- Kannada News Photo gallery Cricket photos ICC T20I Players Rankings pakistan skipper Babar Azam Climbs To Fourth Rank
ICC T20I Rankings: ಸೂರ್ಯನ ಅಧಿಪತ್ಯಕ್ಕೆ ಬಾಬರ್ ಸವಾಲು..!
ICC T20I Rankings: ಐಸಿಸಿ ನೂತನ ಟಿ20 ರ್ಯಾಂಕಿಂಗ್ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಪ್ರಕಟವಾಗಿರುವ ಪಟ್ಟಿಯಲ್ಲಿ ಪಾಕಿಸ್ತಾನ ತಂಡದ ನಾಯಕ ಬಾಬರ್ ಆಝಂಗೆ ಸಿಹಿ ಸುದ್ದಿಯೊಂದು ಸಿಕ್ಕಿದೆ. ಅದರಂತೆ ನೂತನ ರ್ಯಾಂಕಿಂಗ್ ಪಟ್ಟಿಯಲ್ಲಿ ಒಂದು ಸ್ಥಾನ ಮೇಲಿರಿರುವ ಬಾಬರ್ ನಂಬರ್ 1 ಸ್ಥಾನಕ್ಕೇರುವ ಅವಕಾಶವನ್ನು ಹೊಂದಿದ್ದಾರೆ.
Updated on: May 01, 2024 | 8:07 PM

ಐಸಿಸಿ ನೂತನ ಟಿ20 ರ್ಯಾಂಕಿಂಗ್ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಪ್ರಕಟವಾಗಿರುವ ಪಟ್ಟಿಯಲ್ಲಿ ಪಾಕಿಸ್ತಾನ ತಂಡದ ನಾಯಕ ಬಾಬರ್ ಆಝಂಗೆ ಸಿಹಿ ಸುದ್ದಿಯೊಂದು ಸಿಕ್ಕಿದೆ. ಅದರಂತೆ ನೂತನ ರ್ಯಾಂಕಿಂಗ್ ಪಟ್ಟಿಯಲ್ಲಿ ಒಂದು ಸ್ಥಾನ ಮೇಲಿರಿರುವ ಬಾಬರ್ ನಂಬರ್ 1 ಸ್ಥಾನಕ್ಕೇರುವ ಅವಕಾಶವನ್ನು ಹೊಂದಿದ್ದಾರೆ.

ಪಾಕಿಸ್ತಾನದ ನಾಯಕ ಬಾಬರ್ ಆಝಂ ಇತ್ತೀಚೆಗೆ ನ್ಯೂಜಿಲೆಂಡ್ ವಿರುದ್ಧ ಐದು ಪಂದ್ಯಗಳ ಟಿ20 ಸರಣಿಯನ್ನು ಆಡಿದ್ದರು. ಈ ಸರಣಿಯಲ್ಲಿ ಬಾಬರ್ ಪಾಕಿಸ್ತಾನದಪರ ಟಾಪ್ ಸ್ಕೋರರ್ ಆಗಿದ್ದರು. ಅಲ್ಲದೆ ಐದನೇ ಟಿ20ಯಲ್ಲಿ ಅರ್ಧಶತಕ ಕೂಡ ಬಾರಿಸಿದ್ದರು.

ಕಿವೀಸ್ ವಿರುದ್ಧ ಆಡಿದ್ದ ನಾಲ್ಕು ಇನ್ನಿಂಗ್ಸ್‌ಗಳಲ್ಲಿ ಬಾಬರ್ 125 ರನ್ ಕೂಡ ಕಲೆಹಾಕಿದ್ದರು. ಇದೀಗ ಈ ಪ್ರದರ್ಶನದಿಂದ ಲಾಭ ಪಡೆದಿರುವ ಬಾಬರ್ 1 ಸ್ಥಾನ ಮೇಲಿರಿರುವುದಲ್ಲದೆ, ಐಸಿಸಿ ಟಿ20 ಬ್ಯಾಟ್ಸ್‌ಮನ್ ಶ್ರೇಯಾಂಕದಲ್ಲಿ ಅಗ್ರಸ್ಥಾನದಲ್ಲಿರುವ ಸೂರ್ಯಕುಮಾರ್ ಯಾದವ್‌ರನ್ನು ಹಿಂದಿಕ್ಕುವ ಸನಿಹದಲ್ಲಿದ್ದಾರೆ.

