- Kannada News Photo gallery Cricket photos Harmanpreet Kaur defened her actions despite the ICC two-match ban
‘ನಾನು ಯಾವುದಕ್ಕೂ ವಿಷಾದಿಸುವುದಿಲ್ಲ’; ಬಾಂಗ್ಲಾ ಪ್ರವಾಸದ ವಿವಾದ ಬಗ್ಗೆ ಮೌನ ಮುರಿದ ಹರ್ಮನ್‌ಪ್ರೀತ್ ಕೌರ್
Harmanpreet Kaur: ಕಳೆದ ತಿಂಗಳು ಶೇರ್-ಇ-ಬಾಂಗ್ಲಾ ಸ್ಟೇಡಿಯಂನಲ್ಲಿ ನಡೆದ ಬಾಂಗ್ಲಾದೇಶ ವಿರುದ್ಧದ ಸರಣಿಯ ಮೂರನೇ ಏಕದಿನ ಪಂದ್ಯದ ವೇಳೆ ಅಂಪೈರ್‌ಗಳ ವಿರುದ್ಧ ಆಕ್ರೋಶ ಹೊರಹಾಕಿದ್ದ ಟೀಂ ಇಂಡಿಯಾ ನಾಯಕಿ ಹರ್ಮನ್‌ಪ್ರೀತ್ ಕೌರ್ ಕೊನೆಗೂ ಆ ಘಟನೆಯ ಬಗ್ಗೆ ಮೌನ ಮುರಿದಿದ್ದಾರೆ.
Updated on: Aug 21, 2023 | 7:40 AM

ಕಳೆದ ತಿಂಗಳು ಶೇರ್-ಇ-ಬಾಂಗ್ಲಾ ಸ್ಟೇಡಿಯಂನಲ್ಲಿ ನಡೆದ ಬಾಂಗ್ಲಾದೇಶ ವಿರುದ್ಧದ ಸರಣಿಯ ಮೂರನೇ ಏಕದಿನ ಪಂದ್ಯದ ವೇಳೆ ಅಂಪೈರ್‌ಗಳ ವಿರುದ್ಧ ಆಕ್ರೋಶ ಹೊರಹಾಕಿದ್ದ ಟೀಂ ಇಂಡಿಯಾ ನಾಯಕಿ ಹರ್ಮನ್‌ಪ್ರೀತ್ ಕೌರ್ ಕೊನೆಗೂ ಆ ಘಟನೆಯ ಬಗ್ಗೆ ಮೌನ ಮುರಿದಿದ್ದಾರೆ.

ವಾಸ್ತವವಾಗಿ ಬಾಂಗ್ಲಾ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ಹರ್ಮನ್‌ಪ್ರೀತ್ ಕೌರ್ ಅಂಪೈರ್‌ಗಳ ವಿರುದ್ಧ ತಮ್ಮ ಅಸಮಾಧಾನ ಹೊರಹಾಕಿದ್ದರು. ಅಲ್ಲದೆ ಅಂಪೈರ್ ನಿರ್ಣಯವನ್ನು ಮೈದಾನದಲ್ಲೇ ಧಿಕ್ಕರಿಸಿ, ತಮ್ಮ ಬ್ಯಾಟ್ನಿಂದ ವಿಕೆಟ್ಗಳಿಗೆ ಹೊಡೆದಿದ್ದರು.

ಇಲ್ಲಿಗೆ ನಿಲ್ಲಿಸದ ಹರ್ಮನ್‌ಪ್ರೀತ್, ಪಂದ್ಯದ ನಂತರದ ಪ್ರಸ್ತುತಿಯಲ್ಲಿ ಅಂಪೈರ್‌ಗಳು ಪಕ್ಷಪಾತ ತೋರಿದ್ದಾರೆ ಎಂದು ದೂರಿದ್ದರು. ಹಾಗೆಯೇ ಫೋಟೋ ಸೆಷನ್ ವೇಳೆ ಬಾಂಗ್ಲಾದೇಶ ತಂಡದ ನಾಯಕಿಗೆ ಅಂಪೈರ್ಗಳನ್ನು ಸಹ ತಮ್ಮೊಂದಿಗೆ ನಿಲ್ಲಿಸಿಕೊಳ್ಳುವಂತೆ ಹೇಳಿದ್ದರು. ಇದರಿಂದ ಅಸಮಾಧಾನಗೊಂಡಿದ್ದ ಬಾಂಗ್ಲಾ ನಾಯಕಿ ತಮ್ಮ ತಂಡದೊಂದಿಗೆ ಹೊರ ನಡೆದಿದ್ದರು.

ಆ ಬಳಿಕ ಹರ್ಮನ್‌ಪ್ರೀತ್ ವಿರುದ್ಧ ಕಠಿಣ ಕ್ರಮ ಜರುಗಿಸಿದ್ದ ಐಸಿಸಿ, ಪಂದ್ಯ ಶುಲ್ಕವನ್ನು ಖಡಿತಗೊಳಿಸಿದಲ್ಲದೆ, ಎರಡು ಪಂದ್ಯಗಳ ನಿಷೇಧವನ್ನು ವಿಧಿಸಿತ್ತು. ಇದರರ್ಥ ಅವರು ಮುಂದಿನ ತಿಂಗಳು ಚೀನಾದ ಹ್ಯಾಂಗ್‌ಝೌರ್‌ನಲ್ಲಿ ನಡೆಯಲಿರುವ 2023 ರ ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಕ್ವಾರ್ಟರ್-ಫೈನಲ್ ಮತ್ತು ಪ್ರಾಯಶಃ ಸೆಮಿ-ಫೈನಲ್ ಪಂದ್ಯದಿಂದ ಹೊರಗುಳಿಯಬೇಕಾಗುತ್ತದೆ.

ಇದೀಗ ಆ ಘಟನೆಯ ಬಗ್ಗೆ ಮೌನ ಮುರಿದಿರುವ ಕೌರ್, "ನಾನು ಯಾವುದಕ್ಕೂ ವಿಷಾದಿಸುವುದಿಲ್ಲ ಏಕೆಂದರೆ ಆಟಗಾರನಾಗಿ ದಿನದ ಕೊನೆಯಲ್ಲಿ ನೀವು ನ್ಯಾಯಯುತವಾದ ಸಂಗತಿಗಳು ನಡೆಯುವುದನ್ನು ನೋಡಲು ಬಯಸುತ್ತೀರಿ. ಆಟಗಾರನಾಗಿ ನೀವು ಯಾವಾಗಲೂ ನಿಮ್ಮನ್ನು ಮತ್ತು ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ನಿಮಗೆ ಹಕ್ಕಿದೆ"

"ನಾನು ಯಾವುದೇ ಆಟಗಾರನಿಗೆ ಅಥವಾ ಯಾವುದೇ ವ್ಯಕ್ತಿಗೆ ತಪ್ಪು ಹೇಳಿದ್ದೇನೆ ಎಂದು ನಾನು ಭಾವಿಸುವುದಿಲ್ಲ. ನಾನು ಮೈದಾನದಲ್ಲಿ ಏನಾಯಿತು ಎಂದು ಹೇಳಿದ್ದೇನೆ. ನಾನು ಯಾವುದಕ್ಕೂ ವಿಷಾದಿಸುವುದಿಲ್ಲ" ಎಂದು ಹರ್ಮನ್‌ಪ್ರೀತ್ ಹೇಳಿದ್ದಾರೆ.



















