ICC Test rankings: ಶತಕ ಸಿಡಿಸಿ ಮಿಂಚಿದ್ದ ಮಯಾಂಕ್, ರ‍್ಯಾಂಕಿಂಗ್​ನಲ್ಲೂ ಶ್ರೇಷ್ಠ ಸಾಧನೆ

Edited By:

Updated on: Dec 08, 2021 | 3:25 PM

Mayank Agarwal: ಮಯಾಂಕ್ ಅಗರ್ವಾಲ್ ನ್ಯೂಜಿಲೆಂಡ್ ವಿರುದ್ದದ 2ನೇ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ 150 ರನ್ ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ 62 ರನ್ ಗಳಿಸಿದ್ದರು.

1 / 5
ಮುಂಬೈ ಟೆಸ್ಟ್‌ನಲ್ಲಿ ನ್ಯೂಜಿಲೆಂಡ್ ತಂಡವನ್ನು 372 ರನ್‌ಗಳಿಂದ ಸೋಲಿಸಿದ ಭಾರತ 1-0 ಸರಣಿಯನ್ನು ವಶಪಡಿಸಿಕೊಂಡಿತು. ತಂಡದ ಈ ಗೆಲುವಿನಲ್ಲಿ ಹಲವು ಆಟಗಾರರು ಪ್ರಮುಖ ಪಾತ್ರ ವಹಿಸಿದ್ದರು. ಅದರಲ್ಲೂ ಈ ಪಂದ್ಯದಲ್ಲಿ ಶತಕ ಹಾಗೂ ಅರ್ಧಶತಕ ಬಾರಿಸಿ ಮಿಂಚಿದ್ದ ಆರಂಭಿಕ ಆಟಗಾರ ಮಯಾಂಕ್ ಅಗರ್ವಾಲ್ ಗೆಲುವಿನ ರೂವಾರಿ ಎನಿಸಿಕೊಂಡರು. ಇದೀಗ ಈ ಪ್ರದರ್ಶನ ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ಮಯಾಂಕ್ ಶ್ರೇಷ್ಠ ರ‍್ಯಾಂಕಿಂಗ್​ ಪಡೆಯಲು ಸಹಾಯ ಮಾಡಿದೆ.

ಮುಂಬೈ ಟೆಸ್ಟ್‌ನಲ್ಲಿ ನ್ಯೂಜಿಲೆಂಡ್ ತಂಡವನ್ನು 372 ರನ್‌ಗಳಿಂದ ಸೋಲಿಸಿದ ಭಾರತ 1-0 ಸರಣಿಯನ್ನು ವಶಪಡಿಸಿಕೊಂಡಿತು. ತಂಡದ ಈ ಗೆಲುವಿನಲ್ಲಿ ಹಲವು ಆಟಗಾರರು ಪ್ರಮುಖ ಪಾತ್ರ ವಹಿಸಿದ್ದರು. ಅದರಲ್ಲೂ ಈ ಪಂದ್ಯದಲ್ಲಿ ಶತಕ ಹಾಗೂ ಅರ್ಧಶತಕ ಬಾರಿಸಿ ಮಿಂಚಿದ್ದ ಆರಂಭಿಕ ಆಟಗಾರ ಮಯಾಂಕ್ ಅಗರ್ವಾಲ್ ಗೆಲುವಿನ ರೂವಾರಿ ಎನಿಸಿಕೊಂಡರು. ಇದೀಗ ಈ ಪ್ರದರ್ಶನ ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ಮಯಾಂಕ್ ಶ್ರೇಷ್ಠ ರ‍್ಯಾಂಕಿಂಗ್​ ಪಡೆಯಲು ಸಹಾಯ ಮಾಡಿದೆ.

2 / 5

ಮಯಾಂಕ್ ಅಗರ್ವಾಲ್ ನ್ಯೂಜಿಲೆಂಡ್ ವಿರುದ್ದದ 2ನೇ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ 150 ರನ್ ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ 62 ರನ್ ಗಳಿಸಿದ್ದರು. ಈ ಮೂಲಕ 2 ಇನಿಂಗ್ಸ್​ಗಳಲ್ಲಿ 212 ರನ್ ಬಾರಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಇದೀಗ ಮಯಾಂಕ್ ಐಸಿಸಿ ಶ್ರೇಯಾಂಕದಲ್ಲಿ ಅದ್ಭುತ ಜಿಗಿತ ಕಂಡಿದ್ದಾರೆ. ಒಂದೇ ಬಾರಿಗೆ 31 ಸ್ಥಾನ ಮೇಲೇರಿ ಈ ಬಾರಿ 11ನೇ ರ‍್ಯಾಂಕ್ ಅಲಂಕರಿಸಿದ್ದಾರೆ. ಈ ಮೂಲಕ ಮತ್ತೊಮ್ಮೆ ಟಾಪ್ 10ಗೆ ಎಂಟ್ರಿ ಕೊಡುವ ಸೂಚನೆ ನೀಡಿದ್ದಾರೆ ಮಯಾಂಕ್.

