- Kannada News Photo gallery Cricket photos ICC T20I Rankings: India go seven points clear of England at top
ICC T20I Rankings: ಪಾಕ್ಗೆ ಗೆಲುವು, ಭಾರತಕ್ಕೆ ಲಾಭ: ಹೀಗಿದೆ ಟಿ20 ತಂಡಗಳ ಹೊಸ ರ‍್ಯಾಕಿಂಗ್
ICC T20I Rankings: ಟೀಮ್ ಇಂಡಿಯಾ ವಿರುದ್ಧ ಸೋತಿರುವ ಆಸ್ಟ್ರೇಲಿಯಾ ತಂಡವು ಶ್ರೇಯಾಂಕ ಪಟ್ಟಿಯಲ್ಲಿ ಕುಸಿತ ಕಂಡಿದೆ. ಇತ್ತ ಭರ್ಜರಿ ಗೆಲುವು ದಾಖಲಿಸಿರುವ ಟೀಮ್ ಇಂಡಿಯಾ ಈ ಹಿಂದಿನ ಸ್ಥಾನವನ್ನು ಕಾಯ್ದುಕೊಂಡಿದೆ.
Updated on: Sep 26, 2022 | 2:54 PM

ಐಸಿಸಿ ನೂತನ ಟಿ20 ತಂಡಗಳ ಶ್ರೇಯಾಂಕ ಪಟ್ಟಿಯನ್ನು ಪ್ರಕಟಿಸಿದೆ. ಆಸ್ಟ್ರೇಲಿಯಾ ವಿರುದ್ಧ ಸರಣಿ ಜಯಿಸಿರುವ ಟೀಮ್ ಇಂಡಿಯಾ ಈ ಬಾರಿ ಕೂಡ ಅಗ್ರಸ್ಥಾನವನ್ನು ಕಾಯ್ದುಕೊಂಡಿದೆ.

ವಿಶೇಷ ಎಂದರೆ ಇಂಗ್ಲೆಂಡ್ ವಿರುದ್ಧ ಪಾಕಿಸ್ತಾನ್ 4ನೇ ಟಿ20 ಪಂದ್ಯವನ್ನು ಗೆದ್ದ ಪರಿಣಾಮ ಟೀಮ್ ಇಂಡಿಯಾ ಸ್ಥಾನ ಭದ್ರವಾಗಿದೆ. ಒಂದು ವೇಳೆ ಇಂಗ್ಲೆಂಡ್ ತಂಡವು ಗೆದ್ದಿದ್ದರೆ ರ್ಯಾಂಕಿಂಗ್ ಪಟ್ಟಿಯಲ್ಲಿ ಬದಲಾವಣೆಯಾಗುವ ಸಾಧ್ಯತೆಯಿತ್ತು.

ಇದೀಗ ಆಸ್ಟ್ರೇಲಿಯಾ ವಿರುದ್ಧ ಸರಣಿ ಗೆಲುವಿನೊಂದಿಗೆ ಟೀಮ್ ಇಂಡಿಯಾ ಅಗ್ರಸ್ಥಾನವನ್ನು ಕಾಯ್ದುಕೊಂಡಿದೆ. ಹಾಗಿದ್ರೆ ನೂತನ ಟಿ20 ರ್ಯಾಂಕಿಂಗ್ನಲ್ಲಿ ಯಾವ ತಂಡ ಯಾವ ಸ್ಥಾನದಲ್ಲಿದೆ ನೋಡೋಣ....

10- ಅಫ್ಘಾನಿಸ್ತಾನ್ - 219 ರೇಟಿಂಗ್

9- ಬಾಂಗ್ಲಾದೇಶ್ - 224 ರೇಟಿಂಗ್

8- ಶ್ರೀಲಂಕಾ - 237 ರೇಟಿಂಗ್

7- ವೆಸ್ಟ್ ಇಂಡೀಸ್ - 241 ರೇಟಿಂಗ್

6- ಆಸ್ಟ್ರೇಲಿಯಾ - 250 ರೇಟಿಂಗ್

5- ನ್ಯೂಜಿಲೆಂಡ್- 252 ರೇಟಿಂಗ್

4- ಪಾಕಿಸ್ತಾನ್ - 258 ರೇಟಿಂಗ್

3- ಸೌತ್ ಆಫ್ರಿಕಾ - 258 ರೇಟಿಂಗ್

2- ಇಂಗ್ಲೆಂಡ್- 261 ರೇಟಿಂಗ್

1- ಭಾರತ - 268 ರೇಟಿಂಗ್
