶಾ ಅವರಿಗೆ ಧನ್ಯವಾದಗಳು. ನಿಮ್ಮನ್ನು ಭೇಟಿಯಾಗಿದ್ದು, ನನ್ನ ಸೌಭಾಗ್ಯ’ ಎಂದು ಬರೆದುಕೊಂಡಿದ್ದಾರೆ.

ಟ್ವಿಟರ್​ನಲ್ಲಿ ಫೋಟೋ ಶೇರ್ ಮಾಡಿರುವ ಪಾಂಡ್ಯ, ‘ನಮ್ಮನ್ನು ಆಹ್ವಾನಿಸಿದ್ದಕ್ಕಾಗಿ ಮತ್ತು ನಮಗಾಗಿ ಸಮಯ ಮೀಸಲಿಟ್ಟಿದ್ದಕ್ಕಾಗಿ ಗೃಹ ಸಚಿವ ಅಮಿತ್ ಶಾ ಅವರಿಗೆ ಧನ್ಯವಾದಗಳು. ನಿಮ್ಮನ್ನು ಭೇಟಿಯಾಗಿದ್ದು, ನನ್ನ ಸೌಭಾಗ್ಯ’ ಎಂದು ಬರೆದುಕೊಂಡಿದ್ದಾರೆ.

4 / 5
2022 ರಲ್ಲಿ ಐಪಿಎಲ್​ನ ನೂತನ ತಂಡವಾದ ಗುಜರಾತ್ ಟೈಟಾನ್ಸ್​ನ ನಾಯಕತ್ವ ವಹಿಸಿಕೊಂಡಿದ್ದ ಪಾಂಡ್ಯ, ತನ್ನ ಚೊಚ್ಚಲ ನಾಯಕತ್ವದಲ್ಲಿಯೇ ತಂಡವನ್ನು ಚಾಂಪಿಯನ್ ಮಾಡಿದ್ದರು. ಅಂದಿನಿಂದ ಹಾರ್ದಿಕ್ ಟೀಮ್ ಇಂಡಿಯಾದ ನಾಯಕತ್ವಕ್ಕೆ ಪ್ರಬಲ ಸ್ಪರ್ಧಿಯಾಗಿದ್ದರು. ಇದೀಗ ಹಾರ್ದಿಕ್​ಗೆ ಆ ಅದೃಷ್ಟ ಖುಲಾಯಿಸಿದೆ.

5 / 5
ಇನ್ನು ಹಾರ್ದಿಕ್ ಸಹೋದರ ಕೃನಾಲ್ ಪಾಂಡ್ಯ ಕೂಡ ಭಾರತ ಪರ ಆಡಿದ್ದಾರೆ. ಆದರೆ, ಒಂದೂವರೆ ವರ್ಷಗಳಿಂದ ಅವರು ಟೀಂ ಇಂಡಿಯಾದಿಂದ ಹೊರಗುಳಿದಿದ್ದಾರೆ. 2021 ರ ಜುಲೈ 20 ರಂದು ಶ್ರೀಲಂಕಾ ವಿರುದ್ಧ ಭಾರತದ ಪರ ಕೃನಾಲ್ ತನ್ನ ಕೊನೆಯ ಏಕದಿನ ಪಂದ್ಯವನ್ನು ಆಡಿದ್ದರು. ಆ ಬಳಿಕ ಅವರಿಗೆ ಟೀಂ ಇಂಡಿಯಾದಿಂದ ಕರೆ ಬಂದಿಲ್ಲ.