3 / 5

ಮಯಾಂಕ್ ಅಗರ್ವಾಲ್ ಅವರು 2019 ರಲ್ಲಿ ಟಾಪ್ 10 ನಲ್ಲಿ ಸ್ಥಾನ ಪಡೆದಿದ್ದರು. ಟೆಸ್ಟ್​ನಲ್ಲಿ ರ‍್ಯಾಂಕಿಂಗ್​ನಲ್ಲಿ 10ನೇ ಸ್ಥಾನ ಅಲಂಕರಿಸುವ ಮೂಲಕ ಎರಡು ವರ್ಷಗಳ ಹಿಂದೆ ಟಾಪ್ 10 ನಲ್ಲಿ ಕಾಣಿಸಿಕೊಂಡಿದ್ದರು. ಇದಾದ ಬಳಿಕ ಅವರು ಟಾಪ್ 10 ರಲ್ಲಿ ಕಾಣಿಸಿಕೊಂಡಿರಲಿಲ್ಲ. ಇದೀಗ 11ನೇ ಸ್ಥಾನ ಅಲಂಕರಿಸಿದ್ದು, ಈ ಮೂಲಕ ಮತ್ತೊಮ್ಮೆ ಅಗ್ರ ಹತ್ತರಲ್ಲಿ ಕಾಣಿಸಿಕೊಳ್ಳುವ ವಿಶ್ವಾಸದಲ್ಲಿದ್ದಾರೆ ಮಯಾಂಕ್.

4 / 5

ಮಯಾಂಕ್ ಹೊರತಾಗಿ ಆರಂಭಿಕ ಆಟಗಾರ ಶುಭಮನ್ ಗಿಲ್ ಈ ಬಾರಿ ಜಿಗಿತ ಕಂಡಿದ್ದಾರೆ. ಗಿಲ್ 22 ಸ್ಥಾನಗಳನ್ನು ಮೇಲೇರಿ 46 ನೇ ಸ್ಥಾನಕ್ಕೆ ತಲುಪಿದ್ದಾರೆ. ಶುಭ್​ಮನ್ ಗಿಲ್ ಕೂಡ ನ್ಯೂಜಿಲೆಂಡ್​ ಸರಣಿಯಲ್ಲಿ ಅರ್ಧಶತಕ ಸೇರಿದಂತೆ ಒಟ್ಟು 144 ರನ್ ಗಳಿಸಿದ್ದರು.

5 / 5

ಇನ್ನು ಟಾಪ್ 10 ನಲ್ಲಿ ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ ನಂ.1 ಬ್ಯಾಟರ್ ಆಗಿ ಉಳಿದಿದ್ದಾರೆ. ಮತ್ತೊಂದೆಡೆ ಭಾರತದ ಪರ ರೋಹಿತ್ ಶರ್ಮಾ (5) ಮತ್ತು ವಿರಾಟ್ ಕೊಹ್ಲಿ (6) ತಮ್ಮ ಸ್ಥಾನ ಕಾಯ್ದುಕೊಂಡಿದ್ದಾರೆ. ನ್ಯೂಜಿಲೆಂಡ್​ ವಿರುದ್ದದ ಟೆಸ್ಟ್ ಸರಣಿಯಿಂದ ರೋಹಿತ್ ಶರ್ಮಾ ಹೊರಗುಳಿದರೂ, ಹಾಗೆಯೇ ಕೊಹ್ಲಿ ಮುಂಬೈ ಟೆಸ್ಟ್ ಮಾತ್ರ ಆಡಿದರೂ ಅವರ ಸ್ಥಾನದಲ್ಲಿ ಪಲ್ಲಟವಾಗಿಲ್ಲ ಎಂಬುದು ವಿಶೇಷ. ಮತ್ತೊಂದೆಡೆ, ಅಜಿಂಕ್ಯ ರಹಾನೆ 2 ಸ್ಥಾನ ಕುಸಿದು 28ನೇ ಸ್ಥಾನಕ್ಕೆ ಹಾಗೂ ಚೇತೇಶ್ವರ ಪೂಜಾರ 1 ಸ್ಥಾನ ಕುಸಿದು 17ನೇ ಸ್ಥಾನಕ್ಕೆ ತಲುಪಿದ್ದಾರೆ.

Loading...
Unable to load recommendations.
Follow Us