Harmanpreet Kaur: ಕೊಹ್ಲಿ, ರೋಹಿತ್ ಸಾಲಿಗೆ ಸೇರಿದ ಹರ್ಮನ್​ಪ್ರೀತ್: ಮಹಿಳೆಯರಲ್ಲಿ ಯಾರೂ ಮಾಡಿಲ್ಲ ಈ ಸಾಧನೆ

Women's T20 World Cup, INDW vs IREW: ಐರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ನಾಯಕಿ ಹರ್ಮನ್​ಪ್ರೀತ್ ಕೌರ್ 20 ಎಸೆತಗಳಲ್ಲಿ 13 ರನ್ ಬಾರಿಸಿ ಔಟಾದರು. ವೈಫಲ್ಯ ಅನುಭವಿಸಿದರೂ ಹರ್ಮನ್ ಪ್ರೀತ್ ಕೌರ್ ವಿಶೇಷ ದಾಖಲೆ ನಿರ್ಮಿಸಿದ್ದಾರೆ. ಅಚ್ಚರಿ ಎಂದರೆ ಭಾರತದ ಯಾವೊಬ್ಬ ಮಹಿಳಾ ಕ್ರಿಕೆಟರ್ ಈ ಸಾಧನೆ ಮಾಡಿಲ್ಲ.

Vinay Bhat
|

Updated on: Feb 21, 2023 | 6:47 AM

ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿ ಕುತೂಹಲ ಘಟ್ಟಕ್ಕೆ ಬಂದು ನಿಂತಿದೆ. ಸೋಮವಾರ ನಡೆದ ಐರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಭಾರತ ಮಹಿಳಾ ತಂಡ 5 ರನ್​ಗಳ ರೋಚಕ ಜಯ ಸಾಧಿಸುವ ಮೂಲಕ ಸೆಮಿ ಫೈನಲ್​ಗೆ ಲಗ್ಗೆಯಿಟ್ಟಿದೆ.

1 / 10
ಆಡಿರುವ ನಾಲ್ಕು ಪಂದ್ಯಗಳಲ್ಲಿ ಮೂರು ಜಯ ಹಾಗೂ ಒಂದು ಸೋಲಿನೊಂದಿಗೆ 6 ಅಂಕ ಸಂಪಾದಿಸಿರುವ ಟೀಮ್ ಇಂಡಿಯಾ +0.253 ರನ್​ರೇಟ್​ನೊಂದಿಗ ಗ್ರೂಪ್​​ ಬಿಯಲ್ಲಿ ಎರಡನೇ ಸ್ಥಾನ ಪಡೆದು ಸೆಮೀಸ್​ಗೆ ಕ್ವಾಲಿಫೈ ಆಗಿದೆ. ಭಾರತ ಜೊತೆ ಮೊದಲ ಸ್ಥಾನದಲ್ಲಿರುವ ಇಂಗ್ಲೆಂಡ್ ಕೂಡ ಸೆಮಿ ಫೈನಲ್ ಪ್ರವೇಶಿಸಿದೆ.

2 / 10
ಐರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ನಾಯಕಿ ಹರ್ಮನ್​ಪ್ರೀತ್ ಕೌರ್ 20 ಎಸೆತಗಳಲ್ಲಿ 13 ರನ್ ಬಾರಿಸಿ ಔಟಾದರು. ವೈಫಲ್ಯ ಅನುಭವಿಸಿದರೂ ಹರ್ಮನ್ ವಿಶೇಷ ದಾಖಲೆ ನಿರ್ಮಿಸಿದ್ದಾರೆ. ಅಚ್ಚರಿ ಎಂದರೆ ಭಾರತದ ಯಾವೊಬ್ಬ ಮಹಿಳಾ ಕ್ರಿಕೆಟರ್ ಈ ಸಾಧನೆ ಮಾಡಿಲ್ಲ.

3 / 10
ಹರ್ಮನ್​ಪ್ರೀತ್ ಕೌರ್ ಅಂತರರಾಷ್ಟ್ರೀಯ ಟಿ20 ಕ್ರಿಕೆಟ್​ನಲ್ಲಿ 3000 ರನ್ ಪೂರೈಸಿದ್ದಾರೆ. ಈ ಮೂಲಕ ಟೀಮ್ ಇಂಡಿಯಾದ ಹಿರಿಯ ಬ್ಯಾಟರ್​ಗಳಾದ ರೋಹಿತ್ ಶರ್ಮಾ (33853 ರನ್ಸ್) ಹಾಗೂ ವಿರಾಟ್ ಕೊಹ್ಲಿ (4008 ರನ್ಸ್) ಸಾಲಿಗೆ ಸೇರಿಕೊಂಡಿದ್ದಾರೆ.

4 / 10
ಮಹಿಳಾ ಕ್ರಿಕೆಟ್ ಲೋಕದ ಟಿ20 ಅಂತರರಾಷ್ಟ್ರೀಯ ಪಂದ್ಯದಲ್ಲಿ 3000 ರನ್​ಗಳ ಗಡಿ ದಾಟಿದ ನಾಲ್ಕನೇ ಆಟಗಾರ್ತಿ ಹರ್ಮನ್. ಈಗಾಗಲೇ ಸೂಜಿ ಬೇಟ್ಸ್ (3820 ರನ್ಸ್), ಮೆಗ್ ಲ್ಯಾನಿಂಗ್ (3346 ರನ್ಸ್) ಮತ್ತು ಸ್ಟಾಫಿನ್ ಟೇಲರ್ (3166 ರನ್ಸ್) ಈ ಸಾಧನೆ ಮಾಡಿದ್ದಾರೆ.

