IND vs ENG: ಲಾರ್ಡ್ಸ್‌ನಲ್ಲಿ ಈ ಸಾಧನೆ ಮಾಡಿದ ಏಕೈಕ ಬ್ಯಾಟರ್ ಹರ್ಮನ್‌ಪ್ರೀತ್ ಕೌರ್

Updated on: Jul 10, 2026 | 10:37 PM

Harmanpreet Kaur Makes History at Lord's: ಭಾರತ-ಇಂಗ್ಲೆಂಡ್ ಟೆಸ್ಟ್ ಪಂದ್ಯದಲ್ಲಿ ಹರ್ಮನ್‌ಪ್ರೀತ್ ಕೌರ್ ಲಾರ್ಡ್ಸ್ ಮೈದಾನದಲ್ಲಿ ಇತಿಹಾಸ ಸೃಷ್ಟಿಸಿದ್ದಾರೆ. ಟೆಸ್ಟ್, ಏಕದಿನ ಮತ್ತು ಟಿ20 - ಈ ಮೂರು ಮಾದರಿಗಳಲ್ಲಿ ಅರ್ಧಶತಕ ಗಳಿಸಿದ ಮೊದಲ ಭಾರತೀಯ, ಮೊದಲ ಮಹಿಳಾ ಕ್ರಿಕೆಟರ್ ಹಾಗೂ ವಿಶ್ವದ ನಾಲ್ಕನೇ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಸಚಿನ್, ಕೊಹ್ಲಿಯಂತಹ ದಿಗ್ಗಜರೂ ಸಾಧಿಸದ ಈ ಮೈಲಿಗಲ್ಲನ್ನು ಕೌರ್ ತಲುಪಿ ಭಾರತೀಯ ಕ್ರಿಕೆಟ್‌ಗೆ ಹೆಮ್ಮೆ ತಂದಿದ್ದಾರೆ.

1 / 6
ಭಾರತ ಹಾಗೂ ಇಂಗ್ಲೆಂಡ್‌ ಮಹಿಳಾ ತಂಡಗಳ ನಡುವಿನ ಏಕೈಕ ಟೆಸ್ಟ್ ಪಂದ್ಯ ಐತಿಹಾಸಿಕ ಲಾರ್ಡ್ಸ್‌ ಮೈದಾನದಲ್ಲಿ ನಡೆಯುತ್ತಿದೆ. ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಭಾರತ ಮಹಿಳಾ ತಂಡ 285 ರನ್​ಗಳಿಗೆ ತನ್ನ ಮೊದಲ ಇನ್ನಿಂಗ್ಸ್ ಮುಗಿಸಿದೆ. ತಂಡದ ಪರ ಸ್ಮೃತಿ ಮಂಧಾನ, ಹರ್ಮನ್​ಪ್ರೀತ್ ಕೌರ್ ಹಾಗೂ ದೀಪ್ತಿ ಶರ್ಮಾ ಅರ್ಧಶತಕದ ಇನ್ನಿಂಗ್ಸ್ ಆಡಿದರು (PC-BCCI Women x).

2 / 6
ನಾಯಕಿ ಹರ್ಮನ್​ಪ್ರೀತ್ ಕೌರ್ ಲಾರ್ಡ್ಸ್ ಮೈದಾನದಲ್ಲಿ ಅರ್ಧಶತಕದ ಇನ್ನಿಂಗ್ಸ್ ಆಡುವ ಮೂಲಕ ಮಹಿಳಾ ಕ್ರಿಕೆಟ್‌ನಲ್ಲಿ ಹೊಸ ಇತಿಹಾಸ ಸೃಷ್ಟಿಸಿದರು. ಹರ್ಮನ್‌ಪ್ರೀತ್ ಕೌರ್ 121 ಎಸೆತಗಳಲ್ಲಿ 58 ರನ್​ಗಳ ಇನ್ನಿಂಗ್ಸ್ ಆಡುವ ಮೂಲಕ ಲಾರ್ಡ್ಸ್‌ ಮೈದಾನದಲ್ಲಿ ಮೂರು ಮಾದರಿಯಲ್ಲಿ ಅರ್ಧಶತಕ ಬಾರಿಸಿದ ಮೊದಲ ಮಹಿಳಾ ಆಟಗಾರ್ತಿ ಎಂಬ ದಾಖಲೆ ನಿರ್ಮಿಸಿದರು (PC-BCCI Women x).

