- Kannada News Photo gallery Cricket photos ICC announces prize money for women's T20 World Cup 2024 Kannada news
Women’s T20 World Cup 2024: ಸರಿಸಮಾನಾದ ಬಹುಮಾನ ಮೊತ್ತ ಘೋಷಿಸಿದ ಐಸಿಸಿ
ICC Women’s T20 World Cup 2024: ಮಹಿಳಾ ಟಿ20 ವಿಶ್ವಕಪ್ ಗೆದ್ದ ತಂಡಕ್ಕೆ ಪುರುಷ ಟಿ20 ಚಾಂಪಿಯನ್ ತಂಡಕ್ಕೆ ಸಿಕ್ಕಷ್ಟೇ ಸರಿಸಮಾನದ ಬಹುಮಾನ ಸಿಗಲಿದೆ ಎಂಬುದು ದೊಡ್ಡ ಸುದ್ದಿಯಾಗಿದೆ. ಇನ್ನು ಮಹಿಳಾ ಟಿ20 ವಿಶ್ವಕಪ್‌ನಲ್ಲಿ ವಿಜೇತ ತಂಡಕ್ಕೆ 19 ಕೋಟಿ 59 ಲಕ್ಷ ರೂಪಾಯಿ ನೀಡುವುದಾಗಿ ಐಸಿಸಿ ಪ್ರಕಟಿಸಿದೆ.
Updated on: Sep 17, 2024 | 7:23 PM

ಇದೇ ಅಕ್ಟೋಬರ್ 3 ರಿಂದ ಆರಂಭವಾಗಲಿರುವ ಮಹಿಳಾ ಟಿ20 ವಿಶ್ವಕಪ್‌ಗೆ ಐಸಿಸಿ ಸಕಲ ಸಿದ್ಧತೆ ಮಾಡಿಕೊಂಡಿದೆ. ಯುಎಇಯಲ್ಲಿ ನಡೆಯುತ್ತಿರುವ ಈ ಚುಟುಕು ಸಮರಕ್ಕೆ ಇದೀಗ ದಿನಗಣನೆ ಆರಂಭವಾಗಿದೆ. ಈ ನಡುವೆ ಐಸಿಸಿ, ಈ ಪಂದ್ಯಾವಳಿಯ ಬಹುಮಾನ ಮೊತ್ತವನ್ನು ಪ್ರಕಟಿಸಿದೆ. ಅದರಂತೆ ಈ ಬಾರಿಯ ಚಾಂಪಿಯನ್ ತಂಡಕ್ಕೆ ಕೋಟಿಗಳ ಸುರಿಮಳೆಯಾಗಲಿದೆ.

ಮಹಿಳಾ ಟಿ20 ವಿಶ್ವಕಪ್ ಗೆದ್ದ ತಂಡಕ್ಕೆ ಪುರುಷ ಟಿ20 ಚಾಂಪಿಯನ್ ತಂಡಕ್ಕೆ ಸಿಕ್ಕಷ್ಟೇ ಸರಿಸಮಾನದ ಬಹುಮಾನ ಸಿಗಲಿದೆ ಎಂಬುದು ದೊಡ್ಡ ಸುದ್ದಿಯಾಗಿದೆ. ಇನ್ನು ಮಹಿಳಾ ಟಿ20 ವಿಶ್ವಕಪ್‌ನಲ್ಲಿ ವಿಜೇತ ತಂಡಕ್ಕೆ 19 ಕೋಟಿ 59 ಲಕ್ಷ ರೂಪಾಯಿ ನೀಡುವುದಾಗಿ ಐಸಿಸಿ ಪ್ರಕಟಿಸಿದೆ.

ಇತ್ತೀಚೆಗಷ್ಟೇ ಅಮೆರಿಕ ಹಾಗೂ ವೆಸ್ಟ್ ಇಂಡೀಸ್ ಆತಿಥ್ಯದಲ್ಲಿ ನಡೆದಿದ್ದ 2024 ರ ಟಿ20 ವಿಶ್ವಕಪ್‌ನಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದ ಟೀಮ್ ಇಂಡಿಯಾ ಇದಕ್ಕಿಂತ ಕೊಂಚ ಹೆಚ್ಚು, ಅಂದರೆ 20.52 ಕೋಟಿ ರೂ. ಬಹುಮಾನ ಪಡೆದಿತ್ತು.