5 / 10
ಭಾರತ ಹಾಗೂ ಐರ್ಲೆಂಡ್ ನಡುವಣ ಪಂದ್ಯ ಸಂಪೂರ್ಣವಾಗಿ ನಡೆಯಲಿಲ್ಲ. ಮಳೆ ಅಡ್ಡಿ ಪಡಿಸಿದ ಕಾರಣ ಡಕ್ವರ್ತ್ ಲೂಯಿಸ್​ ನಿಯಮದ ಅನ್ವಯ ಟೀಮ್ ಇಂಡಿಯಾ 5 ರನ್​ಗಳ ರೋಚಕ ಜಯ ಸಾಧಿಸಿತು. ಟಾಸ್ ಗೆದ್ದ ಹರ್ಮನ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು.

6 / 10
ಓಪನರ್​ಗಳಾದ ಸ್ಮೃತಿ ಮಂಧಾನ ಹಾಗೂ ಶಫಾಲಿ ವರ್ಮಾ ಉತ್ತಮ ಆರಂಭ ಒದಗಿಸಿದರು. ಮೊದಲ ವಿಕೆಟ್​ಗೆ 62 ರನ್​ಗಳ ಜೊತೆಯಾಟವಾಡಿ ಶಫಾಲಿ 24 ರನ್​ಗಳಿಸಿ ಔಟಾದರು. ಅತ್ತ ಸ್ಮೃತಿ ಮಂಧಾನ ಸ್ಫೋಟಕ ಬ್ಯಾಟಿಂಗ್ ನಡೆಸಿದರು.

7 / 10
ಮಂಧಾನ ಬ್ಯಾಟ್​ನಿಂದ 3 ಭರ್ಜರಿ ಸಿಕ್ಸ್ ಹಾಗೂ 9 ಫೋರ್​ಗಳು ಮೂಡಿಬಂದಿದ್ದವು. ಅಲ್ಲದೆ 56 ಎಸೆತಗಳಲ್ಲಿ 87 ರನ್​ ಬಾರಿಸಿ 19ನೇ ಓವರ್​ನಲ್ಲಿ ಔಟಾದರು. ಅಷ್ಟರಲ್ಲಾಗಲೇ ಟೀಮ್ ಇಂಡಿಯಾ ಮೊತ್ತವು 150 ರ ಗಡಿ ತಲುಪಿತ್ತು. ಆದರೆ, ಉಳಿದ ಯಾವ ಬ್ಯಾಟರ್​ಗಳು ಹೇಳಿಕೊಳ್ಳುವಂತಹ ಪ್ರದರ್ಶನ ನೀಡಲಿಲ್ಲ. ಭಾರತ 20 ಓವರ್​ಗಳಲ್ಲಿ 6 ವಿಕೆಟ್ ನಷ್ಟಕ್ಕೆ 155 ರನ್​ ಕಲೆಹಾಕಿತು.

8 / 10
156 ರನ್​ಗಳ ಕಠಿಣ ಗುರಿ ಪಡೆದ ಐರ್ಲೆಂಡ್ ತಂಡವು 8.2 ಓವರ್​ಗಳಲ್ಲಿ 2 ವಿಕೆಟ್ ನಷ್ಟಕ್ಕೆ 54 ರನ್​ ಬಾರಿಸಿದ್ದರು. ಈ ವೇಳೆ ಮಳೆ ಬಂದಿದ್ದರಿಂದ ಪಂದ್ಯವನ್ನು ಕೆಲ ಹೊತ್ತು ಸ್ಥಗಿತಗೊಳಿಸಲಾಯಿತು. ನಿರಂತರ ಮಳೆಯಾಗಿದ್ದರಿಂದ ಪಂದ್ಯ ನಡೆಸುವುದು ಅಸಾಧ್ಯ ಎಂದು ಮ್ಯಾಚ್ ರೆಫರಿ ನಿರ್ಧರಿಸಿದರು.

9 / 10
ಅಂತಿಮವಾಗಿ ಡಕ್ವರ್ತ್ ಲೂಯಿಸ್ ನಿಯಮದ ಮೊರೆ ಹೋಗಿ ಗಮನಿಸಿದಾಗ ಐರ್ಲೆಂಡ್ ಮೊತ್ತವು ಟೀಮ್ ಇಂಡಿಯಾಗಿಂತ 5 ರನ್​ ಹಿಂದಿತ್ತು. ಅಂದರೆ 8.2 ಓವರ್​ಗಳಲ್ಲಿ ಭಾರತ ತಂಡವು 59 ರನ್​ ಬಾರಿಸಿದ್ದರೆ, ಐರ್ಲೆಂಡ್ ತಂಡವು 54 ರನ್​ಗಳಿಸಲಷ್ಟೇ ಶಕ್ತರಾಗಿದ್ದರು. ಈ ಮೂಲಕ ಭಾರತ 5 ರನ್​ಗಳ ರೋಚಕ ಗೆಲುವು ಪಡೆದುಕೊಂಡಿತು.

10 / 10
Follow us