AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ICC Test Ranking: ಆಲ್‌ರೌಂಡರ್​ಗಳ ಪಟ್ಟಿಯಲ್ಲಿ ಭಾರತೀಯರದ್ದೇ ಪಾರುಪತ್ಯ

ICC Test Ranking: ಇತ್ತೀಚೆಗೆ ಬಿಡುಗಡೆಯಾಗಿರುವ ನೂತನ ಟೆಸ್ಟ್ ಆಲ್‌ರೌಂಡರ್​ಗಳ ಪಟ್ಟಿಯಲ್ಲಿ ಭಾರತದ ಆಲ್‌ರೌಂಡರ್ಸ್​ಗಳೆ ಪಾರುಪತ್ಯ ಮೆರೆದಿದ್ದಾರೆ. ಅದರಲ್ಲೂ ಇಂಗ್ಲೆಂಡ್‌ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಸರ್ವಶ್ರೇಷ್ಠ ಪ್ರದರ್ಶನ ನೀಡುತ್ತಿರುವ ರವೀಂದ್ರ ಜಡೇಜಾ, ಆಲ್ ರೌಂಡರ್‌ಗಳ ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ಮೊದಲ ಸ್ಥಾನದಲ್ಲಿ ಮುಂದುವರಿದಿದ್ದಾರೆ.

ಪೃಥ್ವಿಶಂಕರ
|

Updated on: Feb 21, 2024 | 7:19 PM

Share
ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಐದು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಮೂರು ಪಂದ್ಯಗಳಲ್ಲಿ ಟೀಂ ಇಂಡಿಯಾ ಪರ ಅದ್ಭುತ ಪ್ರದರ್ಶನ ನೀಡಿದ ಆಟಗಾರರು ಇಂದು ಬಿಡುಗಡೆಯಾಗಿರುವ ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ಶ್ರಮಕ್ಕೆ ತಕ್ಕ ಪ್ರತಿಫಲ ಪಡೆದಿದ್ದಾರೆ.

1 / 6
ಇತ್ತೀಚೆಗೆ ಬಿಡುಗಡೆಯಾಗಿರುವ ನೂತನ ಟೆಸ್ಟ್ ಆಲ್‌ರೌಂಡರ್​ಗಳ ಪಟ್ಟಿಯಲ್ಲಿ ಭಾರತದ ಆಲ್‌ರೌಂಡರ್ಸ್​ಗಳೆ ಪಾರುಪತ್ಯ ಮೆರೆದಿದ್ದಾರೆ. ಅದರಲ್ಲೂ ಇಂಗ್ಲೆಂಡ್‌ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಸರ್ವಶ್ರೇಷ್ಠ ಪ್ರದರ್ಶನ ನೀಡುತ್ತಿರುವ ರವೀಂದ್ರ ಜಡೇಜಾ, ಆಲ್ ರೌಂಡರ್‌ಗಳ ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ಮೊದಲ ಸ್ಥಾನದಲ್ಲಿ ಮುಂದುವರಿದಿದ್ದಾರೆ.

2 / 6
ಉಳಿದಂತೆ ಈ ಪಟ್ಟಿಯಲ್ಲಿ ಅಗ್ರ ಐವರಲ್ಲಿ ಒಟ್ಟು ಮೂವರು ಭಾರತೀಯ ಆಟಗಾರರು ಸ್ಥಾನ ಪಡೆದಿದ್ದು, ಜಡೇಜಾ ಹೊರತುಪಡಿಸಿ, ಆರ್ ಅಶ್ವಿನ್ ಮತ್ತು ಅಕ್ಷರ್ ಪಟೇಲ್ ಕೂಡ ಈ ಪಟ್ಟಿಯ ಭಾಗವಾಗಿದ್ದಾರೆ. ಅಶ್ವಿನ್ 330 ರೇಟಿಂಗ್ ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದರೆ, ಅಕ್ಷರ್ ಪಟೇಲ್ 281 ರೇಟಿಂಗ್ ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದಾರೆ.