ಮೇಲೆ ಹೇಳಿದಂತೆ ಮಹಿಳೆಯರ ಟಿ20 ವಿಶ್ವಕಪ್ ಅಕ್ಟೋಬರ್ 3 ರಿಂದ ಆರಂಭವಾಗಲಿದೆ. ಈ ಪಂದ್ಯಾವಳಿಯನ್ನು ಬಾಂಗ್ಲಾದೇಶದಿಂದ ಯುಎಇಗೆ ಸ್ಥಳಾಂತರಿಸಲಾಗಿದೆ. ವಾಸ್ತವವಾಗಿ ಈ ಮೊದಲು ಈ ಪಂದ್ಯವಾಳಿಗೆ ಬಾಂಗ್ಲಾದೇಶ ಆತಿಥ್ಯವಹಿಸಬೇಕಿತ್ತು. ಆದರೆ ಅಲ್ಲಿ ಮೀಸಲಾತಿ ವಿರುದ್ಧ ಭುಗಿಲೆದ್ದ ಹಿಂಸಾಚಾರದಿಂದಾಗಿ ಐಸಿಸಿ, ಪಂದ್ಯವಾಳಿಯನ್ನು ಸ್ಥಳಾಂತರಿಸುವ ನಿರ್ಧಾರಕ್ಕೆ ಬಂದಿತು.

ಈ ಬಾರಿಯ ಟಿ20 ವಿಶ್ವಕಪ್ ವಿಜೇತ ತಂಡಕ್ಕೆ 19 ಕೋಟಿ 59 ರೂ. ಬಹುಮಾನ ಸಿಕ್ಕರೆ, ರನ್ನರ್ ಅಪ್ ತಂಡ 9 ಕೋಟಿ 79 ಲಕ್ಷ ರೂ. ಬಹುಮಾನ ಪಡೆಯಲಿದೆ. ಕಳೆದ ವರ್ಷ ರನ್ನರ್ ಅಪ್ ಆಗಿದ್ದ ದಕ್ಷಿಣ ಆಫ್ರಿಕಾ ತಂಡ ಐದು ಲಕ್ಷ ಡಾಲರ್ ಪಡೆದಿತ್ತು. ಇದೀಗ ಈ ಬಹುಮಾನದ ಗಾತ್ರದಲ್ಲಿ ಶೇ.134ರಷ್ಟು ಹೆಚ್ಚಳ ಆಗಿದೆ.

ಇನ್ನು ಸೆಮಿಫೈನಲ್‌ನಲ್ಲಿ ಸೋತ ತಂಡಗಳು 5 ಕೋಟಿ 65 ಲಕ್ಷ ರೂ. ಬಹುಮಾನ ಪಡೆಯಲಿವೆ. ಕಳೆದ ಬಾರಿಯ ವಿಶ್ವಕಪ್‌ನಲ್ಲಿ ಸೆಮಿಫೈನಲ್ ಸೋತ ತಂಡಗಳಿಗೆ 2 ಲಕ್ಷದ 10 ಸಾವಿರ ಡಾಲರ್ ಬಹುಮಾನ ನೀಡಲಾಗಿತ್ತು. ಈ ರೀತಿಯಾಗಿ, ಪಂದ್ಯಾವಳಿಯ ಒಟ್ಟು ಬಹುಮಾನದ ಮೊತ್ತವನ್ನು ಹತ್ತಿರಹಿತ್ತರ 80 ಕೋಟಿಗೆ ಮೀಸಲಿರಿಸಲಾಗಿದೆ.

ಉಳಿದಂತೆ ಈ ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಗುಂಪು ಹಂತದಿಂದ ಹೊರಬೀಳುವ ತಂಡಗಳು ಸರಿ ಸುಮಾರು 26 ಲಕ್ಷ ರೂ ಬಹುಮಾನ ಪಡೆದರೆ, ಸೆಮಿಫೈನಲ್ ತಲುಪಲು ವಿಫಲವಾದ ಆರು ತಂಡಗಳು ತಮ್ಮ ಅಂತಿಮ ಸ್ಥಾನಗಳ ಆಧಾರದ ಮೇಲೂ ಬಹುಮಾನವನ್ನು ಪಡೆಯಲ್ಲಿವೆ.




