AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ICC Test Ranking: ಇಪ್ಪತ್ತೇಳೇ ದಿನಗಳಲ್ಲಿ ಮತ್ತೆ ನಂ.1 ಪಟ್ಟವನ್ನು ವಶಪಡಿಸಿಕೊಂಡ ಬುಮ್ರಾ

Jasprit Bumrah: ಐಸಿಸಿ ಬಿಡುಗಡೆ ಮಾಡಿರುವ ಇತ್ತೀಚಿನ ಟೆಸ್ಟ್ ಬೌಲರ್​ಗಳ ಶ್ರೇಯಾಂಕದಲ್ಲಿ, ಜಸ್ಪ್ರೀತ್ ಬುಮ್ರಾ ಇಬ್ಬರು ಬೌಲರ್‌ಗಳನ್ನು ಹಿಂದಿಕ್ಕಿ ಮತ್ತೊಮ್ಮೆ ನಂಬರ್ 1 ಪಟ್ಟವನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಪರ್ತ್ ಟೆಸ್ಟ್‌ನಲ್ಲಿ ಬುಮ್ರಾ 8 ವಿಕೆಟ್‌ಗಳನ್ನು ಕಬಳಿಸಿದ್ದಲ್ಲದೆ ಪಂದ್ಯದ ಆಟಗಾರನಾಗಿಯೂ ಆಯ್ಕೆಯಾಗಿದ್ದರು.

ಪೃಥ್ವಿಶಂಕರ
|

Updated on: Nov 27, 2024 | 4:19 PM

Share
ಟೀಂ ಇಂಡಿಯಾದ ಸ್ಟಾರ್ ಬೌಲರ್ ಜಸ್ಪ್ರೀತ್ ಬುಮ್ರಾ ಮತ್ತೊಮ್ಮೆ ವಿಶ್ವದ ನಂಬರ್ 1 ಟೆಸ್ಟ್ ಬೌಲರ್ ಎನಿಸಿಕೊಂಡಿದ್ದಾರೆ. ಬುಧವಾರ ಬಿಡುಗಡೆಯಾದ ಇತ್ತೀಚಿನ ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ, ಜಸ್ಪ್ರೀತ್ ಬುಮ್ರಾ ಇಬ್ಬರು ಬೌಲರ್‌ಗಳನ್ನು ಹಿಂದಿಕ್ಕಿ ನಂಬರ್ 1 ಪಟ್ಟವನ್ನು ಮತ್ತೊಮ್ಮೆ ವಶಪಡಿಸಿಕೊಂಡಿದ್ದಾರೆ.

1 / 6
ಇದಕ್ಕೂ ಮುನ್ನ ದಕ್ಷಿಣ ಆಫ್ರಿಕಾದ ವೇಗಿ ಕಗಿಸೊ ರಬಾಡ ಅಗ್ರಸ್ಥಾನದಲ್ಲಿದ್ದರೆ, ಆಸೀಸ್ ವೇಗಿ ಜೋಶ್ ಹ್ಯಾಜಲ್‌ವುಡ್ ಎರಡನೇ ಸ್ಥಾನದಲ್ಲಿದ್ದರು. ಆದರೆ ಪರ್ತ್‌ ಟೆಸ್ಟ್​ನಲ್ಲಿ ನೀಡಿದ ಅದ್ಭುತ ಪ್ರದರ್ಶನ ಬುಮ್ರಾರನ್ನು ನಂಬರ್ 1 ಬೌಲರ್ ಆಗಿಸಿದೆ.

2 / 6
ವಾಸ್ತವವಾಗಿ ಕಳೆದ ಅಕ್ಟೋಬರ್ 30 ರಂದು, ಜಸ್ಪ್ರೀತ್ ಬುಮ್ರಾ ತಮ್ಮ ನಂಬರ್ 1 ಪಟ್ಟವನ್ನು ರಬಾಡಗೆ ಬಿಟ್ಟುಕೊಡಬೇಕಾಯಿತು.  ಆದರೆ ಕೇವಲ 27 ದಿನಗಳಲ್ಲೇ ಬುಮ್ರಾ ಮತ್ತೊಮ್ಮೆ ನಂ.1 ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಇತ್ತೀಚಿನ ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ, ಜಸ್ಪ್ರೀತ್ ಬುಮ್ರಾ 883 ರೇಟಿಂಗ್ ಅಂಕಗಳೊಂದಿಗೆ ನಂಬರ್ 1 ಸ್ಥಾನವನ್ನು ಪಡೆದುಕೊಂಡಿದ್ದಾರೆ.

3 / 6
ಇದೀಗ ಎರಡನೇ ಸ್ಥಾನಕ್ಕೆ ಜಾರಿರುವ ದಕ್ಷಿಣ ಆಫ್ರಿಕಾದ ರಬಾಡ 872 ರೇಟಿಂಗ್ ಪಾಯಿಂಟ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಉಳಿದಂತೆ, ಜೋಶ್ ಹ್ಯಾಜಲ್‌ವುಡ್ 860 ರೇಟಿಂಗ್ ಪಾಯಿಂಟ್‌ಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ.