3 / 6
ಇದಕ್ಕೂ ಮೊದಲು ಅಕ್ಷರ್ ಪಟೇಲ್ ಐದನೇ ಸ್ಥಾನದಲ್ಲಿದ್ದರು. ಆದರೆ ಬೆನ್ ಸ್ಟೋಕ್ಸ್ ಅವರ ಕಳಪೆ ಪ್ರದರ್ಶನದ ಲಾಭ ಪಡೆದಿರುವ ಅಕ್ಷರ್, ಸ್ಟೋಕ್ಸ್​ರನ್ನು ಹಿಂದಕ್ಕೆ ತಳ್ಳಿ ತಾವು ಮೇಲಕ್ಕೇರಿದ್ದಾರೆ. ಹೀಗಾಗಿ ಆಲ್​ರೌಂಡರ್​ಗಳ ಪಟ್ಟಿಯಲ್ಲಿ ಭಾರತದ ಸಂಪೂರ್ಣ ಪ್ರಾಬಲ್ಯ ಗೋಚರಿಸುತ್ತಿದೆ. ಇದರಿಂದ ಟೀಂ ಇಂಡಿಯಾ ಗೆಲುವಿನಲ್ಲಿ ಆಲ್ ರೌಂಡರ್​ಗಳ ಕೊಡುಗೆ ಎಷ್ಟಿದೆ ಎಂಬುದು ಸ್ಪಷ್ಟವಾಗುತ್ತದೆ.

4 / 6
ಇಂಗ್ಲೆಂಡ್ ವಿರುದ್ಧ ಆಡಿದ ಮೂರನೇ ಟೆಸ್ಟ್ ಪಂದ್ಯದಲ್ಲಿ ರವೀಂದ್ರ ಜಡೇಜಾ ಶತಕ ಸಿಡಿಸಿದ್ದು, ಈ ಪಂದ್ಯದಲ್ಲಿ ಒಟ್ಟು 7 ವಿಕೆಟ್ ಪಡೆದಿದ್ದರು. ರಾಜ್‌ಕೋಟ್ ಟೆಸ್ಟ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ ರವೀಂದ್ರ ಜಡೇಜಾ, ಆಲ್‌ರೌಂಡರ್‌ಗಳ ರ್ಯಾಂಕಿಂಗ್‌ನಲ್ಲಿ 469 ರೇಟಿಂಗ್ ಅಂಕಗಳನ್ನು ಸಂಪಾಧಿಸಿದ್ದಾರೆ. ಇದು ಅವರ ಟೆಸ್ಟ್ ವೃತ್ತಿಜೀವನದ ಅತ್ಯುತ್ತಮ ರೇಟಿಂಗ್ ಪಾಯಿಂಟ್ ಆಗಿದೆ.

5 / 6
ಈ ಮೂವರನ್ನು ಹೊರತುಪಡಿಸಿ ಟೆಸ್ಟ್ ಆಲ್‌ರೌಂಡರ್​ಗಳ ಶ್ರೇಯಾಂಕದಲ್ಲಿ ಭಾರತದಿಂದ ಮತ್ತ್ಯಾವ ಆಟಗಾರನು ಟಾಪ್ 10ರೊಳಗೆ ಇರಲಿ, ಟಾಪ್ 35 ರೊಳಗೂ ಕಾಣಿಸಿಕೊಂಡಿಲ್ಲ. 36ನೇ ಸ್ಥಾನದಲ್ಲಿ ವೇಗಿ ಮೊಹಮ್ಮದ್ ಶಮಿ ಇದ್ದರೆ, 37ನೇ ಸ್ಥಾನದಲ್ಲಿ ಬೌಲಿಂಗ್‌ ಆಲ್‌ರೌಂಡರ್ ಶಾರ್ದೂಲ್ ಠಾಕೂರ್ ಇದ್ದಾರೆ.

6 / 6
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!

ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು

20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ

ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ

‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..

ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ

ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!

ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?

ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?