- TV9 Kannada Kannada News Photos Cricket Photos Jasprit Bumrah Play 50 Matches In All 3 Formats for India
ಭಾರತದ ಯಾವುದೇ ವೇಗಿಗೆ ಸಾಧ್ಯವಾಗದ ಸಾಧನೆ ಮಾಡಿದ ಜಸ್ಪ್ರೀತ್ ಬುಮ್ರಾ
India vs West Indies, 2nd Test: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಣ ಎರಡನೇ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಟೀಮ್ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ ವಿಶೇಷ ಮೈಲುಗಲ್ಲು ಮುಟ್ಟಿದ್ದಾರೆ. ಅದು ಸಹ ಭಾರತದ ಯಾವುದೇ ವೇಗಿಗೆ ಸಾಧ್ಯವಾಗದ ಸಾಧನೆ ಮಾಡುವ ಮೂಲಕ ಎಂಬುದು ವಿಶೇಷ.
Updated on: Oct 11, 2025 | 9:54 AM

ಟೀಮ್ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ (Jasprit Bumrah) ವಿಶೇಷ ದಾಖಲೆ ಬರೆದಿದ್ದಾರೆ. ಅದು ಸಹ ಮೂರು ಸ್ವರೂಪಗಳಲ್ಲೂ ಭಾರತದ ಪರ ಐವತ್ತು ಪಂದ್ಯಗಳನ್ನಾಡುವ ಮೂಲಕ ಎಂಬುದು ವಿಶೇಷ. ದೆಹಲಿಯಲ್ಲಿ ನಡೆಯುತ್ತಿರುವ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದ ಮೂಲಕ ಬುಮ್ರಾ ಈ ಸಾಧನೆ ಮಾಡಿದ್ದಾರೆ.

ಜಸ್ಪ್ರೀತ್ ಬುಮ್ರಾಗೂ ಮುನ್ನ ಟೀಮ್ ಇಂಡಿಯಾ ಪರ 6 ಆಟಗಾರರು ಮಾತ್ರ ಮೂರು ಸ್ವರೂಪಗಳಲ್ಲೂ 50+ ಪಂದ್ಯಗಳನ್ನಾಡಿದ್ದರು. ಈ ಆರು ಆಟಗಾರರಲ್ಲಿ ಒಬ್ಬರೇ ಒಬ್ಬರು ವೇಗದ ಬೌಲರ್ ಇರಲಿಲ್ಲ ಎಂಬುದು ವಿಶೇಷ. ಇದೀಗ ಈ ಕೊರತೆಯನ್ನು ಜಸ್ಪ್ರೀತ್ ಬುಮ್ರಾ ನೀಗಿಸಿದ್ದಾರೆ.

ಬುಮ್ರಾ ಟೀಮ್ ಇಂಡಿಯಾ ಪರ ಟೆಸ್ಟ್ನಲ್ಲಿ 50 ಪಂದ್ಯಗಳನ್ನಾಡಿದರೆ, ಏಕದಿನ ಕ್ರಿಕೆಟ್ನಲ್ಲಿ 89 ಮ್ಯಾಚ್ಗಳನ್ನಾಡಿದ್ದಾರೆ. ಇನ್ನು ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 75 ಪಂದ್ಯಗಳನ್ನಾಡಿದ್ದಾರೆ. ಈ ಮೂಲಕ ಭಾರತದ ಪರ ಮೂರು ಸ್ವರೂಪಗಳಲ್ಲೂ 50 ಪಂದ್ಯಗಳನ್ನಾಡಿದ್ದ ಮೊದಲ ವೇಗಿ ಎನಿಸಿಕೊಂಡಿದ್ದಾರೆ.

ಇದಕ್ಕೂ ಮುನ್ನ ಟೀಮ್ ಇಂಡಿಯಾ ಪರ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಮಹೇಂದ್ರ ಸಿಂಗ್, ರವೀಂದ್ರ ಜಡೇಜಾ, ಕೆಎಲ್ ರಾಹುಲ್ ಹಾಗೂ ರವಿಚಂದ್ರನ್ ಅಶ್ವಿನ್ ಮಾತ್ರ ಮೂರು ಸ್ವರೂಪಗಳಲ್ಲೂ ಕನಿಷ್ಠ 50 ಪಂದ್ಯಗಳನ್ನಾಡಿದ ಸಾಧನೆ ಮಾಡಿದ್ದರು.

ಇದೀಗ 31 ವರ್ಷದ ಜಸ್ಪ್ರೀತ್ ಬುಮ್ರಾ ಈ ಪಟ್ಟಿಗೆ 7ನೇ ಆಟಗಾರನಾಗಿ ಎಂಟ್ರಿ ಕೊಟ್ಟಿದ್ದಾರೆ. ಈ ಮೂಲಕ ಮೂರು ಸ್ವರೂಪಗಳಲ್ಲೂ ಕನಿಷ್ಠ 50 ಮ್ಯಾಚ್ಗಳನ್ನಾಡಿದ ಟೀಮ್ ಇಂಡಿಯಾದ ಮೊದಲ ವೇಗ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.
Read More