ಪ್ರಸ್ತುತ ಬಾಬರ್ ಆಝಂ ಬ್ಯಾಟ್ಸ್‌ಮನ್‌ಗಳ ಟಿ20 ಶ್ರೇಯಾಂಕದಲ್ಲಿ ನಾಲ್ಕನೇ ಸ್ಥಾನಕ್ಕೇರಿದ್ದು, 10 ರೇಟಿಂಗ್ ಪಾಯಿಂಟ್ ಏರಿಕೆಯೊಂದಿಗೆ ಒಟ್ಟು 763 ರೇಟಿಂಗ್ ಪಾಯಿಂಟ್‌ಗಳನ್ನು ಸಂಪಾಧಿಸಿದ್ದಾರೆ.

ಸದ್ಯಕ್ಕೆ ನಂಬರ್ 1 ಸ್ಥಾನದಲ್ಲಿರುವ ಸೂರ್ಯಕುಮಾರ್ ಯಾದವ್, ಈಗ ಬಾಬರ್ ಆಝಂಗಿಂತ ಕೇವಲ 98 ರೇಟಿಂಗ್ ಪಾಯಿಂಟ್‌ಗಳ ಮುಂದಿದ್ದು, ಸೂರ್ಯ ಒಟ್ಟು 861 ರೇಟಿಂಗ್ ಪಾಯಿಂಟ್ಸ್ ಹೊಂದಿದ್ದಾರೆ.

ಬಾಬರ್ ಜೊತೆಗೆ ಫಖರ್ ಜಮಾನ್ ಕೂಡ ಇತ್ತೀಚಿನ ಶ್ರೇಯಾಂಕದಲ್ಲಿ ಲಾಭ ಪಡೆದಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಫಖರ್ 104 ರನ್ ಗಳಿಸಿದ್ದರು. ಈ ಮೂಲಕ 10 ಸ್ಥಾನ ಮೇಲೇರಿ ಇದೀಗ 62ನೇ ಸ್ಥಾನಕ್ಕೆ ತಲುಪಿದ್ದಾರೆ.

ನ್ಯೂಜಿಲೆಂಡ್ ಬ್ಯಾಟ್ಸ್‌ಮನ್ ಟಿಮ್ ಸೀಫರ್ಟ್ ಕೂಡ ಟಿ20 ಶ್ರೇಯಾಂಕದಲ್ಲಿ ಏರಿಕೆ ಕಂಡಿದ್ದು, ಏಳು ಸ್ಥಾನ ಜಿಗಿದು ಏಳನೇ ಸ್ಥಾನಕ್ಕೆ ತಲುಪಿದ್ದಾರೆ.

ಇನ್ನು ಪಾಕಿಸ್ತಾನದ ವೇಗದ ಬೌಲರ್ ಶಾಹೀನ್ ಅಫ್ರಿದಿ ಬೌಲರ್‌ಗಳ ರ‍್ಯಾಂಕಿಂಗ್‌ನಲ್ಲಿ ಏರಿಕೆ ಕಂಡಿದ್ದಾರೆ. ಮೂರು ಸ್ಥಾನ ಮೇಲೇರಿ 14ನೇ ಸ್ಥಾನಕ್ಕೆ ತಲುಪಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ನಾಲ್ಕು ಪಂದ್ಯಗಳಲ್ಲಿ ಶಾಹೀನ್ ಒಟ್ಟು ಎಂಟು ವಿಕೆಟ್ ಕಬಳಿಸಿದ್ದರು.




