ICC Awards 2023: ಆಸೀಸ್ ನಾಯಕನಿಗೆ ಒಲಿದ ಐಸಿಸಿ ವರ್ಷದ ಕ್ರಿಕೆಟಿಗ ಪ್ರಶಸ್ತಿ..!

ICC Awards 2023: 2023 ರಲ್ಲಿ ಟಿ20 ಕ್ರಿಕೆಟ್ ಹೊರತುಪಡಿಸಿ ಏಕದಿನ ಹಾಗೂ ಟೆಸ್ಟ್ ಮಾದರಿಯಲ್ಲಿ ತಂಡವನ್ನು ಚಾಂಪಿಯನ್ ಮಾಡಿದ್ದ ಆಸ್ಟ್ರೇಲಿಯಾದ ನಾಯಕ ಪ್ಯಾಟ್ ಕಮ್ಮಿನ್ಸ್​ಗೆ ಈ ಬಾರಿಯ ಐಸಿಸಿ ವರ್ಷದ ಕ್ರಿಕೆಟಿಗ ಪ್ರಶಸ್ತಿ ಲಭಿಸಿದೆ.

ಪೃಥ್ವಿಶಂಕರ
|

Updated on: Jan 25, 2024 | 7:02 PM

ಐಸಿಸಿ ಪ್ರತಿ ವರ್ಷ ಕ್ರಿಕೆಟ್​ನ ಮೂರು ಮಾದರಿಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಆಟಗಾರನಿಗೆ ವರ್ಷದ ಕ್ರಿಕೆಟಿಗ ಪ್ರಶಸ್ತಿ ನೀಡಿ ಗೌರವಿಸುತ್ತದೆ. ಈ ಪ್ರಶಸ್ತಿಗೆ ಆಯ್ಕೆಯಾದ ಆಟಗಾರ ಟಿ20 ಕ್ರಿಕೆಟ್, ಏಕದಿನ ಕ್ರಿಕೆಟ್ ಅಥವಾ ಟೆಸ್ಟ್ ಕ್ರಿಕೆಟ್​ನಲ್ಲಿ ಅದ್ಭುತ ಪ್ರದರ್ಶನ ನೀಡಿರಬೇಕು.

1 / 8
ಅದರಂತೆ 2023 ರಲ್ಲಿ ಟಿ20 ಕ್ರಿಕೆಟ್ ಹೊರತುಪಡಿಸಿ ಏಕದಿನ ಹಾಗೂ ಟೆಸ್ಟ್ ಮಾದರಿಯಲ್ಲಿ ತಂಡವನ್ನು ಚಾಂಪಿಯನ್ ಮಾಡಿದ್ದ ಆಸ್ಟ್ರೇಲಿಯಾದ ನಾಯಕ ಪ್ಯಾಟ್ ಕಮ್ಮಿನ್ಸ್​ಗೆ ಈ ಬಾರಿಯ ಐಸಿಸಿ ವರ್ಷದ ಕ್ರಿಕೆಟಿಗ ಪ್ರಶಸ್ತಿ ಲಭಿಸಿದೆ.

2 / 8
30 ವರ್ಷದ ಪ್ಯಾಟ್ ಕಮ್ಮಿನ್ಸ್ 2023 ರಲ್ಲಿ ನಾಯಕ ಮತ್ತು ಆಟಗಾರನಾಗಿ ಉತ್ತಮ ಪ್ರದರ್ಶನ ನೀಡಿದ್ದರು. ಅವರ ನಾಯಕತ್ವದಲ್ಲಿ, ಆಸ್ಟ್ರೇಲಿಯಾ 2023 ರಲ್ಲಿ ಎರಡು ಐಸಿಸಿ ಪ್ರಶಸ್ತಿಗಳನ್ನು ಗೆದ್ದುಕೊಂಡಿತು. ಇದು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಮತ್ತು ಏಕದಿನ ವಿಶ್ವಕಪ್ ಅನ್ನು ಒಳಗೊಂಡಿತ್ತು. ಎರಡೂ ಟೂರ್ನಿಗಳ ಫೈನಲ್‌ನಲ್ಲಿ ಪ್ಯಾಟ್ ಕಮಿನ್ಸ್ ತಂಡದ ನಾಯಕತ್ವ ವಹಿಸಿದ್ದರು.

