IPL 2026: ಐಪಿಎಲ್ ಹರಾಜಿಗೂ ಮುನ್ನ ಎಷ್ಟು ಆಟಗಾರರನ್ನು ಉಳಿಸಿಕೊಳ್ಳಬಹುದು?

Updated on: Oct 11, 2025 | 8:06 AM

IPL 2026 Auction: ಇಂಡಿಯನ್ ಪ್ರೀಮಿಯರ್ ಲೀಗ್​ 2026ರ (ಐಪಿಎಲ್ 2026) ಸಿದ್ಧತೆಗಳು ಶುರುವಾಗಿದೆ. ಅದರ ಮೊದಲ ಹೆಜ್ಜೆ ಎಂಬಂತೆ ಇದೀಗ ಆಟಗಾರರ ಹರಾಜಿಗಾಗಿ ದಿನಾಂಕಗಳನ್ನು ನಿಗದಿ ಮಾಡಲಾಗಿದೆ. ಅದರಂತೆ ಡಿಸೆಂಬರ್ ತಿಂಗಳಲ್ಲೇ ಈ ಬಾರಿಯ ಆಕ್ಷನ್ ಪ್ರಕ್ರಿಯೆ ನಡೆಯಲಿದೆ. ಈ ಹರಾಜಿನಲ್ಲಿ 150 ರಿಂದ 200 ಆಟಗಾರರು ಕಾಣಿಸಿಕೊಳ್ಳುವ ಸಾಧ್ಯತೆಯಿದೆ.

1 / 6
ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಸೀಸನ್-19ರ ಹರಾಜು ಪ್ರಕ್ರಿಯೆ ಡಿಸೆಂಬರ್ ಮೂರನೇ ವಾರದಲ್ಲಿ ನಡೆಯುವ ಸಾಧ್ಯತೆಯಿದೆ. ಇದಕ್ಕಾಗಿ ಮೂರು ದಿನಾಂಕಗಳನ್ನು ನಿಗದಿಪಡಿಸಲಾಗಿದ್ದು, ಅದರಂತೆ ಡಿಸೆಂಬರ್ 13 ರಿಂದ 15 ರೊಳಗೆ ಆಟಗಾರರ ಹರಾಜು ಪ್ರಕ್ರಿಯೆ ನಡೆಯುವುದು ಬಹುತೇಕ ಖಚಿತ.

2 / 6
ಈ ಹರಾಜಿಗೂ ಮುನ್ನ ಪ್ರತಿ ಫ್ರಾಂಚೈಸಿಗಳು ಎಷ್ಟು ಆಟಗಾರರನ್ನು ಉಳಿಸಿಕೊಳ್ಳಬಹುದು? ಎಂಬ ಪ್ರಶ್ನೆ ಮೂಡುವುದು ಸಹಜ. ಏಕೆಂದರೆ ಪ್ರತಿ ಬಾರಿ ಹರಾಜಿಗೂ ಮುನ್ನ ಎಲ್ಲಾ ಫ್ರಾಂಚೈಸಿಗಳು ಕೆಲ ಆಟಗಾರರನ್ನು ರಿಲೀಸ್ ಮಾಡುತ್ತಾರೆ. ಅದರಲ್ಲೂ ಕಳೆದ ಸೀಸನ್​ನಲ್ಲಿ 6 ಆಟಗಾರರನ್ನು ಮಾತ್ರ ಉಳಿಸಿಕೊಳ್ಳಲು ಅವಕಾಶ ನೀಡಲಾಗಿತ್ತು.

3 / 6
ಆದರೆ ಈ ಬಾರಿ ಇಂತಿಷ್ಟು ಆಟಗಾರರನ್ನು ಉಳಿಸಿಕೊಳ್ಳಬೇಕೆಂಬ ನಿಯಮ ಇರುವುದಿಲ್ಲ. ಅಂದರೆ ಈ ಸಲ ನಡೆಯುತ್ತಿರುವುದು ಮಿನಿ ಹರಾಜು. ಮೆಗಾ ಹರಾಜು ನಡೆಯುವಾಗ ಮಾತ್ರ ಇಂತಿಷ್ಟು ಆಟಗಾರರನ್ನು ಮಾತ್ರ ರಿಟೈನ್ ಮಾಡಿ, ಉಳಿದವರನ್ನು ಬಿಡುಗಡೆ ಮಾಡಬೇಕೆಂಬ ನಿಯಮ ಜಾರಿಯಲ್ಲಿರುತ್ತದೆ.

4 / 6
ಈ ಬಾರಿ ಮಿನಿ ಹರಾಜು ನಡೆಯುತ್ತಿರುತ್ತಿರುವುದರಿಂದ ಎಷ್ಟು ಆಟಗಾರರನ್ನು ಬೇಕಿದ್ದರೂ ತಂಡದಲ್ಲೇ ಉಳಿಸಿಕೊಳ್ಳಬಹುದು. ಉದಾಹರಣೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಒಟ್ಟು 22 ಆಟಗಾರರಿದ್ದಾರೆ. ಈ ಇಪ್ಪೆತ್ತರಡು ಆಟಗಾರರನ್ನು ಉಳಿಸಿಕೊಂಡು ಆರ್​ಸಿಬಿ ಹರಾಜಿನಲ್ಲಿ ಭಾಗವಹಿಸಬಹುದು.

5 / 6
ಅಂದರೆ ಐಪಿಎಲ್ ನಿಯಮದ ಪ್ರಕಾರ ಒಂದು ತಂಡದಲ್ಲಿ 25 ಆಟಗಾರರಿಗೆ ಅವಕಾಶವಿದೆ. ಈ 25 ಆಟಗಾರರನ್ನೂ ಸಹ  ರಿಟೈನ್ ಮಾಡಿಕೊಳ್ಳಬಹುದು.  ಆದರೆ 25 ಪ್ಲೇಯರ್ಸ್​ನ ರಿಟೈನ್ ಮಾಡಿದ್ರೆ, ಹರಾಜಿನಲ್ಲಿ ಭಾಗವಹಿಸಲು ಅವಕಾಶ ಇರುವುದಿಲ್ಲ. ಹೀಗಾಗಿಯೇ ಈ ಬಾರಿ ಎಲ್ಲಾ ಫ್ರಾಂಚೈಸಿಗಳು ಕೆಲವೇ ಕೆಲವು ಆಟಗಾರರನ್ನು ಮಾತ್ರ ಬಿಡುಗಡೆ ಮಾಡಲಿದ್ದಾರೆ.

6 / 6
ಇನ್ನು ಹೀಗೆ ರಿಲೀಸ್ ಆದ ಆಟಗಾರರ ಸ್ಲಾಟ್​ಗಳಿಗೆ ಮಾತ್ರ ಹರಾಜು ಪ್ರಕ್ರಿಯೆ ನಡೆಯಲಿದೆ. ಅಂದರೆ 10 ಫ್ರಾಂಚೈಸಿಗಳಲ್ಲಿ ಖಾಲಿ ಇರುವ ಸ್ಥಾನಗಳಿಗಾಗಿ ಹರಾಜು ಪ್ರಕ್ರಿಯೆ ನಡೆಯಲಿದೆ. ಇದೇ ಕಾರಣದಿಂದಾಗಿ ಈ ಸಲ 150 ರಿಂದ 200 ಆಟಗಾರರ ಹೆಸರುಗಳು ಮಾತ್ರ ಹರಾಜಿನಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. 

Published On - 8:05 am, Sat, 11 October 25