3 / 6
ಹಾಗೆಯೇ ಲಾರ್ಡ್ಸ್ ಟೆಸ್ಟ್‌ನಲ್ಲಿ ಅರ್ಧಶತಕ ಗಳಿಸುವ ಮೂಲಕ, ಹರ್ಮನ್‌ಪ್ರೀತ್ ಕೌರ್ ಸಚಿನ್ ಮತ್ತು ವಿರಾಟ್ ಕೊಹ್ಲಿಯಂತಹ ಲೆಜೆಂಡರಿ ಆಟಗಾರರು ಸಹ ತಮ್ಮ ವೃತ್ತಿಜೀವನದಲ್ಲಿ ಸಾಧಿಸಲು ವಿಫಲವಾದ ಮೈಲಿಗಲ್ಲನ್ನು ಸಾಧಿಸಿದರು. ಹರ್ಮನ್‌ಪ್ರೀತ್ ಕೌರ್ ಲಾರ್ಡ್ಸ್‌ನಲ್ಲಿ ಮೂರು ಸ್ವರೂಪಗಳಲ್ಲಿ ಐವತ್ತು ಪ್ಲಸ್ ಸ್ಕೋರ್ ಗಳಿಸಿದ ಮೊದಲ ಭಾರತೀಯ, ಮೊದಲ ಮಹಿಳಾ ಆಟಗಾರ್ತಿ ಮತ್ತು ವಿಶ್ವದ ನಾಲ್ಕನೇ ಪ್ಲೇಯರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು (PC-BCCI Women x).

4 / 6
 ಲಾರ್ಡ್ಸ್‌ನಲ್ಲಿ ಹರ್ಮನ್​ಪ್ರೀತ್ ಕೌರ್ ಹೊರತುಪಡಿಸಿ ಪಾಕಿಸ್ತಾನದ ಯೂನಿಸ್ ಖಾನ್, ಶ್ರೀಲಂಕಾದ ಮಹೇಲಾ ಜಯವರ್ಧನೆ ಮತ್ತು ಕುಮಾರ್ ಸಂಗಕ್ಕಾರ ಮಾತ್ರ ಟೆಸ್ಟ್, ಏಕದಿನ ಮತ್ತು ಟಿ20ಕ್ರಿಕೆಟ್​ನಲ್ಲಿ ಅರ್ಧಶತಕದ ಇನ್ನಿಂಗ್ಸ್ ಆಡಿದ್ದಾರೆ. ಆದರೆ ಈಗ ಹರ್ಮನ್ಪ್ರೀತ್ ಕೌರ್ ಕೂಡ ಈ ಪಟ್ಟಿಗೆ ಸೇರಿದ್ದಾರೆ (PC-BCCI Women x).

5 / 6
ಲಾರ್ಡ್ಸ್‌ನಲ್ಲಿ ನಡೆದ ಮೊದಲ ಟೆಸ್ಟ್‌ ಪಂದ್ಯದಲ್ಲಿ ಹರ್ಮನ್ಪ್ರೀತ್ ಕೌರ್ 58 ರನ್​ಗಳ ಇನ್ನಿಂಗ್ಸ್ ಆಡಿದರು. ಇನ್ನು ಅದೇ ಮೈದಾನದಲ್ಲಿ ಹರ್ಮನ್ ಎರಡು ಏಕದಿನ ಅರ್ಧಶತಕಗಳನ್ನು ಕಲೆಹಾಕಿದ್ದಾರೆ. ಈ ಎರಡು ಅರ್ಧಶತಕಗಳನ್ನು ಅವರು 2012 ಮತ್ತು 2017 ರಲ್ಲಿ ಇದೇ ಇಂಗ್ಲೆಂಡ್ ವಿರುದ್ಧ ಬಾರಿಸಿದ್ದರು. ಹಾಗೆಯೇ 2026 ರ ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಹರ್ಮನ್ ಈ ಮೈದಾನದಲ್ಲಿ ಆಸ್ಟ್ರೇಲಿಯಾ ವಿರುದ್ಧ ಅರ್ಧಶತಕದ ಇನ್ನಿಂಗ್ಸ್ ಆಡಿದ್ದರು (PC-BCCI Women x).

6 / 6
ಹರ್ಮನ್‌ಪ್ರೀತ್ ಕೌರ್ ಲಾರ್ಡ್ಸ್‌ ಮೈದಾನದಲ್ಲಿ ಅರ್ಧಶತಕದ ಇನ್ನಿಂಗ್ಸ್ ಆಡುವುದರ ಜೊತೆಗೆ ಸ್ಮೃತಿ ಮಂಧಾನ ಅವರೊಂದಿಗೆ ಅರ್ಧಶತಕದ ಪಾಲುದಾರಿಕೆಯನ್ನು ಹಂಚಿಕೊಂಡರು. ಈ ಪಾಲುದಾರಿಕೆ 155 ಎಸೆತಗಳಲ್ಲಿ 89 ರನ್‌ಗಳಾಗಿತ್ತು. ಹರ್ಮನ್ ಜೊತೆಗೆ ಮಂಧಾನ ಕೂಡ 83 ರನ್​ಗಳ ಇನ್ನಿಂಗ್ಸ್ ಆಡುವ ಮೂಲಕ ಶತಕದಿಂದ ವಂಚಿತರಾದರು (PC-BCCI Women x).

Follow Us