4 / 6
ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಬುಮ್ರಾ ತೋರಿದ ಪ್ರದರ್ಶನವನ್ನು ನೋಡಿದರೆ, ಸಧ್ಯಕ್ಕಂತೂ ಬುಮ್ರಾರನ್ನು ನಂಬರ್ 1 ಸ್ಥಾನದಿಂದ ತೆಗೆದುಹಾಕುವುದು ಕಷ್ಟಕರ ಎನ್ನಬಹುದು. ಪರ್ತ್ ಟೆಸ್ಟ್‌ನಲ್ಲಿ ಬುಮ್ರಾ ಒಟ್ಟು 8 ವಿಕೆಟ್‌ಗಳನ್ನು ಕಬಳಿಸಿದರು. ಅದರಲ್ಲಿ ಅವರು ಮೊದಲ ಇನ್ನಿಂಗ್ಸ್‌ನಲ್ಲಿಯೇ 5 ವಿಕೆಟ್‌ಗಳನ್ನು ಪಡೆದಿದ್ದರು.

5 / 6
ಹೀಗಾಗಿ ಪರ್ತ್‌ನಲ್ಲಿ ಬುಮ್ರಾ ದಾಳಿಗೆ ನಲುಗಿದ ಆಸ್ಟ್ರೇಲಿಯಾ ಕೇವಲ 150 ರನ್‌ಗಳಿಗೆ ಆಲೌಟ್ ಆಗಿತ್ತು. ಎರಡನೇ ಇನ್ನಿಂಗ್ಸ್​ನಲ್ಲೂ ಚೇತರಿಸಿಕೊಳ್ಳದ ಆಸೀಸ್ ಪಡೆ, ತನ್ನ ತವರಿನಲ್ಲೇ 295 ರನ್‌ಗಳ ಹೀನಾಯ ಸೋಲನ್ನು ಅನುಭವಿಸಬೇಕಾಯಿತು. ಈಗ ಬುಮ್ರಾ ಟೆಸ್ಟ್ ಸರಣಿಯಲ್ಲಿ ಇನ್ನೂ 4 ಪಂದ್ಯಗಳನ್ನು ಆಡಬೇಕಾಗಿದೆ. ಅವರ ಪ್ರದರ್ಶನ ಹೀಗೆಯೇ ಮುಂದುವರಿದರೆ ಯಾರೂ ಅವರನ್ನು ನಂಬರ್ 1 ಸ್ಥಾನದಿಂದ ತೆಗೆದುಹಾಕಲು ಸಾಧ್ಯವಾಗುವುದಿಲ್ಲ.

6 / 6
ಕುಡಿದು ಟೈಟ್ ಆದವರಿಗೆ ಉಚಿತವಾಗಿ ಮನೆಗೆ ತಲುಪಿಸುವ ವ್ಯವಸ್ಥೆ

ಮಾಧ್ಯಮದ ಕ್ಯಾಮೆರಾ​​​ ನೋಡುತ್ತಿದ್ದಂತೆ ಮುಖ ಮುಚ್ಚಿಕೊಂಡ ಯುವತಿ

New Year 2026 Live: ನ್ಯೂ ಇಯರ್; ರಾಜ್ಯದ ಉದ್ದಗಲಕ್ಕೂ ಸಂಭ್ರಮ ಜೋರು

ಪುಟಿನ್ ನಿವಾಸದ ಮೇಲೆ ದಾಳಿ ಮಾಡಿದ ಉಕ್ರೇನ್; ರಷ್ಯಾದಿಂದ ವಿಡಿಯೋ ಬಿಡುಗಡೆ

ಕನ್ಯಾಕುಮಾರಿಯಲ್ಲಿ 2025ರ ಕೊನೆಯ ಸೂರ್ಯಾಸ್ತದ ನೋಡಲು ಆಗಮಿಸಿದ ಜನಸಾಗರ

ನ್ಯೂಇಯರ್ ಸೆಲೆಬ್ರೇಷನ್​​​ ಮುನ್ನ ಮಳೆ ಎಂಟ್ರಿ: ಪಾರ್ಟಿ ಪ್ರಿಯರಿಗೆ ಶಾಕ್!​

ಅಭಿಮಾನಿಗಳ ಜೊತೆ ಸಿನಿಮಾ ನೋಡುತ್ತಿರುವ ಉದ್ದೇಶ ಏನು? ಸುದೀಪ್ ಉತ್ತರ

ಕಳೆದು ಹೋಗಿದ್ದ ಬಾಲಕಿಯನ್ನು ಮರಳಿ ತಾಯಿ ಮಡಿಲಿಗೆ ಸೇರಿಸಿದ ಪೊಲೀಸರು

ನನ್ನ ಮಗಳು ಸರಿಯಾಗಿಯೇ ಹೇಳಿದ್ದಾಳೆ: ಸುದೀಪ್
ನನ್ನ ಮಗಳು ಸರಿಯಾಗಿಯೇ ಹೇಳಿದ್ದಾಳೆ: ಸುದೀಪ್
ಸ್ಟ್ರೋಕ್ ಗೆ ಒಳಗಾದವರನ್ನು ಎಷ್ಟು ಸಮಯದೊಳಗೆ ಆಸ್ಪತ್ರೆಗೆ ದಾಖಲಿಸಬೇಕು?