AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ICC U-19 World Cup: ಅಂಡರ್ 19 ವಿಶ್ವಕಪ್​ನಲ್ಲಿನ ಟಾಪ್ 5 ಬ್ಯಾಟರ್​ಗಳು ಯಾರು ಗೊತ್ತಾ?

Under 19 World Cup: ಬುಧವಾರ ನಡೆದ ಸೆಮಿಫೈನಲ್‌ನಲ್ಲಿ ಭಾರತವು ಆಸ್ಟ್ರೇಲಿಯಾವನ್ನು ಸೋಲಿಸಿ ಫೈನಲ್‌ಗೆ ಪ್ರವೇಶಿಸಿದರೆ, ಇಂಗ್ಲೆಂಡ್ ಅಫ್ಘಾನಿಸ್ತಾನವನ್ನು ಸೋಲಿಸಿತು. ಸೆಮಿಫೈನಲ್‌ವರೆಗಿನ ಟಾಪ್ ರನ್​ ಸರದಾರರು ಯಾರು ಎಂಬುದರ ಸಂಪೂರ್ಣ ಮಾಹಿತಿ ಈ ಕೆಳಗಿನಂತಿವೆ...

TV9 Web
| Updated By: ಝಾಹಿರ್ ಯೂಸುಫ್|

Updated on: Feb 03, 2022 | 3:34 PM

Share
ವೆಸ್ಟ್ ಇಂಡೀಸ್‌ನಲ್ಲಿ ಐಸಿಸಿ ಅಂಡರ್-19 ವಿಶ್ವಕಪ್ ನಡೆಯುತ್ತಿದೆ. ಈ ವಿಶ್ವಕಪ್‌ನ ಫೈನಲ್ ಫೆಬ್ರವರಿ 5 ರಂದು ನಡೆಯಲಿದ್ದು, ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಯಶ್ ಧುಲ್ ನಾಯಕತ್ವದ ಭಾರತ ಮತ್ತು ಇಂಗ್ಲೆಂಡ್ ತಂಡಗಳು ಸೆಣಸಲಿವೆ. ಬುಧವಾರ ನಡೆದ ಸೆಮಿಫೈನಲ್‌ನಲ್ಲಿ ಭಾರತವು ಆಸ್ಟ್ರೇಲಿಯಾವನ್ನು ಸೋಲಿಸಿ ಫೈನಲ್‌ಗೆ ಪ್ರವೇಶಿಸಿದರೆ, ಇಂಗ್ಲೆಂಡ್ ಅಫ್ಘಾನಿಸ್ತಾನವನ್ನು ಸೋಲಿಸಿತು. ಸೆಮಿಫೈನಲ್‌ವರೆಗಿನ ಟಾಪ್ ರನ್​ ಸರದಾರರು ಯಾರು ಎಂಬುದರ ಸಂಪೂರ್ಣ ಮಾಹಿತಿ ಈ ಕೆಳಗಿನಂತಿವೆ...

1 / 6
  1- ಡೆವಾಲ್ಡ್ ಬ್ರೆವಿಸ್:  ಸೆಮಿ-ಫೈನಲ್ ಪಂದ್ಯಗಳ ಅಂತ್ಯದ ವೇಳೆಗೆ, ಈ ವಿಶ್ವಕಪ್‌ನಲ್ಲಿ ಹೆಚ್ಚು ರನ್‌ಗಳ ವಿಷಯದಲ್ಲಿ ನಂಬರ್ ಒನ್ ಆಗಿರುವ ಬ್ಯಾಟ್ಸ್‌ಮನ್‌ ಡೆವಾಲ್ಡ್ ಬ್ರೆವಿಸ್. ದಕ್ಷಿಣ ಆಫ್ರಿಕಾದ ಬ್ರೆವಿಸ್ ಅವರನ್ನು ಬೇಬಿ ಡಿ ವಿಲಿಯರ್ಸ್ ಎಂದೇ ಫೇಮಸ್ ಆಗಿದ್ದಾರೆ. ದಕ್ಷಿಣ ಆಫ್ರಿಕಾ ತಂಡವು ಸೆಮಿಫೈನಲ್ ತಲುಪದಿದ್ದರೂ ಬ್ರೆವಿಸ್ ಮಾತ್ರ ಅದ್ಭುತ ಪ್ರದರ್ಶನ ನೀಡಿದ್ದರು. ಅದರಂತೆ ಡೆವಾಲ್ಡ್ ಬ್ರೆವಿಸ್ ಐದು ಪಂದ್ಯಗಳಲ್ಲಿ 73.60 ಸರಾಸರಿಯಲ್ಲಿ 368 ರನ್ ಗಳಿಸಿದ್ದಾರೆ. ಇದರಲ್ಲಿ ಒಂದು ಶತಕ ಮತ್ತು ಮೂರು ಅರ್ಧ ಶತಕಗಳು ಸೇರಿವೆ.