3 / 8
ಪ್ಯಾಟ್ ಕಮ್ಮಿನ್ಸ್ 2023 ರಲ್ಲಿ ಟಿ20 ಮಾದರಿಯಲ್ಲಿ ಒಂದೇ ಒಂದು ಪಂದ್ಯವನ್ನು ಆಡಲಿಲ್ಲ, ಆದರೆ ಅವರು ಏಕದಿನ ಮತ್ತು ಟೆಸ್ಟ್ ಸೇರಿದಂತೆ ಒಟ್ಟು 24 ಪಂದ್ಯಗಳಲ್ಲಿ 59 ವಿಕೆಟ್ಗಳನ್ನು ಪಡೆದರು. ಇದಲ್ಲದೆ, ಅವರು ಬ್ಯಾಟಿಂಗ್‌ನಲ್ಲೂ 422 ರನ್ ಕಲೆಹಾಕಿದ್ದರು.

4 / 8
ಪ್ಯಾಟ್ ಕಮಿನ್ಸ್ ತಮ್ಮದೇ ತಂಡದ ಟ್ರಾವಿಸ್ ಹೆಡ್ ಮತ್ತು ಭಾರತದ ಜೋಡಿ ವಿರಾಟ್ ಕೊಹ್ಲಿ ಮತ್ತು ರವೀಂದ್ರ ಜಡೇಜಾ ಅವರನ್ನು ಹಿಂದಿಕ್ಕಿ ಈ ಐಸಿಸಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.

5 / 8
2023 ರ ವಿಶ್ವಕಪ್ ಫೈನಲ್‌ನಲ್ಲಿ ಕಮ್ಮಿನ್ಸ್ ಭಾರತದ ವಿರುದ್ಧ ಅದ್ಭುತ ಪ್ರದರ್ಶನ ನೀಡಿದ್ದರು. ಸೆಮಿಫೈನಲ್ ಪಂದ್ಯದಲ್ಲಿ ಶತಕ ಸಿಡಿಸಿ ಮಿಂಚಿದ್ದ ವಿರಾಟ್ ಕೊಹ್ಲಿ ಮತ್ತು ಶ್ರೇಯಸ್ ಅಯ್ಯರ್ ಅವರ ವಿಕೆಟ್​ ಉರುಳಿಸುವಲ್ಲಿ ಕಮ್ಮಿನ್ಸ್ ಯಶಸ್ವಿಯಾಗಿದ್ದರು.

6 / 8
ಪ್ಯಾಟ್ ಕಮ್ಮಿನ್ಸ್ ಆಸ್ಟ್ರೇಲಿಯಾ ಪರ 59 ಟೆಸ್ಟ್ ಪಂದ್ಯಗಳಲ್ಲಿ 262 ವಿಕೆಟ್ಗಳನ್ನು ಪಡೆದಿದ್ದಾರೆ. ಹಾಗೆಯೇ ಏಕದಿನ ಕ್ರಿಕೆಟ್‌ನಲ್ಲಿ 88 ಪಂದ್ಯಗಳಲ್ಲಿ 141 ವಿಕೆಟ್‌ಗಳನ್ನು ಪಡೆದಿದ್ದಾರೆ.

7 / 8
ಅಂತರಾಷ್ಟ್ರೀಯ ಟಿ20ಯಲ್ಲೂ ಜಾದೂ ಮಾಡಿರುವ ಕಮ್ಮಿನ್ಸ್ 50 ಪಂದ್ಯಗಳಲ್ಲಿ 55 ವಿಕೆಟ್ ಪಡೆದಿದ್ದಾರೆ. ಕಮ್ಮಿನ್ಸ್ ಬ್ಯಾಟ್‌ನಲ್ಲೂ ಉತ್ತಮ ಪ್ರದರ್ಶನ ನೀಡಿದ್ದು, ಟೆಸ್ಟ್‌ನಲ್ಲಿ 1150 ರನ್ ಮತ್ತು ಏಕದಿನದಲ್ಲಿ 492 ರನ್ ಗಳಿಸಿದ್ದಾರೆ.

8 / 8
Follow us