2 / 6
2- ಥಾಮಸ್ ಜೇಮ್ಸ್ ಪ್ರೆಸ್: ಫೈನಲ್‌ಗೆ ಪ್ರವೇಶಿಸಿದ ಇಂಗ್ಲೆಂಡ್‌ನ ಬ್ಯಾಟ್ಸ್‌ಮನ್ ಥಾಮಸ್ ಜೇಮ್ಸ್ ಪ್ರೆಸ್ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಐದು ಪಂದ್ಯಗಳನ್ನು ಆಡಿರುವ ಥಾಮಸ್ 73 ಸರಾಸರಿಯಲ್ಲಿ 292 ರನ್ ಗಳಿಸಿದ್ದಾರೆ. ಈ ವೇಳೆ ಒಂದು ಶತಕ ಹಾಗೂ ಒಂದು ಅರ್ಧಶತಕವನ್ನೂ ಕೂಡ ಬಾರಿಸಿದ್ದಾರೆ.

3 / 6
3- ಆಂಗ್ಕ್ರಿಶ್ ರಘುವಂಶಿ: ಭಾರತದ ಆಂಗ್ಕ್ರಿಶ್ ರಘುವಂಶಿ ಮೂರನೇ ಸ್ಥಾನದಲ್ಲಿದ್ದಾರೆ.  ಭಾರತವನ್ನು ಸೆಮಿಫೈನಲ್‌ಗೆ ಕೊಂಡೊಯ್ಯುವಲ್ಲಿ ಈ ಬ್ಯಾಟ್ಸ್‌ಮನ್ ಪ್ರಮುಖ ಪಾತ್ರ ವಹಿಸಿದ್ದಾರೆ.  ಆಂಗ್ಕ್ರಿಶ್ ರಘುವಂಶಿ ಐದು ಪಂದ್ಯಗಳಲ್ಲಿ 278 ರನ್ ಗಳಿಸಿದ್ದಾರೆ. ಈ ವೇಳೆ ರಘುವಂಶಿ ಬ್ಯಾಟ್‌ನಿಂದ ಶತಕ ಹಾಗೂ ಅರ್ಧ ಶತಕ ಮೂಡಿಬಂದಿವೆ.

4 / 6
4-  ಬ್ರಿಯಾನ್ ಬೆನೆಟ್: ಜಿಂಬಾಬ್ವೆಯ ಬ್ರಿಯಾನ್ ಬೆನೆಟ್ ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ.  ಆಡಿದ ಆರು ಪಂದ್ಯಗಳಲ್ಲಿ 45.50 ಸರಾಸರಿಯಲ್ಲಿ 273 ರನ್ ಗಳಿಸಿದ್ದಾರೆ. ಈ ವೇಳೆ  ಬ್ರಿಯಾನ್ ಬೆನೆಟ್  ಅವರ ಬ್ಯಾಟ್‌ನಿಂದ ಮೂರು ಅರ್ಧಶತಕಗಳು ಮೂಡಿಬಂದಿದ್ದವು.

5 / 6
5- ಟೀಗ್ ವೈಲಿ: ಆಸ್ಟ್ರೇಲಿಯಾದ ಟೀಗ್ ವೈಲಿ ಐದನೇ ಸ್ಥಾನದಲ್ಲಿದ್ದಾರೆ. ಐದು ಪಂದ್ಯಗಳನ್ನು ಆಡಿರುವ ವೈಲಿ ಒಟ್ಟು 265 ರನ್ ಗಳಿಸಿದ್ದಾರೆ. ಈ ವೇಳೆ ಎರಡು ಅರ್ಧ ಶತಕ ಮತ್ತು ಒಂದು ಶತಕ ಕೂಡ ಬಾರಿಸಿದ್ದರು.

6 / 6